ಚಿತ್ರದುರ್ಗ: ಕೂಡಲ ಸಂಗಮದ ಬಸವ ಧರ್ಮ ಪೀಠ ಮತ್ತು ರಾಷ್ಟ್ರೀಯ ಬಸವ ದಳ ಚಿತ್ರದುರ್ಗ ನಗರದ ಬಸವ ಮಂಟಪದಲ್ಲಿ ಹಮ್ಮಿಕೊಂಡಿದ್ದ ಬಸವ ಜಯಂತಿ ಸಂದರ್ಭದಲ್ಲಿ ವಿಶೇಷವಾಗಿ ಕೊಡಮಾಡುವ ಪ್ರತಿಷ್ಠಿತ “ಬಸವ ಸೇವಾ ರತ್ನ ಪ್ರಶಸ್ತಿ” ಯನ್ನು ಕರ್ನಾಟಕ ರಾಜ್ಯ ಶಿಕ್ಷಣ ಪರಿಷತ್ತು ಅಧ್ಯಕ್ಷರೂ ಹಾಗೂ ಬುಡಕಟ್ಟು ಜಾನಪದ ಸಂಶೋಧಕರಾದ ಮಾಲತೇಶ್ ಅರಸ್ ಅವರಿಗೆ ಪ್ರದಾನ ಮಾಡಲಾಯಿತು.
ಸವಿತಾ ಸಮಾಜದವರಿಂದ ಧ್ವಜಾರೋಹಣ, ಮಡಿವಾಳ ಸಮಾಜದವರಿಂದ ಉದ್ಘಾಟನೆ, ಸರ್ವ ಶರಣೆಯರಿಂದ ತೊಟ್ಟಿಲು ಪೂಜೆ, ಮುಸಲ್ಮಾನ ಧರ್ಮದ ಶಬ್ರಿನಾ ಮಹಮದ್ ಅವರ ಅದ್ಭುತ ಉಪನ್ಯಾಸ, ವಚನ ಚಿಂತನೆ, ಪುಟಾಣಿ ಮಕ್ಕಳ ವಚನ ನೃತ್ಯ ನಡೆಯಿತು.
ಸಾಧಕರಾದ ಟಿ.ರುದ್ರಮುನಿ, ನಾಗರಾಜ್ ಸಂಗಮ್, ಡಾ.ಶರತ್ ಬಾಬು, ತಿಪ್ಪೇಸ್ವಾಮಿ ಅವರೂ ಪ್ರಶಸ್ತಿಗೆ ಭಾಜನರಾದರು. ಈ ಸಂದರ್ಭದಲ್ಲಿ ದಾನೇಶ್ವರಿ ಮಾತಾಜಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
BREAKING: ಗ್ರಾಹಕರಿಗೆ ಬಿಗ್ ಶಾಕ್: ಅಮುಲ್ ಹಾಲಿನ ದರ ಪ್ರತಿ ಲೀಟರ್‌ಗೆ 2 ರೂ ಹೆಚ್ಚಳ | Amul Milk Price Hike
BBMPಯ ನೂತನ ಮುಖ್ಯ ಆಯುಕ್ತರಾಗಿ ಮಹೇಶ್ವರ ರಾವ್, ಆಡಳಿತಗಾರಾಗಿ ತುಷಾರ್ ಗಿರಿನಾಥ್ ಅಧಿಕಾರ ಸ್ವೀಕಾರ