ಹುಬ್ಬಳ್ಳಿ: ಜಿಲ್ಲೆಯಲ್ಲಿ ಕ್ಷುಲ್ಲಕ ಕಾರಣಕ್ಕಾಗಿ ವ್ಯಕ್ತಿಯ ಎದೆಗೆ ಚಾಕು ಇರಿದಿರುವ ಘಟನೆ ಕಸಬಾ ಠಾಣಾ ವ್ಯಾಪ್ತಿಯ ಕೊತ್ತಂಬರಿ ಆಟೋ ಸ್ಯಾಂಡ್ ಬಳಿ ಕೃತ್ಯ ನಡೆದಿದೆ.
BREAKING NEWS: PFI ಮೇಲಿನ ನಿಷೇಧ ಬಿಜೆಪಿ ಸರ್ಕಾರದ ಅಘೋಷಿತ ತುರ್ತುಪರಿಸ್ಥಿತಿಯ ಭಾಗ: SDPI
ಹುಬ್ಬಳ್ಳಿಯ ಕರ್ಜಗಿ ಓಣಿ ನಿವಾಸಿ ಮೊಹಮ್ಮದ್ ಗೆ ದುಷ್ಕರ್ಮಿಗಳು ಎದೆಗೆ ಚಾಕು ಇರಿದಿದ್ದಾರೆ. ರಕ್ತಸಿಕ್ತ ಸ್ಥಿತಿಯಲ್ಲೇ ಹಳೇ ಹುಬ್ಬಳ್ಳಿ ಠಾಣೆಗೆ ಮೊಹಮ್ಮದ್ ಆಗಮಿಸಿದ್ದಾನೆ. ಇದನ್ನ ನೋಡಿದ ಪೊಲೀಸರು ಕೂಡಲೇ ಮೊಹಮ್ಮದ್ ಅವರನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ.ಆತನಿಗೆ ಚಾಕು ಇರಿದ ದುಷ್ಕರ್ಮಿ ಇರ್ಫಾನ್ ಪರಾರಿಯಾಗಿದ್ದಾನೆ. ಈ ಸಂಬಂಧ ಹಳೇ ಹುಬ್ಬಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.