ಕೆಎನ್ಎನ್ಡಿಜಿಟಲ್ ಡೆಸ್ಕ್ : ಹೆಚ್ಚಿನ ಪ್ರಯಾಣಿಕರು ದೂರದ ಸ್ಥಳಗಳಿಗೆ ಪ್ರಯಾಣಿಸಲು ರೈಲುಗಳನ್ನ ಅವಲಂಬಿಸಿರ್ತಾರೆ. ಇದಕ್ಕೆ ಕಾರಣ ರೈಲು ಪ್ರಯಾಣ ಸುಲಭ, ಆರಾಮದಾಯಕ ಮತ್ತು ಪ್ರಯಾಣ ದರವೂ ಕಡಿಮೆ. ಅದ್ರಂತೆ, ದೂರದ ಪ್ರಯಾಣ ಮಾಡಬೇಕಾದ್ರೆ, ಪ್ರಯಾಣಿಕರು ಸೀಟುಗಳನ್ನು ಕಾಯ್ದಿರಿಸುವುದು ಖಚಿತ. ಆ ಮೀಸಲಾತಿ ಪ್ರಕಾರ ನಿಗದಿಪಡಿಸಿದ ಸೀಟುಗಳಲ್ಲಿ ಪ್ರಯಾಣಿಕರು ಕುಳಿತುಕೊಳ್ಳುತ್ತಾರೆ. ಆದರೆ, ಕೆಲವು ಬಾರಿ ಕಾಯ್ದಿರಿಸಿದ ಸೀಟುಗಳಲ್ಲಿ ಮತ್ತೊಬ್ಬರು ಕುಳಿತುಕೊಂಡಿರ್ತಾರೆ. ಕಾಯ್ದಿರಿಸಿದ ಸೀಟು ಎಂದು ಹೇಳಿದ್ರೂ ಪರವಾಗಿಲ್ಲ ಅಂತಾ ಜಗಳಕ್ಕೆ ನಿಲ್ಲುತ್ತಾರೆ. ಇನ್ನು ಹಲವರು ಸೀಟು ಹಂಚಿಕೊಳ್ಳೋಣ ಎಂದು ಉಚಿತ ಸಲಹೆಯನ್ನೂ ನೀಡ್ತಾರೆ. ಅದ್ರಂತೆ, ಅಂತಹ ಘರ್ಷಣೆಗಳ ಅನೇಕ ನಿದರ್ಶನಗಳಿವೆ.
ಈ ಘಟನೆಗಳನ್ನ ಗಮನದಲ್ಲಿಟ್ಟುಕೊಂಡು ರೈಲ್ವೆ ಇಲಾಖೆ ಮಹತ್ವದ ನಿರ್ಧಾರ ಕೈಗೊಂಡಿದೆ. ರೈಲಿನಲ್ಲಿ ಪ್ರಯಾಣಿಕರ ನಡುವೆ ಯಾವುದೇ ಘರ್ಷಣೆಯಾಗದಂತೆ ಕ್ರಮ ಕೈಗೊಳ್ಳಲಾಗುತ್ತೆ ಮತ್ತು ಯಾರೂ ಯಾವುದೇ ಜಗಳ ಮಾಡಬೇಕಿಲ್ಲ. ಹೌದು, ಇದಕ್ಕಾಗಿ ವಿಶೇಷ ವ್ಯವಸ್ಥೆ ತರಲಾಗಿದ್ದು, ಕಾಯ್ದಿರಿಸಿದ ಸ್ಥಾನವನ್ನ ಬಲವಂತವಾಗಿ ತೆಗೆದುಕೊಳ್ಳದಂತೆ ರಕ್ಷಿಸುತ್ತದೆ.
ದೂರು ಕೊಡಿ..!
