ಕೆಎನ್ಎನ್ ಡಿಜಿಟಲ್ ಡೆಸ್ಕ್ : ಹಿಂದೂಗಳ ಸಂಪ್ರದಾಯದಲ್ಲಿ ತುಳಸಿಗೆ ಪವಿತ್ರವಾದ ಸ್ಥಾನವಿಎ. ಇದನ್ನನ ದೇವರೆಂದು ಪೂಜಿಸಲಾಗುತ್ತಿದೆ. ಇದರಲ್ಲಿ ಅನೇಕ ಆರೋಗ್ಯ ಪ್ರಯೋಜನಗಳಿವೆ.
‘ದೈವ ನರ್ತಕರಿಗೆ ಸರ್ಕಾರ ಮಾಸಾಶನ ನೀಡಬಾರದಿತ್ತು’ ಎಂಬ ಬಿ.ಟಿ ಲಲಿತಾ ನಾಯಕ್ ಹೇಳಿಕೆಗೆ ಯು.ಟಿ ಖಾದರ್ ತಿರುಗೇಟು
ತುಳಸಿಯನ್ನು ಚಳಿಗಾಲದಲ್ಲಿ ಉಂಟಾಗುವ ಗಂಟಲು ನೋವು, ಶೀತ ಮತ್ತು ಕೆಮ್ಮು ನಿವಾರಣೆಗೆ ಸೇವನೆ ಮಾಡ್ತಾರೆ. ಇತ್ತೀಚಿನ ದಿನಗಳಲ್ಲಿ ಕೊರೊನಾ ನಂತರದ ದಿನಗಳಲ್ಲಿ ತುಳಸಿ ಪ್ರಭಾವ ಮತ್ತು ಪ್ರಾಮುಖ್ಯತೆ ಮತ್ತಷ್ಟು ಹೆಚ್ಚಿದೆ. ಇದು ಕೇಲವ ದಹದ ಆರೋಗ್ಯ ಮಾತ್ರವಲ್ಲ ತ್ವಜೆ ಹಾಗೂ ಕೂದಲಿನ ಆರೋಗ್ಯಕ್ಕೂ ಪ್ರಯೋಜನಕಾರಿಯಾಗಿದೆ.
ಕೂದಲು ,ತ್ವಚೆಯ ಆರೈಕೆಗೆ ತುಳಸಿ ಬಳಕೆ
ತುಳಸಿ ನಿಮ್ಮ ಚರ್ಮದ ಆರೋಗ್ಯ ಕಾಪಾಡಲು ಅದ್ಭುತ ಲಾಭ ನೀಡುತ್ತದೆ. ಹಾಗೆಯೇ ಇದು ನಿಮ್ಮ ಕೂದಲಿಗೆ ಹೊಸ ಹೊಳಪನ್ನು ನೀಡುತ್ತದೆ. ತುಳಸಿಯನ್ನು ನಿಮ್ಮ ಸೌಂದರ್ಯ ಪದ್ಧತಿ ಮತ್ತು ದಿನಚರಿಯಲ್ಲಿ ಬಳಕೆ ಮಾಡಬಹುದು. ತುಳಸಿಯಲ್ಲಿ ವಿಟಮಿನ್ ಕೆ ಸಮೃದ್ಧವಾಗಿದೆ.
ಇದು ಉರಿಯೂತದ, ಬ್ಯಾಕ್ಟೀರಿಯಾ ವಿರೋಧಿ, ಉತ್ಕರ್ಷಣ ನಿರೋಧಕ ಮತ್ತು ಆಂಟಿಫಂಗಲ್ ಗುಣಲಕ್ಷಣ ಹೊಂದಿದೆ. ಹಾಗೂ ಇದು ನಿಮ್ಮ ಚರ್ಮ ಮತ್ತು ಕೂದಲಿಗೆ ಪ್ರಯೋಜನಕಾರಿ ಆಗಿದೆ. ಹಾಗಾದ್ರೆ ತುಳಸಿ ನಿಮ್ಮ ಚರ್ಮ ಮತ್ತು ಕೂದಲಿಗೆ ಹೇಗೆ ಪ್ರಯೋಜನಕಾರಿ ಎಂದು ತಿಳಿಯೋಣ.
ತುಳಸಿ ಚರ್ಮಕ್ಕೆ ಹೇಗೆ ಪ್ರಯೋಜನಕಾರಿ?
ತುಳಸಿ ಬಳಕೆ ಚರ್ಮದ ವಯಸ್ಸಾಗುವಿಕೆ ಪ್ರಕ್ರಿಯೆ ನಿಧಾನ ಮಾಡುತ್ತದೆ. ತುಳಸಿ ವಯಸ್ಸಾದ ವಿರೋಧಿ ಗುಣ ಹೊಂದಿದೆ. ಈ ಪದಾರ್ಥಗಳು ಚರ್ಮವನ್ನು ವಯಸ್ಸಾಗದಂತೆ ರಕ್ಷಿಸುತ್ತದೆ. ಮತ್ತು ಚರ್ಮದ ಗೆರೆ ದೂರ ಮಾಡುತ್ತದೆ.
