ಹಾಸನ : ಹಾಸನ ತಾಲೂಕಿನ ಮೊಸಳೆಹೊಸಳ್ಳಿ ಬಳಿ ಬೀಕರ ಅಪಘಾತ ಸಂಬಂಧಪಟ್ಟಂತೆ ಗಣಪತಿ ಮೆರವಣಿಗೆ ವೇಳೆ ಟ್ರಕ್ ಹರಿದು ವಿದ್ಯಾರ್ಥಿಗಳು ಸೇರಿದಂತೆ ಒಂಬತ್ತು ಜನರು ಸಾವನಪ್ಪಿದ್ದು, ಇದೇ ವೇಳೆ ಬಿಇ ವಿದ್ಯಾರ್ಥಿ ಮಿಥುನ್ (23) ಎನ್ನುವ ಯುವಕ ಸಹ ದುರಂತವಾಗಿ ಸಾವು ಕಂಡಿದ್ದಾನೆ. ಹುಟ್ಟು ಹಬ್ಬದ ದಿನದಂದೆ ಬಿಇ ವಿದ್ಯಾರ್ಥಿ ಮಿಥುನ್ ಸಾವನ್ನಪ್ಪಿದ್ದಾನೆ.
ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ಗವಿಗಂಗಾಪುರದ ನಿವಾಸಿಯಾಗಿರುವ ಮಿಥುನ್ ಹುಟ್ಟು ಹಬ್ಬ ಆಚರಿಸಿಕೊಂಡಿದ್ದ. ಮಿಥುನ ನಿನ್ನೆ ನಡೆದ ಅಪಘಾತದಲ್ಲಿ ಸಾವನಪ್ಪಿದ್ದಾನೆ. ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದ ವಿದ್ಯಾರ್ಥಿ ಮತ್ತು ದುರಂತವಾಗಿ ಸಾವನ್ನಪ್ಪಿದ್ದಾನೆ. ಮೊಸಳೆಹಳ್ಳಿ ಸರಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಈತ ಬಿಇ ಓದುತ್ತಿದ್ದ ಹಾಸ್ಟೆಲ್ ನಲ್ಲಿ ಸ್ನೇಹಿತರ ಜೊತೆಗೆ ಮಿಥುನ ಹುಟ್ಟುಹಬ್ಬ ಆಚರಿಸಿದ್ದ. ಹುಟ್ಟುಹಬ್ಬ ಮನೆಯಲ್ಲಿ ನಿನ್ನೆ ಗಣೇಶ ವಿಸರ್ಜನೆಯಲ್ಲಿ ಭಾಗಿಯಾಗಿದ್ದಾನೆ. ಆದರೆ ಟ್ರಕ್ ಹರಿದು ವಿದ್ಯಾರ್ಥಿ ಮಿಥುನ್ ಹುಟ್ಟುಹಬ್ಬದ ದಿನದಂದೇ ದುರಂತವಾಗಿ ಸಾವನ್ನಪ್ಪಿದ್ದಾನೆ.