ಟೆಹ್ರಾನ್: ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಭೀತಿ ಮತ್ತು ಇರಾನ್‌ನ ಕಟ್ಟುನಿಟ್ಟಿನ ಕಣ್ಗಾವಲಿನ ನಡುವೆಯೇ, ಅಮೆರಿಕದ ಸೇನೆ ಮತ್ತೊಂದು ಜಯ ಸಾಧಿಸಿದೆ. ಇರಾನ್ ಭೂಪ್ರದೇಶದಲ್ಲಿ ಪತನಗೊಂಡಿದ್ದ ಎಫ್-15ಇ (F-15E) ಯುದ್ಧ ವಿಮಾನದ ಎರಡನೇ ಪೈಲಟ್‌ನನ್ನು ಅತ್ಯಂತ ‘ಸಾಹಸಮಯ’ (Daring Rescue) ಕಾರ್ಯಾಚರಣೆಯ ಮೂಲಕ ರಕ್ಷಿಸಲಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಧಿಕೃತವಾಗಿ ಘೋಷಿಸಿದ್ದಾರೆ.
ಈ ಮೊದಲು ಒಬ್ಬ ಪೈಲಟ್ ಪತ್ತೆಯಾಗಿದ್ದರು. ಈಗ ವಿಮಾನದಲ್ಲಿದ್ದ ಎರಡನೇ ಕ್ರೂ ಸದಸ್ಯರನ್ನೂ ಯಶಸ್ವಿಯಾಗಿ ಹೊರತರುವ ಮೂಲಕ ಇಡೀ ತಂಡವನ್ನು ಸುರಕ್ಷಿತವಾಗಿ ಮನೆಗೆ ಕರೆತಂದಂತಾಗಿದೆ.ಶತ್ರು ರಾಷ್ಟ್ರದ ಭೂಪ್ರದೇಶದೊಳಗೆ ಹೋಗಿ ಪೈಲಟ್ ಅನ್ನು ರಕ್ಷಿಸುವುದು ಅತ್ಯಂತ ಸವಾಲಿನ ಕೆಲಸವಾಗಿತ್ತು. ಅಮೆರಿಕದ ವಿಶೇಷ ಪಡೆಗಳು ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಈ ಕಾರ್ಯಾಚರಣೆ ನಡೆಸಿವೆ ಎಂದು ವರದಿಯಾಗಿದೆ.
“ನಮ್ಮ ವೀರ ಸೈನಿಕರು ಅಸಾಧ್ಯವಾದುದನ್ನು ಸಾಧಿಸಿದ್ದಾರೆ. ಎರಡನೇ ಪೈಲಟ್ ಕೂಡ ಈಗ ನಮ್ಮವರ ಜೊತೆಗಿದ್ದಾರೆ. ಅಮೆರಿಕದ ಶಕ್ತಿಯನ್ನು ಯಾರೂ ಹಗುರವಾಗಿ ಪರಿಗಣಿಸಬಾರದು” ಎಂದು ಟ್ರಂಪ್ ಗುಡುಗಿದ್ದಾರೆ.








