ಕೆಎನ್ ಎನ್ ನ್ಯೂಸ್ ಡೆಸ್ಕ್ :ಮದುವೆ ಆದ್ಮೇಲೆ ಗಂಡ- ಹೆಂಡತಿ ಹೊಂದಾಣಿಕೆ ಮಾಡಿಕೊಂಡು ಜೀವನ ಮಾಡಬೇಕು. ಅದರಲ್ಲೂ ಇವರಿಬ್ಬರ ನುಡುವೆ ಸಣ್ಣ ಪುಟ್ಟ ಜಗಳವಾಗುತ್ತದೆ.ಇದರಿಂದ ಅವರು ಮತ್ತಷ್ಟು ಪ್ರೀತಿಯಿಂದ ಇರುತ್ತಾರೆ.
ಹಾಗಂತ ಜಗಳವನ್ನು ಬಗೆಹರಿಸದೆ ಹಾಗೆಯೇ ಮುಂದುವರಿಸಿದರೆ ಸಂಬಂಧ ಹದಗೆಡುವುದು. ಪತಿ ಪತ್ನಿಯರು ಇಬ್ಬರಲ್ಲಿ ಯಾರು ಮುನಿಸಿಕೊಂಡರೂ ಮತ್ತೊಬ್ಬರು ಅವರನ್ನು ಸಮಾಧಾನ ಮಾಡಬೇಕು. ಇದು ತುಂಬಾ ಜನ ಪುರುಷರಿಗೆ ಗೊತ್ತಿರುವುದಿಲ್ಲ. ಹೀಗಾಗಿ ಕೋಪಿಸಿಕೊಂಡ ಪತ್ನಿಯನ್ನು ಹೇಗೆ ಸಮಾಧಾನ ಪಡಿಸಬೇಕು ಎಂದು ತಿಳಿದುಕೊಳ್ಳೊಣ
ಕ್ಷಮೆ ಕೇಳಿ: ತಪ್ಪು ಯಾರದೇ ಆಗಿದ್ದರೂ ಮೊದಲು ನಾವು ಮಾಡುವಂತಹದು ಅವರಿಗೆ ಕ್ಷಮೆ ಕೇಳಬೇಕು. ಈಗ ಹೆಂಡತಿಗೆ ಗಂಡ ಮನಸ್ಸು ನೋಯಿಸಿದ್ದರೆ ಕ್ಷಮೆ ಕೇಳಬೇಕು. ಆಗಾ ಅವರು ಸರಿ ಹೋಗುತ್ತಾರೆ.
ಹೆಂಡತಿಯನ್ನು ಶಾಂತವಾಗಿರಲು ಬಿಡಿ: ಯಾವುದೇ ವಿಷ್ಯಕ್ಕೆ ಹೆಂಡತಿ ನಡುವೆ ಜಗಳವಾಡಿದ್ರು, ಸಮಾಧಾನ ಪಡಿಸುವುದಕ್ಕೆ ಆಕೆಯನ್ನು ಶಾಂತವಾಗಿರಲು ಸ್ವಲ್ಪ ಸಮಯ ನೀಡಿ.
ನೀವೇ ಅಡುಗೆ ಮಾಡಿ:ಹೆಂಡತಿಯ ಮನವೊಲಿಸಲು ಇನ್ನೊಂದು ಉತ್ತಮ ಉಪಾಯವೆಂದರೆ ಆಕೆಗೆ ನಿಮ್ಮ ಕೈಯಾರೆ ಅಡುಗೆ ಮಾಡಿ ಬಡಿಸಿ. ಮನೆಯಲ್ಲಿ ಹೆಂಡತಿ ಯಾವಾಗಲೂ ನಿಮಗೆ ಅಡುಗೆ ಮಾಡಿಕೊಡುತ್ತಾರೆ. ಆದರೆ ಆಕೆಯನ್ನು ಮನವೊಲಿಸಲು ನೀವೇ ಅಡುಗೆ ಮಾಡಿ.
ದೈಹಿಕ ಸಂಬಂಧ: ಮ್ಮ ದೈಹಿಕ ಸಂಬಂಧವನ್ನು ತಾಜಾವಾಗಿರಿಸಿಕೊಳ್ಳುವ ಮೂಲಕ ನೀವು ಹೆಂಡತಿಯ ಅಸಮಾಧಾನ ಪಡಿಸಲು ಹೋಗಬೇಡಿ.
ಶಾಪಿಂಗ್ ಮಾಡಿಸಿ: ಮಹಿಳೆಯರಿಗೆ ಶಾಪಿಂಗ್ ಮಾಡುವುದೆಂದರೆ ಬಲು ಇಷ್ಟ. ತಮ್ಮ ವಾರ್ಡ್ ರೋಬ್ ನಲ್ಲಿ ಎಷ್ಟೇ ಬಟ್ಟೆ ಇದ್ದರೂ ಮತ್ತಷ್ಟು ಶಾಪಿಂಗ್ ಮಾಡಬೇಕೆಂಬ ಹಂಬಲ ಆಕೆಗಿರುತ್ತದೆ.