ಅಗರ್ತಲಾ : ಅಪ್ರಾಪ್ತ ಬಾಲಕನೋರ್ವ ಕುಟುಂಬದ ನಾಲ್ವರನ್ನು ಕೊಡಲಿಯಿಂದ ಹೊಡೆದು ತ್ಯ ಮಾಡಿರುವ ಘೋರ ಘಟನೆ ತ್ರಿಪುರಾದ ಧಲೈ ಜಿಲ್ಲೆಯ ದೂರದ ಹಳ್ಳಿಯೊಂದರಲ್ಲಿ ನಡೆದಿದೆ,. ಘಟನೆ ಸಂಬಂಧ ಪೊಲೀಸರು ಬಾಲಕನನ್ನು ಬಂಧಿಸಿದ್ದಾರೆ.
ಶನಿವಾರ ತಡರಾತ್ರಿ ಮಲಗಿದ್ದಾಗ ಅಜ್ಜ, ತಾಯಿ, ಅಕ್ಕ ಮತ್ತು ಚಿಕ್ಕಮ್ಮನನ್ನು ಕೊಡಲಿಯಿಂದ ಹೊಡೆದು ಆರೋಪಿ ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಯನ್ನು ಭಾನುವಾರ ಬೆಳಗ್ಗೆ ಸಮೀಪದ ಮಾರುಕಟ್ಟೆಯಿಂದ ಬಂಧಿಸಲಾಗಿದೆ ಎಂದು ಧಲೈ ಹಿರಿಯ ಪೊಲೀಸ್ ಅಧಿಕಾರಿ ಡಾ ರಮೇಶ್ ಚಂದ್ರ ಯಾದವ್ ತಿಳಿಸಿದ್ದಾರೆ.
ಅಪ್ರಾಪ್ತ ಬಾಲಕನೊಬ್ಬ ತನ್ನ ಕುಟುಂಬದ ನಾಲ್ವರನ್ನು ಕೊಂದಿದ್ದಾನೆ. ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಆರೋಪಿಯನ್ನು ಬಂಧಿಸಲಾಗಿದೆ. ಅಪರಾಧದ ಉದ್ದೇಶವನ್ನು ಖಚಿತಪಡಿಸಿಕೊಳ್ಳಲು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ತ್ರಿಪುರಾ ಪೊಲೀಸರು ತಿಳಿಸಿದ್ದಾರೆ. ಹೇಳಿಕೆ.
ಪೊಲೀಸರ ಪ್ರಕಾರ, ಬಾಲಕನ ತಂದೆ ಮನೆಗೆ ಬಂದು ನೋಡಿದಾಗ ರಕ್ತ ಎಲ್ಲೆಂದರಲ್ಲಿ ಚಿಮ್ಮಿದ್ದು, ಶವಗಳನ್ನು ಬಾವಿಗೆ ಎಸೆದಿದ್ದನು ಎನ್ನಲಾಗುತ್ತಿದೆ.
ಆರೋಪಿ ದೂರದರ್ಶನಕ್ಕೆ ವ್ಯಸನಿಯಾಗಿದ್ದು, ವಿಶೇಷವಾಗಿ ಅಪರಾಧ ತನಿಖಾ ಕಾರ್ಯಕ್ರಮಗಳನ್ನು ಹೆಚ್ಚಾಗಿ ವೀಕ್ಷಿಸುತ್ತಿದ್ದನಂಎ. ಈ ಹಿಮದೆ ತನ್ನ ಮನಯಲ್ಲಿಯೇ ಕಳ್ಳತನ ಮಾಡಿ ಸಿಕ್ಕಿ ಬಿದ್ದದ್ದನು ಎಂದು ಸ್ಥಳೀಯರು ಹೇಳಿದ್ದಾರೆ.
ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಭೀಕರ ಹತ್ಯೆಯ ಹಿಂದಿನ ಉದ್ದೇಶವನ್ನು ತಿಳಿಯಲು ತನಿಖೆ ಕೈಗೊಳ್ಳಲಾಗದೆ ಎಂದು ತಿಳಿದುಬಂದಿದೆ.