ಬೀದರ್: ಜಿಲ್ಲೆಯ ಹುಮ್ನಾಬಾದ್ ತಾಲೂಕಿನ ಹಳ್ಳಿಖೇಡ್ ಗ್ರಾಮದಲ್ಲಿ ಮಾನಸಿಕ ಹಾಗೂ ದೈಹಿಕ ಕಿರುಕುಳಕ್ಕೆ ಬೇಸತ್ತು ವಿವಾಹಿತ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
22 ವರ್ಷದ ಮೇಘಾ ಆತ್ಮಹತ್ಯೆ ಶರಣಾದ ಮಹಿಳೆ. ಪತಿ ಹಾಗೂ ಅತ್ತೆ ಮಾನಸಿಕವಾಗಿ ಹಾಗೂ ದೈಹಿಕ ಕಿರುಕುಳ ನೀಡುತ್ತಿದ್ದರು. ಜೊತೆಗೆ ಆಕೆಯ ಮಾವ ಲೈಂಗಿಕ ಕಿರುಕುಳ ನೀಡುತ್ತಿದ್ದ ಎಂದು ಮೇಘಾಳ ಪೋಷಕರು ಆರೋಪಿಸಿದ್ದಾರೆ.ಆಕೆಯನ್ನು 2 ವರ್ಷಗಳ ಹಿಂದೆ ಹುಮ್ನಾಬಾದ್ನ ಹಳ್ಳಿಖೇಡ್ ಗ್ರಾಮದ ಮಂಜುನಾಥ ಎಂಬಾತನಿಗೆ ಮದುವೆ ಮಾಡಿಕೊಡಲಾಗಿತ್ತು.
ಮದುವೆಯಾದ 3 ತಿಂಗಳ ಬಳಿಕ ಮೇಘಾಳಿಗೆ ಆಕೆಯ ಪತಿ ಮನೆಯವರು ಮಾನಸಿಕ ಹಾಗೂ ದೈಹಿಕವಾಗಿ ಕಿರುಕುಳ ನೀಡಲು ಶುರು ಮಾಡಿದ್ದರು. ಇದರಿಂದ ಬೇಸತ್ತ ಮೇಘಾ ಆತ್ಮಹತ್ಯೆಗೆ ಶರಣಾಗಿದ್ದಾಳೆ.ಈ ಕುರಿತು ಹಳ್ಳಿಖೇಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.