Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಜಪಾನ್ ಸಾರ್ವತ್ರಿಕ ಚುನಾವಣೆ ಆರಂಭ: ಪ್ರಧಾನಿ ಸನಾ ಟಕೈಚಿ ಭವಿಷ್ಯ ನಿರ್ಧರಿಸಲಿದ್ದಾರೆ ಮತದಾರರು!

08/02/2026 7:30 AM

‘ದೇಶದ ಹಿತಾಸಕ್ತಿಯೇ ನಮಗೆ ಮುಖ್ಯ’: ರಷ್ಯಾ ತೈಲ ಖರೀದಿ ಬಗ್ಗೆ ಭಾರತದ ಖಡಕ್ ನಿಲುವು !

08/02/2026 7:22 AM

ನೀವು ರಕ್ತ ನೀಡಿದ ಮೇಲೆ ದೇಹದಲ್ಲಿ ಏನಾಗುತ್ತದೆ ಗೊತ್ತಾ? ಇಲ್ಲಿದೆ ಅಚ್ಚರಿಯ ಮಾಹಿತಿ !

08/02/2026 7:15 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಬೆಂಗಳೂರು : 18ನೇ ‘NFIRTW’ ರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ
KARNATAKA

ಬೆಂಗಳೂರು : 18ನೇ ‘NFIRTW’ ರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ

By kannadanewsnow0524/09/2024 4:09 PM

ಬೆಂಗಳೂರು : ಬೆಂಗಳೂರಿನಲ್ಲಿ ಇಂದು 18ನೇ NFIRTW ರಾಷ್ಟ್ರೀಯ ಸಮ್ಮೇಳನ ಆಯೋಜನೆ ಮಾಡಲಾಗಿತ್ತು ಈ ಒಂದು ಸಮ್ಮೇಳನವನ್ನು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಉದ್ಘಾಟಿಸಿದರು.

ಸಮ್ಮೇಳನವನ್ನು ಉದ್ಘಾಟಿಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, ಸೈನಿಕರು ಮೃತಪಟ್ಟರೂ 60 ಲಕ್ಷ ಮಾತ್ರ ಸಿಗುತ್ತದೆ. ನಮ್ಮ ಸಾರಿಗೆ ನಿಗಮಗಳ ನೌಕರರು ಅಪಘಾತದಲ್ಲಿ ಮೃತಪಟ್ಟರೆ 1 ಕೋಟಿವಿಮೆ ಸಿಗುವಂತೆ ಮಾಡಿದ್ದೇವೆ. ಅಪಘಾತವಲ್ಲದ ಕಾರಣಕ್ಕೆ ಮೃತಪಟ್ಟರೆ ರೂ. 10 ಲಕ್ಷ . ಅಪಘಾತದಲ್ಲಿ ಪ್ರಯಾಣಿಕರು ಮೃತಪಟ್ಟರೆ 10 ಲಕ್ಷ ಪರಿಹಾರ ನೀಡಲಾಗುತ್ತಿದೆ. ನೌಕರರ ಹೃದಯ ತಪಾಸಣೆ, ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಸಾರಿಗೆ ನಿಗಮಗಳ ಬಸ್ಸುಗಳು ದಿನಕ್ಕೆ 1.65 ಲಕ್ಷ ಟ್ರಿಪ್ ಮಾಡುತ್ತವೆ. ವಿರೋಧ ಪಕ್ಷದವರು ಅಧಿಕಾರದಲ್ಲಿ ಇರುವಾಗ ಹೊಸ ಬಸ್ ಖರೀದಿ ಮಾಡಲಿಲ್ಲ. ಖಾಲಿ ಹುದ್ದೆಗಳನ್ನು ಭರ್ತಿ ಮಾಡಲಿಲ್ಲ ಎಂದು ಟೀಕಿಸಿದರು. ನಿಗಮದ ನೌಕರರ ಬೇಡಿಕೆಗಳನ್ನು
ಈಡೇರಿಸಲಾಗುವುದು. ಅಲ್ಲದೇ ವಾಣಿಜ್ಯ ಸಾರಿಗೆ ನಡೆಸುವ ಟ್ಯಾಕ್ಸಿ, ಆಟೊ ಸಹಿತ ಖಾಸಗಿ ವಾಹನಗಳ ನೌಕರರ ಬೇಡಿಕೆಗಳಿಗೆ ಸ್ಪಂದಿಸಲಾಗುವುದು ಎಂದು ಈ ಸಂದರ್ಭದಲ್ಲಿ ಭರವಸೆ ನೀಡಿದರು.

