ನವದೆಹಲಿ:ಅಮೆರಿಕದ ಆರ್ಥಿಕತೆಯನ್ನು ಬಲಪಡಿಸಲು ಮತ್ತು ಸ್ಥಳೀಯ ಉತ್ಪಾದನೆಗೆ ಉತ್ತೇಜನ ನೀಡಲು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೊಂದು ಕಠಿಣ ಕ್ರಮ ಕೈಗೊಂಡಿದ್ದಾರೆ. ವಿದೇಶಗಳಿಂದ ಅಮೆರಿಕಕ್ಕೆ ಆಮದು ಮಾಡಿಕೊಳ್ಳಲಾಗುವ ‘ಪೇಟೆಂಟ್’ ಹೊಂದಿರುವ ಔಷಧಗಳ (Patented Drugs) ಮೇಲೆ ಬರೋಬ್ಬರಿ ಶೇ. 100ರಷ್ಟು ಆಮದು ಸುಂಕವನ್ನು ಹೇರಿದ್ದಾರೆ. ಇದರ ಜೊತೆಗೆ ಸ್ಟೀಲ್ ಮತ್ತು ಅಲ್ಯೂಮಿನಿಯಂನಂತಹ ಲೋಹಗಳ ಮೇಲಿನ ಸುಂಕವನ್ನೂ ಪರಿಷ್ಕರಿಸಲಾಗಿದೆ.
ಪೇಟೆಂಟ್ ಪಡೆದ ಔಷಧಗಳ ಮೇಲೆ ಶೇ. 100ರಷ್ಟು ಸುಂಕ ವಿಧಿಸಿರುವುದರಿಂದ, ಅಮೆರಿಕಕ್ಕೆ ಔಷಧ ರಫ್ತು ಮಾಡುವ ಜಾಗತಿಕ ಕಂಪನಿಗಳಿಗೆ ದೊಡ್ಡ ಹೊಡೆತ ಬಿದ್ದಿದೆ. ಅಮೆರಿಕದಲ್ಲಿ ಇಂತಹ ಔಷಧಗಳ ಬೆಲೆ ದುಪ್ಪಟ್ಟಾಗುವ ಸಾಧ್ಯತೆಯಿದೆ.
ಅಮೆರಿಕದ ಉಕ್ಕಿನ ಉದ್ಯಮವನ್ನು ರಕ್ಷಿಸಲು ಲೋಹಗಳ ಆಮದು ಸುಂಕವನ್ನು (Metal Duties) ಟ್ರಂಪ್ ಪರಿಷ್ಕರಿಸಿದ್ದಾರೆ. ಇದು ಜಾಗತಿಕ ಲೋಹದ ಮಾರುಕಟ್ಟೆಯಲ್ಲಿ ಬೆಲೆ ಏರಿಳಿತಕ್ಕೆ ಕಾರಣವಾಗಿದೆ.
’ಅಮೆರಿಕ ಫಸ್ಟ್’ ನೀತಿ: “ನಮ್ಮ ದೇಶಕ್ಕೆ ಬರುವ ವಿದೇಶಿ ಕಂಪನಿಗಳು ಇಲ್ಲಿಯೇ ಉತ್ಪಾದನೆ ಮಾಡಬೇಕು, ಇಲ್ಲದಿದ್ದರೆ ಭಾರಿ ದಂಡ ತೆರಬೇಕಾಗುತ್ತದೆ” ಎಂಬ ಟ್ರಂಪ್ ಅವರ ಕಟ್ಟುನಿಟ್ಟಿನ ಸಂದೇಶ ಈ ನಿರ್ಧಾರದ ಹಿಂದಿದೆ.
ಭಾರತವು ಅಮೆರಿಕಕ್ಕೆ ಔಷಧಗಳನ್ನು ರಫ್ತು ಮಾಡುವ ಪ್ರಮುಖ ದೇಶಗಳಲ್ಲಿ ಒಂದಾಗಿದೆ. ಈ ಹೊಸ ಸುಂಕದಿಂದಾಗಿ ಭಾರತದ ಔಷಧ ಕಂಪನಿಗಳ ಲಾಭಾಂಶದ ಮೇಲೆ ಮತ್ತು ರಫ್ತು ಪ್ರಮಾಣದ ಮೇಲೆ ಪರಿಣಾಮ ಬೀರಬಹುದು.








