ಬೆಂಗಳೂರು: ಬಿಎಂಎಸ್ ಟ್ರಸ್ಟ್ ಅವ್ಯವಹಾರ ಕುರಿತು ಮಾಜಿ ಸಿಎಂ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ. ಬಿಎಂಎಸ್ ಕಾಲೇಜು ಟ್ರಸ್ಟ್ , ಜಮೀನು ಅಕ್ರಮ ಆರೋಪ ವಿಚಾರವಾಗಿ ಸರ್ಕಾರ ಒಬ್ಬ ವ್ಯಕ್ತಿಗೆ ಈಗಾಗಲೇ ಈ ಟ್ರಸ್ಟ್ ಬರೆದುಕೊಟ್ಟಿದೆ. ಸಾರ್ವಜನಿಕ ಟ್ರಸ್ಟ್ ಒಂದು ಕುಟುಂಬಕ್ಕೆ ವರ್ಗಾವಣೆ ಆಗುತ್ತಿದೆ ಎಂದು ಬೆಂಗಳೂರಿನಲ್ಲಿ ಕುಮಾರಸ್ವಾಮಿ ಆರೋಪ ಮಾಡಿದ್ದಾರೆ.
ಅಕ್ರಮದಲ್ಲಿ ಸಚಿವ ಅಶ್ವತ್ಥನಾರಾಯಣ ಭಾಗಿಯಾಗಿದ್ದಾರೆ. ಅಕ್ರಮದ ಬಗ್ಗೆ ತನಿಖೆ ಮಾಡಲು ಸರ್ಕಾರಕ್ಕೆ ಭಯ ಯಾಕೆ? ಅಕ್ರಮದ ದಾಖಲೆಗಳನ್ನು ರಾಜ್ಯದ ಜನರ ಮುಂದೆ ಇಟ್ಟಿದ್ದೇನೆ ಎಂದರು.
ಇನ್ನು ಈ ಸಂಬಂಧ ಪ್ರಧಾನಿ ಮೋದಿಗೆ ನಾನು ಪತ್ರ ಬರೆಯುತ್ತೇನೆ. ಭ್ರಷ್ಟ ವ್ಯವಸ್ಥೆ ನಿಲ್ಲಿಸುತ್ತೇವೆ ಎಂದು ಪ್ರಧಾನಿ ಮೋದಿಗೆ ಪತ್ರ ಬರೆಯುತ್ತೇವೆ. ಅಕ್ರಮ ದಾಖಲೆಗಳನ್ನು ಅವರಿಗೂ ಸಹ ಕಳಿಸುತ್ತೇನೆ. ಆದರೆ ಪ್ರಧಾನಿ ಮೋದಿ ಏನು ಕ್ರಮ ಕೈಗೊಳ್ಳಾರೋ ನೋಡೋಣ ಎಂದು ಹೇಳಿದ್ದಾರೆ. ಇದು ೪೦ % ಕಮಿಷನ್ ಅಲ್ಲ, ೧೦೦ % ಕಮಿಷನ್ ಎಂದು ಹೆಚ್.ಡಿ ಕುಮಾರಸ್ವಾಮಿ ಕಿಡಿಕಾರಿದ್ದಾರೆ.