ರಾಜ್ಯದಲ್ಲಿ ನಿಗಮಗಳ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತವಾಗಿ ಪ್ರಯಾಣಿಸಲು ಅವಕಾಶ ನೀಡಿರುವ ‘ಶಕ್ತಿ’ ಯೋಜನೆ ದೇಶದ ಎಲ್ಲ ರಾಜ್ಯ- ಗಳಲ್ಲಿಯೂ ಜಾರಿಗೆ ಬರಬೇಕು. ಅದಕ್ಕಾಗಿ ಸಾರಿಗೆ ನೌಕರರ ರಾಷ್ಟ್ರೀಯ ಸಂಘಟನೆ ಆಯಾ ರಾಜ್ಯಗಳಲ್ಲಿ ಹೋರಾಟ ನಡೆಸಲಿದೆ . ಎಲ್ಲಾ ರಾಜ್ಯಗಳಿಗೂ ಶಕ್ತಿ ಬರಲಿ ಎಂದು ಎನ್‌- ಫ್‌ಐಆರ್‌ಟಡಬ್ಬು ಅಧ್ಯಕ್ಷ ಎಚ್‌.ವಿ. ಅನಂತ ಸುಬ್ಬರಾವ್‌ ತಿಳಿಸಿದರು.

ನ್ಯಾಷನಲ್ ಫೆಡರೇಷನ್ ‌ ಆಫ್ ‌ ಇಂಡಿಯನ್ ರೋಡ್ ಟ್ರಾನ್ಸ್‌ಪೋರ್ಟ್ ವರ್ಕಸ್್ರ (ಎನ್‌ಎಫ್‌ಐಆರ್ಟಿಡಬ್ಲ್ಯೂ) 18ನೇ ರಾಷ್ಟ್ರೀಯ ಸಮ್ಮೇಳನದ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು.ನಾಲ್ಕು ನಿಗಮಗಳ ಬಸ್‌ಗಳಲ್ಲಿ ನಿತ್ಯ ಸರಾಸರಿ 625 ಲಕ್ಷ ಮಹಿಳೆಯರು ಸಂಚರಿಸುತ್ತಿದ್ದಾರೆ. ಕರ್ನಾಟಕದಲ್ಲಿ ಯಶಸ್ವಿಯಾದ ಯೋಜನೆಯನ್ನು ಬೇರೆ ರಾಜ್ಯಗಳಲ್ಲಿ ಏಕೆ ಅನುಷ್ಠಾನಗೊಳಿಸಬಾರದು ಎಂದು ಪ್ರಶ್ನಿಸಿದರು.

ನಿಗಮಗಳ ಖಾಸಗೀಕರಣಕ್ಕೆ ಕೇಂದ್ರ ಯತ್ನ

“ಎಲೆಕ್ಟಿಕ್ ಬಸ್‌ಗೆ ಗೆ 2 ಕೋಟಿ ಇದೆ. ಫೇಮ್ ಯೋಜನೆ ರೂಪಿಸಿರುವ ಕೇಂದ್ರ ಸರ್ಕಾರವು ಈ ಬಸ್‌ಗಳ ಖರೀದಿಗೆ 45 ಲಕ್ಷ ಸಹಾಯಧನ ನೀಡುತ್ತಿದೆ. ಆದರೆ, ಈ ಸಹಾಯಧನವನ್ನು ನಿಗಮಗಳಿಗೆ ನೀಡದೇ ಖಾಸಗಿಯವರಿಗೆ ಮಾತ್ರ ನೀಡುವ ಮೂಲಕ ಖಾಸಗೀಕರಣಕ್ಕೆ ಮುಂದಾಗಿದೆ’ ಎಂದು ಎಚ್.ವಿ.ಅನಂತ ಸುಬ್ಬರಾವ್ ಆರೋಪಿಸಿದರು.