ರೈಲುಗಳಲ್ಲಿ ಸೀಟುಗಳನ್ನ ಆಕ್ರಮಿಸಿಕೊಳ್ಳುವ ಗಲಾಟೆ ನಮ್ಮ ದೇಶದಲ್ಲಿ ಹೊಸದೇನಲ್ಲ. ರೈಲಿನಲ್ಲಿ ಇಂತಹ ಘಟನೆಗಳು ಆಗಾಗ ನಡೆಯುತ್ತಿರುತ್ತವೆ. ಟಿಕೆಟ್ ಕಾಯ್ದಿರಿಸದ ಪ್ರಯಾಣಿಕರು ಎರಡನೇ ತರಗತಿಯಿಂದ ಸ್ಲೀಪರ್ನಿಂದ ಎಸಿ ತರಗತಿಯವರೆಗೆ ಎಲ್ಲಿಯೂ ಕುಳಿತುಕೊಳ್ಳುತ್ತಾರೆ. ಆದ್ರೆ, ನಿಮ್ಮ ಕಾಯ್ದಿರಿಸಿದ ಸೀಟಿನಲ್ಲಿ ಯಾರಾದರೂ ಕುಳಿತರೇ, ಕೂಡಲೇ ಟಿಟಿಇಗೆ ದೂರು ನೀಡಬೇಕು. ಇಲ್ಲವಾದಲ್ಲಿ ‘ರೈಲ್ವೇ ಮದದ್’ನಲ್ಲಿ ದೂರು ದಾಖಲಿಸಬೇಕಾಗುತ್ತದೆ.
ದೂರು ನೀಡುವುದು ಹೇಗೆ?
1. ನಿಮ್ಮ ಕಾಯ್ದಿರಿಸಿದ ಆಸನವನ್ನ ಆಕ್ರಮಿಸಿಕೊಂಡಿದ್ರೆ, ಅವರೊಂದಿಗೆ ವಿವಾದಕ್ಕೆ ಇಳಿಯದೇ, ರೈಲ್ವೇ ಮದದ್ ವೆಬ್ಸೈಟ್ಗೆ ಹೋಗಿ. ಅದಕ್ಕಾಗಿ (https://railmadad.indianrailways.gov.in) ಲಿಂಕ್ ಅನ್ನು ಕ್ಲಿಕ್ ಮಾಡಬಹುದು.
2. ನಿಮ್ಮ ಮೊಬೈಲ್ ಸಂಖ್ಯೆಯನ್ನ ನಮೂದಿಸಿ.
3. ಅದರ ನಂತರ, Send OTP ಕ್ಲಿಕ್ ಮಾಡಿ.
4. ನಿಮ್ಮ ಮೊಬೈಲ್ನಲ್ಲಿ ಸ್ವೀಕರಿಸಿದ OTP ಅನ್ನು ನಮೂದಿಸಿ.
5. ನಿಮ್ಮ ಟಿಕೆಟ್ ಬುಕಿಂಗ್ PNR ಸಂಖ್ಯೆಯನ್ನು ನಮೂದಿಸಿ.
6. ಟೈಪ್ ಆಯ್ಕೆಯನ್ನು ಕ್ಲಿಕ್ ಮಾಡಿ ಮತ್ತು ನಿಮ್ಮ ದೂರನ್ನು ಆಯ್ಕೆಮಾಡಿ.
7. ಘಟನೆಯ ದಿನಾಂಕವನ್ನು ಆಯ್ಕೆಮಾಡಿ.
8. ದೂರನ್ನು ಸಹ ವಿವರವಾಗಿ ಬರೆಯಬಹುದು.
9. ಅದರ ನಂತರ ಸಲ್ಲಿಸು ಬಟನ್ ಮೇಲೆ ಕ್ಲಿಕ್ ಮಾಡಿ.
139ಕ್ಕೂ ದೂರು ನೀಡಬಹುದು
ರೈಲಿನಲ್ಲಿ ಯಾರಾದರೂ ಕಾಯ್ದಿರಿಸಿದ ಸೀಟನ್ನ ಆಕ್ರಮಿಸಿಕೊಂಡಿದ್ರೆ, ವಿಷಯವನ್ನ ಮೊದಲು ರೈಲಿನ ಟಿಟಿಇಗೆ ತಿಳಿಸಬೇಕು. ಅಲ್ಲದೇ ಯಾರಾದರೂ ಕಿರುಕುಳ ನೀಡಿದ್ರೆ, ತಕ್ಷಣ ರೈಲ್ವೆ ಪೊಲೀಸರಿಗೆ ಮಾಹಿತಿ ನೀಡಿ. ನೀವು ಆನ್ಲೈನ್ನಲ್ಲಿ ದೂರು ಸಲ್ಲಿಸಲು ಸಾಧ್ಯವಾಗದಿದ್ದರೆ, ನೀವು ರೈಲ್ವೆ ಸಹಾಯವಾಣಿ ಸಂಖ್ಯೆ 139ಗೆ ಕರೆ ಮಾಡಿ ದೂರು ಸಲ್ಲಿಸಬಹುದು.