ಅಯೋಧ್ಯ : ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಅಯೋಧ್ಯೆಯ ಶ್ರೀರಾಮ ಮಂದಿರದ ಕೆಲವು ಚಿತ್ರಗಳನ್ನ ಹಂಚಿಕೊಂಡಿದೆ. ಈ ಮೂಲಕ ಶ್ರೀರಾಮ ಜನ್ಮಭೂಮಿ ದೇವಸ್ಥಾನದ ಉದ್ದೇಶಿತ ಗರ್ಭಗುಡಿ ಹೇಗಿರುತ್ತದೆ ಅನ್ನೋದನ್ನ ನೋಡಬಹುದು. ದೇಗುಲ ನಿರ್ಮಾಣ ಕಾರ್ಯ ಅತ್ಯಂತ ವೇಗವಾಗಿ ನಡೆಯುತ್ತಿದ್ದು, ಸ್ತಂಭ ಮತ್ತು ತಡೆಗೋಡೆ ನಿರ್ಮಾಣ ಕಾಮಗಾರಿ ಅಂತಿಮ ಹಂತದಲ್ಲಿದೆ. 2024ರ ವೇಳೆಗೆ ದೇವಾಲಯದ ಗರ್ಭಗುಡಿಯಲ್ಲಿ ರಾಮಲಲ್ಲಾ ಪ್ರತಿಷ್ಠಾಪನೆ ಮಾಡುವ ಯೋಜನೆ ಇದೆ.
ಕುತೂಹಲಕ್ಕೆ ವಿರಾಮ.!
ದೇವಸ್ಥಾನದಲ್ಲಿ ಯಾವ ಸ್ಥಳದಲ್ಲಿ ಗರ್ಭಗುಡಿ ಸ್ಥಾಪನೆಯಾಗುತ್ತದೆ ಎಂದು ನೋಡಲು ಕಾಯುತ್ತಿದ್ದರು. ಆದರೆ, ಇದೀಗ ದೇವಸ್ಥಾನದ ಟ್ರಸ್ಟ್ ಭಕ್ತರ ಈ ಕುತೂಹಲಕ್ಕೆ ತೆರೆ ಎಳೆದಿದ್ದು, ರಾಮಲಲ್ಲಾ ಪ್ರತಿಷ್ಠಾಪನೆಗೊಳ್ಳಲಿರುವ ದೇವಾಲಯದಲ್ಲಿ ಉದ್ದೇಶಿತ ಗರ್ಭಗುಡಿಯ ಕೆಲವು ಚಿತ್ರಗಳನ್ನ ಹಂಚಿಕೊಂಡಿದ್ದಾರೆ.
Shri Ram Janmbhoomi Teerth Kshetra shares some pictures from the proposed Garbha Gruha of Shri Ram Janmbhoomi Mandir in Ayodhya, Uttar Pradesh. pic.twitter.com/BJgxbs3QdU
— ANI UP/Uttarakhand (@ANINewsUP) August 26, 2022
40ರಷ್ಟು ಕೆಲಸ ಮುಗಿದಿದೆ.!
40ರಷ್ಟು ಮಂದಿರ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದೆ. 2024ರಲ್ಲಿ ಮಕರ ಸಂಕ್ರಾಂತಿಯಂದು ರಾಮಲಲ್ಲಾರನ್ನ ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸಬೇಕು ಎಂಬುದು ದೇವಸ್ಥಾನದ ಟ್ರಸ್ಟ್ನ ಪ್ರಯತ್ನವಾಗಿದೆ. ರಾಮಮಂದಿರದ ಪ್ರದಕ್ಷಿಣೆ ಪಥವು ಒಂದು ಕಿಲೋಮೀಟರ್ ಉದ್ದವಿರುತ್ತದೆ. ಇನ್ನು ಕೆಲವೇ ತಿಂಗಳಲ್ಲಿ ಪ್ರದಕ್ಷಿಣಾ ಪಥ ನಿರ್ಮಾಣ ಕಾಮಗಾರಿಯೂ ಆರಂಭವಾಗಲಿದೆ.
ನಿರಂತರ ಕೆಲಸ.!
ದೇಗುಲ ನಿರ್ಮಾಣಕ್ಕೆ ಹಗಲಿರುಳು ನಿರಂತರವಾಗಿ ಕೆಲಸ ನಡೆಯುತ್ತಿದೆ. ಕುಶಲಕರ್ಮಿಗಳ ಜತೆಗೆ ಕೂಲಿಕಾರರ ಸಂಖ್ಯೆಯೂ ಹೆಚ್ಚಿದೆ. ಭವ್ಯ ಮಂದಿರ ನಿರ್ಮಾಣಕ್ಕೆ ಬೆಂಗಳೂರು ಮತ್ತು ರಾಜಸ್ಥಾನದಿಂದ ಗ್ರಾನೈಟ್ಗಳು ಬರುತ್ತಿವೆ. ಗರ್ಭಗುಡಿ ಮತ್ತಿತರ ಕಡೆಗಳಲ್ಲಿ ಗುಲಾಬಿ ಬಣ್ಣದ ಮರಳು ಕಲ್ಲು ಅಳವಡಿಸಲಾಗುತ್ತಿದೆ.