ಬೆಂಗಳೂರು: ರಾಜ್ಯ ಸರ್ಕಾರದಿಂದ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸೋ ಸಲುವಾಗಿ 18 ಕೆ ಎ ಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶಿಸಿದೆ.
ಇಂದು ಅಧಿಸೂಚನೆ ಹೊರಡಿಸಿರುವಂತ ರಾಜ್ಯ ಸರ್ಕಾರವು ಕೆ ಎಎಸ್ ಅಧಿಕಾರಿ ಡಾ.ಚನ್ನಪ್ಪ.ಎ ಅವರನ್ನು ರಾಯಚೂರು ವಿವಯ ಕುಲಸಚಿವರನ್ನಾಗಿ ನೇಮಿಸಿದ್ದರೇ, ರೂಪಶ್ರೀ.ಕೆ ಅವರನ್ನು ಮಂಡ್ಯ ವಿವಿಯ ಆಡಳಿತದ ಕುಲಸಚಿವರನ್ನಾಗಿ ನಿಯೋಜಿಸಿ ಆದೇಶಿಸಿದೆ.
ಡಾ.ರುದ್ರೇಶ್ ಎಸ್ ಘಾಳಿ ಅವರನ್ನು ಧಾರವಾಡದ ಶಾಲಾ ಶಿಕ್ಷಣ ಇಲಾಖೆಯ ಅಪರ ಆಯುಕ್ತರಾಗಿ, ಪುಷ್ಪಲತಾ ಹೆಚ್ ಅವರನ್ನು ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ನಿಯಮಿತದ ಪ್ರಧಾನ ವ್ಯವಸ್ಥಾಪಕರ ಹುದ್ದೆಗೆ ನೇಮಿಸಿದೆ.
ಮಹೇಶ್ ಬಾಬು ಎನ್ ಅವರನ್ನು ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿ ನೇಮಕ ಮಾಡಿದ್ದರೇ, ನೂರ್ ಜಹರಾ ಖಾನಂ ಅವರನ್ನು ಬೆಂಗಳೂರಿನ ಲೆಕ್ಕಪತ್ರ ವಿಭಾಗದ ಅಪರ ಕಂದಾಯ ಆಯುಕ್ತರಾಗಿ ನೇಮಕ ಮಾಡಲಾಗಿದೆ.
ಹೀಗಿದೆ 18 ಕೆಎಎಸ್ ಅಧಿಕಾರಿಗಳ ವರ್ಗಾವಣೆ ಪಟ್ಟಿ
ನಾವಿರುವವರೆಗೂ ಎಸ್ಕಾಂಗಳ ಖಾಸಗಿಕರಣಕ್ಕೆ ಅವಕಾಶವಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್
BIG NEWS: ಸಾಗರದಲ್ಲಿ ‘ಸದಾನಂದ ಮರ್ಡರ್’ ಕೇಸ್: ಪೊಲೀಸರು ‘ಕೊಲೆ ಆರೋಪಿ’ಗಳನ್ನು ಬಿಟ್ಟು ಕಳುಹಿಸಿದ್ದು ಯಾಕೆ.?