‘ಲಕ್ಷಾಂತರ ಜನರಿಗೆ ಸಾರಿಗೆ ನಿಗಮಗಳು ಉದ್ಯೋಗ ನೀಡಿವೆ. ಕಾರ್ಮಿಕರ ಹಿತವನ್ನು ಕಾಪಾಡಿಕೊಂಡು ಬಂದಿವೆ. ಅವುಗಳನ್ನು ಖಾಸಗೀಕರಣಗೊಳಿಸಲು ರಸ್ತೆ ಸಾರಿಗೆ ಸುರಕ್ಷತಾ ಮಸೂದೆಯನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ 2014ರಲ್ಲಿಯೇ ರೂಪಿಸಿತ್ತು. ಹೋರಾಟದ ಮೂಲಕ ಆಗ ಹಿಮ್ಮೆಟ್ಟಿಸಿದ್ದೆವು. ಈಗ ಫೇಮ್ ಯೋಜನೆಯ ಮೂಲಕ ಬೇರೆ ದಾರಿಯಲ್ಲಿ ಖಾಸಗೀಕರಣಕ್ಕೆ ಮುಂದಾಗಿದೆ. ಇದರ ವಿರುದ್ಧ ಹೋರಾಟ ನಡೆಸಲಾಗುವುದು’ ಎಂದರು.

ಎನ್‌ಎಫ್‌ಐಆರ್‌ಟಿಡಬ್ಲ್ಯು, 18ನೇ ರಾಷ್ಟ್ರೀಯ ಬಹಿರಂಗ ಸಮಾವೇಶದಲ್ಲಿ ಕೆಎಸ್‌ಆರ್‌ಟಿಸಿ ಸ್ಟಾಫ್‌ ಆ್ಯಂಡ್‌ ವರ್ಕಸ್‌್ರ ಫೆಡರೇಷನ್‌ ಪ್ರಧಾನ ಕಾರ್ಯದರ್ಶಿ ವಿಜಯ್ ಭಾಸ್ಕರ್ ಡಿ.ಎ. ಎಐಟಿಯುಸಿ ಪ್ರಧಾನ ಕಾರ್ಯದರ್ಶಿ ಅಮರಜೀತ್‌ ಕೌ‌ರ್, ಎನ್‌ಎಫ್‌ಐಆರ್‌ಟಿಡಬ್ಲ್ಯು, ಉಪಾಧ್ಯಕ್ಷ ಎಂ.ಎಲ್.ಯಾದವ್‌ ಭಾಗವಹಿಸಿದ್ದರು

Share. Facebook Twitter LinkedIn WhatsApp Email

Related Posts

ಭಾರತದ 10 ಅತ್ಯಂತ ಭ್ರಷ್ಟ ಇಲಾಖೆಗಳ ಪಟ್ಟಿ ಬಹಿರಂಗ : 8 ನೇ ಇಲಾಖೆಯ ಬಗ್ಗೆ ತಿಳಿದರೆ ನಿಮಗೆ ಆಶ್ಚರ್ಯವಾಗುತ್ತದೆ.!

08/02/2026 7:09 AM2 Mins Read

ರಾಜ್ಯದ ರೈತರಿಗೆ ಗುಡ್ ನ್ಯೂಸ್ : `ಜಮೀನು ದಾರಿ’ ಕಲ್ಪಿಸಿಕೊಡಲು ತಹಶೀಲ್ದಾರ್ ಗಳಿಗೆ ವಿಶೇಷ ಅಧಿಕಾರ.!

