ಕೋಲಾರ : ಕೋಲಾರದಲ್ಲಿ ಗೌರವವಾದ ದುರಂತ ಒಂದು ಸಂಭವಿಸಿದ್ದು, ಇಂಜಿನಿಯರ್ ಕಾಲೇಜಿನ ಲೆಕ್ಚರರ್ ಒಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಇದೀಗ ವರದಿಯಾಗಿದೆ.
ಕೋಲಾರ ತಾಲ್ಲೂಕು ಖಾದ್ರಿಪುರ ಗ್ರಾಮದಲ್ಲಿ ಮೊನೀಶ್ (36) ಆತ್ಮಹತ್ಯೆಗೆ ಶರಣಾದ ಉಪನ್ಯಾಸಕ. ಕೋಲಾರದ ಎಂಜಿನಿಯರಿAಗ್ ಕಾಲೇಜೊಂದರಲ್ಲಿ ಉಪನ್ಯಾಸಕರಾಗಿದ್ದರು ಎಂದು ತಿಳಿದುಬಂದಿದೆ. ಪತ್ನಿ ವೇದವತಿ ಕೆಲಸಕ್ಕೆ ಹೋಗಿದ್ದ ವೇಳೆ ನೇಣಿಗೆ ಶರಣಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೋಲಾರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.








