Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING: ಭಾರತದ ಮೇಲೆ ಮತ್ತೆ ಪಾಕಿಸ್ತಾನ ಡ್ರೋನ್ ದಾಳಿ: ಜಮ್ಮು ನಗರದಾದ್ಯಂತ ಸಂಪೂರ್ಣ ಬ್ಲ್ಯಾಕ್ ಔಟ್

09/05/2025 8:52 PM

ರಾಜ್ಯದ CRP, BRP, ECO ಹುದ್ದೆಗೆ ನೇಮಕಾತಿಯಲ್ಲಿ ಮಹತ್ವದ ಬದಲಾವಣೆ

09/05/2025 8:47 PM

ಕತ್ತಲಾಗುತ್ತಿದ್ದ ಹಾಗೇ ಮತ್ತೆ ಭಾರತದತ್ತ ದಾಳಿ ಶುರು ಮಾಡಿದ ಪಾಕ್‌, ಭಾರತೀಯ ಸೇನೆಯಿಂದ ಪ್ರತ್ಯುತ್ತರ…!

09/05/2025 8:47 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS: ಜ.26ರಂದು ಬೆಂಗಳೂರಲ್ಲಿ ಅತಿ ಎತ್ತರದ ‘ರಾಷ್ಟ್ರಧ್ವಜ ಸ್ಥಂಭ’ದಲ್ಲಿ ಹಾರಡಲಿದೆ ‘ತ್ರಿವರ್ಣ ಧ್ವಜ’
KARNATAKA

BIG NEWS: ಜ.26ರಂದು ಬೆಂಗಳೂರಲ್ಲಿ ಅತಿ ಎತ್ತರದ ‘ರಾಷ್ಟ್ರಧ್ವಜ ಸ್ಥಂಭ’ದಲ್ಲಿ ಹಾರಡಲಿದೆ ‘ತ್ರಿವರ್ಣ ಧ್ವಜ’

By kannadanewsnow0924/01/2024 2:44 PM

ಬೆಂಗಳೂರು : ಉದ್ಯಾನ ನಗರಿ ಬೆಂಗಳೂರಿನ ವಿಜಯನಗರ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯ ಚಂದ್ರಾ ಬಡಾವಣೆಯಲ್ಲಿ ಇದೇ ಜನವರಿ 26 ರ ಗಣರಾಜ್ಯೋತ್ಸವ ದಿನದಿಂದ ಅತೀ ಎತ್ತರದ ರಾಷ್ಟ್ರಧ್ವಜ ಸ್ಥಂಭದಲ್ಲಿ ತ್ರಿವರ್ಣ ಧ್ವಜ ಹಾರಾಡಲಿದೆ.

ಕರ್ನಾಟಕ ಉಚ್ಛ ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರು ಅಂದು ಬೆಳಿಗ್ಗೆ 8-30 ಗಂಟೆಗೆ ಚಂದ್ರಾ ಬಡಾವಣೆಯ ಉದ್ಯಾನದಲ್ಲಿ ಈ ಬಾನೆತ್ತರದ ರಾಷ್ಟ್ರಧ್ವಜ ಸ್ಥಂಭವನ್ನು ಲೋಕಾರ್ಪಣೆ ಮಾಡಿ, ಪ್ರಪ್ರಥಮ ಬಾರಿಗೆ ರಾಷ್ಟ್ರದ ತ್ರಿವರ್ಣ ಧ್ವಜಾರೋಹಣವನ್ನು ನೆರವೇರಿಸಲಿದ್ದಾರೆ.

ಸಂವಿಧಾನದ ಆಶಯಗಳಾದ ದೇಶ ಪ್ರೇಮ, ದೇಶ ಭಕ್ತಿ, ಸೋದರತೆ ಮತ್ತು ಸಾಮರಸ್ಯವನ್ನು ಉಳಿಸಿ ಬೆಳೆಸಲು ಪ್ರೇರಣೆ ಮತ್ತು ಸ್ಫೂರ್ತಿ ನೀಡುವ ಈ ಸಮಾರಂಭದಲ್ಲಿ ವಿಜಯನಗರ ಶಾಸಕ ಎಂ ಕೃಷ್ಣಪ್ಪ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಗೋವಿಂದರಾಜನಗರ ಶಾಸಕ ಪ್ರಿಯಾ ಕೃಷ್ಣ ಅವರೂ ಸೇರಿದಂತೆ ಹಲವು ಗಣ್ಯರು ಈ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.

ಸಮಾರಂಭದ ಪ್ರಾರಂಭಕ್ಕೆ ಮುನ್ನ, ಬೆಳಿಗ್ಗೆ 7-30 ಗಂಟೆಗೆ, ವಿವಿಧ ಕಲಾ ತಂಡಗಳಿಂದ ಸಾಂಸ್ಕøತಿಕ ಕಾರ್ಯಕ್ರಮಗಳು ಹಾಗೂ ವಾದ್ಯಗೋಷ್ಠಿ-ಸಹಿತವಾಗಿ ಶಾಲಾ-ಕಾಲೇಜು ವಿದ್ಯಾರ್ಥಿಗಳಿಂದ ಪಥ ಸಂಚಲನ ನಡೆಯಲಿವೆ.