ಮೊಡವೆ ನಿವಾರಣೆ
ಮುಖದ ಕಲೆ ಮತ್ತು ಮೊಡವೆ ತೆಗೆದು ಹಾಕಲು ತುಳಸಿಯನ್ನು ಮುಖಕ್ಕೆ ಬಳಕೆ ಮಾಡಬಹುದು. ಇದು ಬ್ಯಾಕ್ಟೀರಿಯಾ ವಿರೋಧಿ ಪೋಷಕಾಂಶ ಹೊಂದಿದ್ದು, ಮುಖದ ಅನಗತ್ಯ ಮೊಡವೆ ತೆಗೆದು ಹಾಕುತ್ತದೆ.
ಚರ್ಮದ ಆರೈಕೆಗೆ ತುಳಸಿ ಬಳಸುವ ವಿಧಾನ
ಸ್ವಲ್ಪ ತುಳಸಿ ಎಲೆಗಳನ್ನು ತೆಗೆದುಕೊಂಡು ಪೇಸ್ಟ್ ಮಾಡಿ. ನಂತರ, ಅರ್ಧ ಟೀಚಮಚ ಮೊಸರು ಹಾಕಿ ಮಿಶ್ರಣ ಮಾಡಿ. ಅದನ್ನು ನಿಮ್ಮ ಮುಖದ ಮೇಲೆ ಹಚ್ಚಿ. ಅದು ಒಣಗುವವರೆಗೆ ಬಿಡಿ. ಮತ್ತು ನಂತರ ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ. ಇದು ನಿಮ್ಮ ಮುಖದಲ್ಲಿ ತ್ವರಿತ ಹೊಳಪು ನೀಡುತ್ತದೆ.
ತುಳಸಿ ಕೂದಲಿಗೆ ಹೇಗೆ ಪ್ರಯೋಜನಕಾರಿ?
ತುಳಸಿ ತಲೆ ಹೊಟ್ಟು ನಿವಾರಿಸಲು ಸಹಾಯ ಮಾಡುತ್ತದೆ. ತಜ್ಞರ ಪ್ರಕಾರ, ತುಳಸಿಯಲ್ಲಿ ಉತ್ತಮ ಪ್ರಮಾಣದ ವಿಟಮಿನ್ ಸಿ ಇದೆ. ಇದು ತಲೆ ಹೊಟ್ಟು ಸಮಸ್ಯೆಯಿಂದ ಕೂದಲನ್ನು ರಕ್ಷಿಸುತ್ತದೆ. ಕೂದಲಿನಿಂದ ತಲೆ ಹೊಟ್ಟು ತೆಗೆದು ಹಾಕಲು ತುಳಸಿಯನ್ನು ಕೂದಲಿಗೆ ಅನ್ವಯಿಸಿ. ಇದು ಬ್ಯಾಕ್ಟೀರಿಯಾ ವಿರೋಧಿ, ಆಂಟಿ ಡ್ಯಾಂಡ್ರಫ್ ಗುಣಲಕ್ಷಣ ಹೊಂದಿದೆ.
ತುಳಸಿ ಕೂದಲನ್ನು ಬಲಪಡಿಸಲು ಮತ್ತು ಕೂದಲು ಉದುರುವಿಕೆ ತಡೆಯುತ್ತದೆ. ವಯಸ್ಸಾದ ವಿರೋಧಿ ಕೂದಲಿನ ಆರೋಗ್ಯ ಕಾಪಾಡುತ್ತದೆ. ತುರಿಕೆ ನಿವಾರಿಸುತ್ತದೆ. ಕೂದಲಿಗೆ ತುಳಸಿ ಸಾರ ಅಥವಾ ತುಳಸಿ ಎಣ್ಣೆ ಜೊತೆ ಬೆಚ್ಚಗಿನ ತೆಂಗಿನ ಎಣ್ಣೆ ಸೇರಿಸಿ, ಕೂದಲಿಗೆ ಮಸಾಜ್ ಮಾಡಿ. ಬೆಳಿಗ್ಗೆ ಅದನ್ನು ತೊಳೆಯಿರಿ.
BIGG UPDATE : ಪೋಕ್ಸೋ ಕೇಸ್ : ‘ಪುರುಷತ್ವ ಪರೀಕ್ಷೆ’ಯಲ್ಲಿ ಮುರುಘಾ ಶ್ರೀಗಳು ಪಾಸ್ ; ಲೈಂಗಿಕವಾಗಿ ಸಮರ್ಥರು..!