08/02/2026 6:56 AM4 Mins Read

Property Rules : `ಆಸ್ತಿ ರಿಜಿಸ್ಟರ್​’ಗೆ ಇನ್ಮುಂದೆ ಈ 5 ದಾಖಲೆಗಳು ಕಡ್ಡಾಯ.!

08/02/2026 6:48 AM2 Mins Read
Recent News

ಜಪಾನ್ ಸಾರ್ವತ್ರಿಕ ಚುನಾವಣೆ ಆರಂಭ: ಪ್ರಧಾನಿ ಸನಾ ಟಕೈಚಿ ಭವಿಷ್ಯ ನಿರ್ಧರಿಸಲಿದ್ದಾರೆ ಮತದಾರರು!

08/02/2026 7:30 AM

‘ದೇಶದ ಹಿತಾಸಕ್ತಿಯೇ ನಮಗೆ ಮುಖ್ಯ’: ರಷ್ಯಾ ತೈಲ ಖರೀದಿ ಬಗ್ಗೆ ಭಾರತದ ಖಡಕ್ ನಿಲುವು !

08/02/2026 7:22 AM

ನೀವು ರಕ್ತ ನೀಡಿದ ಮೇಲೆ ದೇಹದಲ್ಲಿ ಏನಾಗುತ್ತದೆ ಗೊತ್ತಾ? ಇಲ್ಲಿದೆ ಅಚ್ಚರಿಯ ಮಾಹಿತಿ !

08/02/2026 7:15 AM

SHOCKING : `ರೀಲ್ಸ್’ ಹುಚ್ಚಿಗೆ ಮತ್ತೊಂದು ಬಲಿ : ನೇಣು ಹಾಕಿಕೊಳ್ಳುವ ದೃಶ್ಯ ಸೆರೆ ಹಿಡಿಯಲು ಹೋಗಿ ಮಹಿಳೆ ಸಾವು.!

08/02/2026 7:14 AM
State News
KARNATAKA

ಭಾರತದ 10 ಅತ್ಯಂತ ಭ್ರಷ್ಟ ಇಲಾಖೆಗಳ ಪಟ್ಟಿ ಬಹಿರಂಗ : 8 ನೇ ಇಲಾಖೆಯ ಬಗ್ಗೆ ತಿಳಿದರೆ ನಿಮಗೆ ಆಶ್ಚರ್ಯವಾಗುತ್ತದೆ.!

By kannadanewsnow5708/02/2026 7:09 AM KARNATAKA 2 Mins Read

ನವದೆಹಲಿ : ಭಾರತದ 10 ಅತ್ಯಂತ ಭ್ರಷ್ಟ ಇಲಾಖೆಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಈ ಪಟ್ಟಿಯು ಸಾರ್ವಜನಿಕ ದೂರುಗಳು, ಮಾಧ್ಯಮ…

ರಾಜ್ಯದ ರೈತರಿಗೆ ಗುಡ್ ನ್ಯೂಸ್ : `ಜಮೀನು ದಾರಿ’ ಕಲ್ಪಿಸಿಕೊಡಲು ತಹಶೀಲ್ದಾರ್ ಗಳಿಗೆ ವಿಶೇಷ ಅಧಿಕಾರ.!

08/02/2026 6:56 AM

Property Rules : `ಆಸ್ತಿ ರಿಜಿಸ್ಟರ್​’ಗೆ ಇನ್ಮುಂದೆ ಈ 5 ದಾಖಲೆಗಳು ಕಡ್ಡಾಯ.!

08/02/2026 6:48 AM

ರಾಜ್ಯದ ರೈತರಿಗೆ ಗುಡ್ ನ್ಯೂಸ್: ವಾರಸುದಾರರ ಹೆಸರಿಗೆ `ಪೌತಿ ಖಾತೆ’ ಮಾಡಿಕೊಡಲು ಮನೆ ಬಾಗಿಲಿಗೇ ಬರಲಿದ್ದಾರೆ ಅಧಿಕಾರಿಗಳು.!

08/02/2026 6:41 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.