ಬೆಂಗಳೂರು: ರಾಜ್ಯದಲ್ಲಿ ಖಾಸಗಿ ಬಸ್ ಗಳ ಅವಘಡ ತಪ್ಪಿಸಲು ಸರ್ಕಾರ ಮಹತ್ವದ ಕ್ರಮ ವಹಿಸಿದೆ. ಸಾರಿಗೆ ಇಲಾಖೆಯಿಂದ ಖಾಸಗಿ ಬಸ್ ಗಳಿಗೆ ಸುರಕ್ಷತಾ ಮಾನದಂಡಗಳನ್ನು ಬಿಡುಗಡೆ ಮಾಡಲಾಗಿದೆ. ಅವುಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ತಿಳಿಸಲಾಗಿದೆ.
ಈ ಕುರಿತಂತೆ ಸಾರಿಗೆ ಇಲಾಖೆಯಿಂದ ಸುರಕ್ಷತಾ ಮಾನದಂಡ ಬಿಡುಗಡೆ ಮಾಡಲಾಗಿದ್ದು, ಖಾಸಗಿ ಬಸ್ ಗಳ ಚಾಲಕನ ಆಸನದ ಹಿಂಭಾಗದಲ್ಲಿ ತುರ್ತು ನಿರ್ಗಮನದ ದ್ವಾರದ ವ್ಯವಸ್ಥೆ ಇರಬೇಕು. ಸ್ಲೀಪರ್ ಬರ್ತ್ ಗಳಲ್ಲಿ ಸೈಡರ್ ಓಪನ್ ಕಡ್ಡಾಯ ಎಂಬುದಾಗಿ ಸೂಚಿಸಿದೆ.
ಒಂದು ತಿಂಗಳ ಒಳಗಾಗಿ ಅಗ್ನಿ ಪತ್ತೆ ವ್ಯವಸ್ಥೆ ಅಳವಡಿಸಿಕೊಳ್ಳಬೇಕು. ಕನಿಷ್ಠ 10 ಕೆಜಿ ತೂಕದ ಅಗ್ನಿಶಾಮಕ ಉಪಕರಣಗಳನ್ನು ಬಸ್ ನಲ್ಲಿ ಇರಿಸಬೇಕು. ಬಸ್ ಕವಚ ನಿರ್ಮಾಣ ಸಂಸ್ಥೆಯ ಮಾನ್ಯತೆ ಪರಿಶೀಲನೆ ನಂತರವೇ ನೋಂದಣಿ ಪ್ರಕ್ರಿಯೆ ನಡೆಸುವಂತೆ ತಿಳಿಸಲಾಗಿದೆ.
ಇನ್ನೂ ಚಾಸಿಸ್ ಗೆ ಅನಧಿಕೃತ ವಿಸ್ತರಣೆ ಮಾಡೋದಕ್ಕೆ ನಿರ್ಬಂಧ ಹೇರಲಾಗಿದೆ. ಅನುಮೋದಿತ ಪರೀಕ್ಷಾ ಸಂಸ್ಥೆಯಿಂದ ಪ್ರಮಾಣ ಪತ್ರ ಪಡೆಯುವುದು ಕಡ್ಡಾಯಗೊಳಿಸಿ ಸಾರಿಗೆ ಇಲಾಖೆ ಸುರಕ್ಷತಾ ಮಾನದಂಡಗಳಲ್ಲಿ ತಿಳಿಸಿದೆ.
ಸಾರಿಗೆ ಇಲಾಖೆಗೆ ಖಾಸಗಿ ಬಸ್‌ಗಳಿಗೆ ಸುರಕ್ಷತಾ ಮಾನದಂಡಗಳು pic.twitter.com/cnQxdZ3Gob
— DIPR Karnataka (@KarnatakaVarthe) January 23, 2026
BREAKING: ವಿಧಾನಪರಿಷತ್ತಿನಲ್ಲಿ ಬಿಜೆಪಿ ಸದಸ್ಯರಿಂದ ಗದ್ದಲ ಹಿನ್ನಲೆ: ಕಲಾಪ ಮಂಗಳವಾರಕ್ಕೆ ಮುಂದೂಡಿಕೆ
ರಾಜ್ಯದಲ್ಲಿ ಬೇಸಿಗೆ ಆರಂಭಕ್ಕೆ ಮುನ್ನವೇ ಕಾಡ್ಗಿಚ್ಚು ನಿಯಂತ್ರಣಕ್ಕೆ ಈ ಖಡಕ್ ಸೂಚನೆ ಕೊಟ್ಟ ಸಚಿವ ಈಶ್ವರ್ ಖಂಡ್ರೆ








