ದಾವಣಗೆರೆ : ತುಂಗಭದ್ರ ನದಿಯಲ್ಲಿ ತೆಪ್ಪ ಮಗುಚಿ ಇಬ್ಬರು ಸಾವನ್ನಪ್ಪಿರುವ ಘಟನೆ ದಾವಣಗೆರೆ ಜಿಲ್ಲೆಯ ಹೊನ್ನಾಳಿ ಬಳಿಯ ತುಂಗಭದ್ರಾ ನದಿಯಲ್ಲಿ ಈ ಒಂದು ಘಟನೆ ನಡೆದಿದೆ. ತೆಪ್ಪ ಮಗುಚಿ ತಿಪ್ಪೇಶ್ (25) ಹಾಗೂ ಮುಕ್ತಿಯಾರ್ (19) ಸಾವನಪ್ಪಿದ್ದಾರೆ.
ಮೀನು ಹಿಡಿಯಲು ಹೋಗಿದ್ದಾಗ ಈ ಒಂದು ದುರಂತ ಸಂಭವಿಸಿದೆ. ಮರಳು ದಂತೆಯಿಂದ ಈ ಒಂದು ಘಟನೆ ನಡೆದಿದೆ ಎನ್ನುವ ಆರೋಪ ಸಹ ಇದೆ ವೇಳೆ ಕೇಳಿ ಬಂದಿದೆ. ಸ್ಥಳಕ್ಕೆ ಹೊನ್ನಾಳಿ ಠಾಣೆ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.