ಬೆಂಗಳೂರು : ಪ್ರಯಾಣಿಕರಿಂದ ಹೆಚ್ಚುವರಿ ಶುಲ್ಕ ವಿಧಿಸುವ ಹಾಗೂ ಕರೆದಲ್ಲಿ ಬರುವ ಪ್ರಯಾಣ ನಿರಾಕರಿಸಿದ ಆಟೋ ಚಾಲಕರ ವಿರುದ್ಧ ಬೆಂಗಳೂರು ನಗರ ಸಂಚಾರ ಪೊಲೀಸರು 1,116 ಪ್ರಕರಣ ದಾಖಲಿಸಿದ್ದಾರೆ.
ಬೆಂಗಳೂರು ನಗರ ಜಂಟಿ ಪೊಲೀಸ್ ಆಯುಕ್ತ (ಸಂಚಾರ) ಬಿ. ಆರ್.ರವಿಕಾಂತೇಗೌಡ ಅವರ ಮಾರ್ಗದರ್ಶನದಲ್ಲಿ ಬೆಂಗಳೂರಿನಾದ್ಯಂತ ಸಂಚಾರ ಪೊಲೀಸರು ಮಂಗಳವಾರ ಮಫ್ತಿ ವಿಶೇಷ ಕಾರ್ಯಾಚರಣೆ ನಡೆಸಿ ಕೇಸ್ ದಾಖಲಿಸಿದ್ದಾರೆ,
ಸಮರ್ಪಕ ಸೇವೆ ನೀಡದ ಆಟೋ ಚಾಲಕರ ವಿರುದ್ಧ ಕಠಿಣ ಕ್ರಮ ಕೈಗೊಂಡು, 1,000 ಕ್ಕೂ ಹೆಚ್ಚು ಪ್ರಕರಣ ದಾಖಲಿಸಲಾಗಿದೆ. ಒಟ್ಟು 312 ಆಟೋಗಳನ್ನು ವಶಪಡಿಸಿಕೊಳ್ಳಲಾಗಿತ್ತು. ದಂಡ ಪಾವತಿಸಿದ ಬಳಿಕ 307 ವಾಹನಗಳನ್ನು ಬಿಟ್ಟು ಕಳುಹಿಸಲಾಗಿದೆ.
ಕಾರ್ಯಾಚರಣೆ ವೇಳೆ ಸಂಚಾರ ಪೊಲೀಸರು ಚಾಲಕರು ಸವಾರಿ ನಿರಾಕರಿಸಿದಕ್ಕೆ 270 ಆಟೋಗಳು ಮತ್ತು ಸುಮಾರು 312 ಪ್ರಯಾಣಿಕರಿಗೆ ಹೆಚ್ಚಿನ ಶುಲ್ಕ ವಿಧಿಸಿದ್ದ ಆರೋಪ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ಸಂಚಾರಿ ಪೊಲೀಸರು ತಿಳಿಸಿದ್ದಾರೆ. ಸಾರ್ವಜನಿಕರಿಂದ ಆಟೋ ಚಾಲಕರು ಮಾಡುವ ತಪ್ಪುಗಳ ಬಗ್ಗೆ ದೂರುಗಳು ಬಂದಿದ್ದವು. ಈ ಹಿನ್ನೆಲೆ ಪೊಲೀಸರು ಮಂಗಳವಾರ ಮಫ್ತಿ ವಿಶೇಷ ಕಾರ್ಯಾಚರಣೆ ನಡೆಸಿ ಕೇಸ್ ದಾಖಲಿಸಿದ್ದಾರೆ.
Today we have conducted special drive against Auto Rickshaw and booked Refuse to go for hire-03 Cases & Demanding excess fare-02 Cases Total 05 Cases booked & taken legal action as per law.@blrcitytraffic @DCPTrNorthBCP @BlrCityPolice pic.twitter.com/j2pw90xR7f
— HEBBALA TRAFFIC PS (@hebbaltrafficps) October 24, 2022
ಶಿವಮೊಗ್ಗ: ಅ.28ರಂದು ನಡೆಯಬೇಕಿದ್ದ ‘ಜಿಲ್ಲಾ ಮಟ್ಟದ ಯುವ ಉತ್ಸವ-2022’ ಕಾರ್ಯಕ್ರಮ ಮುಂದೂಡಿಕೆ
BREAKING NEWS : ಬೆಂಗಳೂರು ಸೇರಿ ರಾಜ್ಯದ ವಿವಿಧೆಡೆ ‘ಸೂರ್ಯ ಗ್ರಹಣ’ ಗೋಚರ |Solar eclipse 2022