ಸಮಾರಂಭದ ನಂತರ, ಬೆಳಿಗ್ಗೆ 10-00 ಗಂಟೆಗೆ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ನಾಡಫ್ರಭು ವಾಣಿಜ್ಯ ಸಂಕೀರ್ಣ ಆವರಣದಲ್ಲಿ ರಕ್ತದಾನ ಶಿಬಿರ ಹಾಗೂ ಅರ್ಬುದ ರೋಗ ( ಕ್ಯಾನ್ಸರ್ ) ಉಚಿತ ತಪಾಸಣಾ ಶಿಬರವನ್ನೂ ಆಯೋಜಿಸಲಾಗಿದೆ.

ಸಂಜೆ 6-30 ಗಂಟೆಗೆ ಸುಪ್ರಸಿದ್ಧ ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ ಅವರ ನೇತೃತ್ವದಲ್ಲಿ ಹೆಸರಾಂತ ಗಾಯಕಿ ಶಮಿತಾ ಮಲ್ನಾಡ್ ತಂಡದವರು ರಾಷ್ಟ್ರ ನಮನ ಸಂಗೀತ ಸಂಜೆ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ. ಅಲ್ಲದೆ, ಇದೇ ಸಂದರ್ಭದಲ್ಲಿ, ಲೇಸರ್ ಷೋ ಪ್ರದರ್ಶನವನ್ನೂ ಆಯೋಜಿಸಲಾಗಿದೆ.

ಧ್ವಜಸ್ಥಂಭದ ವೈಶಿಷ್ಠ್ಯಗಳು

ಸ್ಥಳೀಯ ಶಾಸಕ ಎಂ ಕೃಷ್ಣಪ್ಪ ಅವರ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ ಒಂದು ಕೋಟಿ ರೂ ವೆಚ್ಚದಲ್ಲಿ ಗಣರಾಜ್ಯೋತ್ಸವ ಅಮೃತ ಮಹೋತ್ಸವದ ಸಂಸ್ಮರಣೆಯಲ್ಲಿ ನಿರ್ಮಿಸಿರುವ 215 ಅಡಿ ಎತ್ತರದ ಈ ರಾಷ್ಟ್ರಧ್ವಜಸ್ಥಂಭವು ಪ್ರಸ್ತುತ ರಾಜಭವನದ ಹಿಂಬದಿ ರಸ್ತೆಯ ರಾಷ್ಟ್ರೀಯ ಸೇನಾ ವಸ್ತು ಸಂಗ್ರಹಾಲಯ ಆವರಣದಲ್ಲಿರುವ 213 ಅಡಿ ಧ್ವಜಸ್ಥಂಭಕ್ಕಿತಲೂ ಎರಡು ಅಡಿ ಹೆಚ್ಚು ಎತ್ತರದ್ದಾಗಿದೆ. ಹತ್ತೊಂಬತ್ತು ಟನ್ ತೂಕವಿರುವ ಕಂಬದ ಮೇಲ್ಭಾಗದಲ್ಲಿ ಐದು ಅಡಿಯ ಅಶೋಕ ಲಾಂಛನವಿದೆ.

ಈ ಲಾಂಛನದಲ್ಲಿನ ನಾಲ್ಕು ಸಿಂಹಗಳು ಕೇವಲ ವಿಜಯನಗರ ವಿಧಾನಸಭಾ ಕ್ಷೇತ್ರದ ನಿವಾಸಿಗಳಿಗೆ ಮಾತ್ರವಲ್ಲ, ನೆರೆಯ ವಿಧಾನಸಭಾ ಕ್ಷೇತ್ರಗಳ ನಿವಾಸಿಗಳಿಗೂ ಕಾಣುವುದು ಈ ಧ್ವಜಸ್ಠಂಭದ ಮತ್ತೊಂದು ವಿಶೇಷ ಆಕರ್ಷಣೆಯಾಗಿದೆ. ಈ ಧ್ವಜಸ್ಥಂಭದಲ್ಲಿ ರಾಷ್ಟ್ರಧ್ವಜವನ್ನು ಕೈಯಿಂದಲೂ ಹಾಗೂ ಯಾಂತ್ರಿಕವಾಗಿಯೂ ಏರಿಸಲು ಹಾಗೂ ಇಳಿಸಲು ಅವಕಾಶವನ್ನು ಕಲ್ಪಿಸಲಾಗಿದೆ. ಧ್ವಜಸ್ಥಂಭದ ಸುತ್ತ ನಿರ್ಮಿಸಿರುವ ಹುಲ್ಲು ಹಾಸು ಹಾಗೂ ವೈಭವೋಪೇತ ಕಲ್ಲು ಮೆಟ್ಟಿಲುಗಳು ಈ ಧ್ವಜಸ್ಥಂಭಕ್ಕೆ ವಿಶಿಷ್ಠ ಮೆರುಗು ನೀಡಲಿದೆ ಎಂದು ವಿಜಯನಗರದ ಯುವ ಮುಖಂಡ ಪ್ರದೀಪ್ ಕೃಷ್ಣ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Shocking News: ಬೆಂಗಳೂರಲ್ಲಿ ಕುಡಿದ ಮತ್ತಿನಲ್ಲೇ ‘ಶಾಲಾ ವಾಹನ’ ಚಾಲನೆ: 16 ಚಾಲಕರ ವಿರುದ್ಧ ಕೇಸ್

