ವಿಜಯಪುರ: ಜಿಲ್ಲೆಯಲ್ಲಿ ನಿನ್ನೆ ರಾತ್ರಿಯಿಂದ ಸತತವಾಗಿ ಎರಡು ಬಾರಿ ಭೂಕಂಪನವಾಗಿದೆ. ನಸುಕಿನ ಜಾವ ಭಾರೀ ಸದ್ದಿನೊಂದಿಗೆ ಭೂಮಿ ನಡುಗಿದೆ. ಹೀಗಾಗಿ ಜನರು ಮತ್ತೆ ಬೆಚ್ಚಿಬಿದ್ದಿದ್ದಾರೆ.
BREAKING NEWS: ಬೆಳಗಾವಿಯಲ್ಲಿ ಮತ್ತೆ ಎಂಇಎಸ್ ಪುಂಡಾಟ; ನ.1 ರಂದು ಕರಾಳ ದಿನ ಆಚರಿಸಲು ಸಿದ್ಧತೆ
ಬೆಳಗಾವಿ ಜಾನ 4.40 ರ ಸುಮಾರಿಗೆ ಭೂಕಂಪನ ಸಂಭವಿಸಿದೆ. 5 ಗಂಟೆಯಲ್ಲಿ ಎರಡು ಬಾರಿ ಕಂಪಿಸಿದ್ದು, 2.8 ರಿಕ್ಟರ್ ತೀವ್ರತೆಯಲ್ಲಿ ದಾಖಲಾಗಿದೆ. ನಸುಕಿನ ಜಾವ ಭೂಮಿ ನಡುಗಿದ ಪರಿಣಾಮ ಜನತೆ ಬೆಚ್ಚಿ ಮನೆಯಿಂದ ಹೊರಗೆ ಬಂದಿದ್ದಾರೆ.ಬಸವನ ಬಾಗೇವಾಡಿ ತಾ. ಮನಗೂಳಿ ಗ್ರಾಮ ಮೊದಲ ಭೂಕಂಪನ ಹಾಗೂ ವಿಜಯಪುರ ತಾ. ಹಂಚಿನಾಳ ಗ್ರಾಮ ಎರಡನೇ ಭೂಕಂಪನ ವಾಗಿದೆ. ಇನ್ನು ಕಳೆದ ಮೂರು ತಿಂಗಳಗಳಲ್ಲಿ ಅನೇಕ ಬಾರಿ ಭೂಮಿ ಕಂಪಿಸಿತ್ತು. ಇದರಿಂದ ಗ್ರಾಮಸ್ಥರು ಭಯಭೀತರಾಗಿದ್ದರು. ಇದೀಗ ಮತ್ತೆ ಭೂಮಿ ಕಂಪಿಸಿದ್ದು, ಆತಂಕ ಕಾರಣವಾಗಿದೆ.