ತುಮಕೂರು : ತುಮಕೂರು ಜಿಲ್ಲೆಯಲ್ಲಿ ಘೋರವಾದಂತ ದುರಂತ ಸಂಭವಿಸಿದ್ದು ತೆಂಗಿನಕಾಯಿ ಫ್ಯಾಕ್ಟರಿ ಎಲ್ಲಿ ನೀರಿನ ತ್ಯಾಜ್ಯ ಇರುವ ಗುಂಡಿಗೆ ಎರಡು ವರ್ಷದ ಮಗು ಬಿದ್ದು ಸಾವನ್ನಪ್ಪಿರುವ ದುರಂತ ಘಟನೆ ತುಮಕೂರು ಜಿಲ್ಲೆ ತಿಪಟೂರು ತಾಲೂಕಿನ ಮೀಸೆತಿಮ್ಮನಹಳ್ಳಿ ಬಳಿ ಇರುವ ಮಾನ್ಯಶ್ರೀ ಕೋಕನೆಟ್ ಫ್ಯಾಕ್ಟರಿಯಲ್ಲಿ ನಡೆದಿದೆ.
ಮೃತ ಮಗುವನ್ನು ಕುಸುಮ ಕುಮಾರಿ (2) ಎಂದು ತಿಳಿದುಬಂದಿದೆ. ಈಕೆಯು ಬಿಹಾರ ಮೂಲದ ತಂದೆ ಹರೀಂದ್ರಕುಮಾರ್ ಮತ್ತು ತಾಯಿ ರೀನಾದೇವಿ ಮಗಳು ಎಂದು ತಿಳಿದುಬಂದಿದೆ. ಬುಧವಾರ 2 ಗಂಟೆ ಸುಮಾರಿಗೆ ಆಟವಾಡುತ್ತಿದ್ದ ಮಗು ಕಾಣದೇ ಇದ್ದಾಗ ಪೋಷಕರು ಹುಡುಕಾಟ ನಡೆಸಿದ್ದಾ.
ಈ ಸಂದರ್ಭ ಗುಂಡಿ ಒಳಗೆ ಬಿದ್ದಿರುವುದನ್ನು ಗಮನಿಸಿ ಮಗುವನ್ನು ಮೇಲೆ ಎತ್ತಲಾಗಿದೆ. ನಂತರ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮಾರ್ಗಮಧ್ಯದಲ್ಲೇ ಕೊನೆಯುಸಿರೆಳೆದಿದೆ. ಘಟನೆ ಸಂಬಂಧ ಹೊನ್ನವಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.