BIG NEWS: ರಾಜ್ಯದ ‘ರೈತ’ರಿಗೆ ಗುಡ್ ನ್ಯೂಸ್: ವಾರದೊಳಗೆ ‘ಬರ ಪರಿಹಾರ’ದ ಮೊದಲ ಕಂತು ಬಿಡುಗಡೆ- ಸಿಎಂ ಸಿದ್ಧರಾಮಯ್ಯ

Share. Facebook Twitter LinkedIn WhatsApp Email

Related Posts

ರಾಜ್ಯದ CRP, BRP, ECO ಹುದ್ದೆಗೆ ನೇಮಕಾತಿಯಲ್ಲಿ ಮಹತ್ವದ ಬದಲಾವಣೆ

09/05/2025 8:47 PM1 Min Read

ಹಾಸನ: ಡಿಪ್ಲೋಮಾ ಪ್ರವೇಶಕ್ಕೆ ಅರ್ಜಿ ಆಹ್ವಾನ

09/05/2025 8:40 PM1 Min Read
Hassan Potato sowing seed sale begins

ಹಾಸನ: ಆಲೂಗೆಡ್ಡೆ ಬಿತ್ತನೆ ಬೀಜ ಮಾರಾಟಕ್ಕೆ ಚಾಲನೆ

09/05/2025 8:38 PM1 Min Read
Recent News

BREAKING: ಭಾರತದ ಮೇಲೆ ಮತ್ತೆ ಪಾಕಿಸ್ತಾನ ಡ್ರೋನ್ ದಾಳಿ: ಜಮ್ಮು ನಗರದಾದ್ಯಂತ ಸಂಪೂರ್ಣ ಬ್ಲ್ಯಾಕ್ ಔಟ್

09/05/2025 8:52 PM

ರಾಜ್ಯದ CRP, BRP, ECO ಹುದ್ದೆಗೆ ನೇಮಕಾತಿಯಲ್ಲಿ ಮಹತ್ವದ ಬದಲಾವಣೆ

09/05/2025 8:47 PM

ಕತ್ತಲಾಗುತ್ತಿದ್ದ ಹಾಗೇ ಮತ್ತೆ ಭಾರತದತ್ತ ದಾಳಿ ಶುರು ಮಾಡಿದ ಪಾಕ್‌, ಭಾರತೀಯ ಸೇನೆಯಿಂದ ಪ್ರತ್ಯುತ್ತರ…!

09/05/2025 8:47 PM

ಹಾಸನ: ಡಿಪ್ಲೋಮಾ ಪ್ರವೇಶಕ್ಕೆ ಅರ್ಜಿ ಆಹ್ವಾನ

09/05/2025 8:40 PM
State News
KARNATAKA

ರಾಜ್ಯದ CRP, BRP, ECO ಹುದ್ದೆಗೆ ನೇಮಕಾತಿಯಲ್ಲಿ ಮಹತ್ವದ ಬದಲಾವಣೆ

By kannadanewsnow0909/05/2025 8:47 PM KARNATAKA 1 Min Read

ಬೆಂಗಳೂರು: CRP/BRP/E.C.O ನಿರ್ದಿಷ್ಟ ಪಡಿಸಿದ ಹುದ್ದೆಗಳಿಗೆ ಕೆಲವು ಅಂಶಗಳನ್ನು ಸೇರ್ಪಡೆಗೊಳಿಸಿ ಆದೇಶಿಸಲಾಗಿದೆ. ಈ ಮೂಲಕ ಸಿಆರ್ ಪಿ, ಬಿ ಆರ್…

ಹಾಸನ: ಡಿಪ್ಲೋಮಾ ಪ್ರವೇಶಕ್ಕೆ ಅರ್ಜಿ ಆಹ್ವಾನ

09/05/2025 8:40 PM
Hassan Potato sowing seed sale begins

ಹಾಸನ: ಆಲೂಗೆಡ್ಡೆ ಬಿತ್ತನೆ ಬೀಜ ಮಾರಾಟಕ್ಕೆ ಚಾಲನೆ

09/05/2025 8:38 PM

BREAKING: ಸಾಮಾಜಿಕ ಸಮೀಕ್ಷಾ ವರದಿ ನಿರ್ಣಯ ಮುಂದೂಡಿಕೆ: ರಾಜ್ಯ ಸಚಿವ ಸಂಪುಟದ ನಿರ್ಣಯ

09/05/2025 8:38 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.