ಕೆಎನ್ಎನ್ ಡಿಜಿಟಲ್ ಡೆಸ್ಕ್ : ರಸ್ತೆಯಲ್ಲಿ ಬಸ್ಸಿನಡಿ ಸಿಲುಕಿಕೊಳ್ಳುತ್ತಿದ್ದ ಪುಟ್ಟ ಕಂದಮ್ಮನನ್ನು ಟ್ರಾಫಿಕ್ ಪೊಲೀಸ್ ಅಧಿಕಾರಿಯೋರ್ವರು ರಕ್ಷಿಸಿದ್ದಾರೆ. ಈ ಕುರಿತಾದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ.
ವೈರಲ್ ಆಗಿರುವ ವೀಡಿಯೊದಲ್ಲಿ, ಜನನಿಬಿಡ ರಸ್ತೆಯಲ್ಲಿ ಕಾರೊಂದು ಎಲೆಕ್ಟ್ರಿಕ್ ರಿಕ್ಷಾದತ್ತ ಬರುತ್ತಿರುವುದನ್ನು ಕಾಣಬಹುದು. ಆಗ ರಿಕ್ಷಾ ತಿರುವು ಪಡೆಯುತ್ತದೆ. ಈ ವೇಳೆ ರಿಕ್ಷಾದೊಳಗೆ ತನ್ನ ತಾಯಿಯೊಂದಿಗೆ ಕುಳಿತಿದ್ದ ಮಗು ರಸ್ತೆಯ ಮೇಲೆ ಬೀಳುತ್ತದೆ. ಅದೇ ವೇಳೆ ರಸ್ತೆಯಲ್ಲಿ ಬಸ್ ಬರುವುದನ್ನು ಗಮನಿಸಿದ ಪೊಲೀಸ್ ಅಧಿಕಾರಿ ತಕ್ಷಣ ಮಗುವಿನ ಬಳಿ ತೆರಳಿ ರಕ್ಷಿಸಿದ್ದಾರೆ.
ट्रैफ़िक पुलिस के जवान सुंदर लाल.🙏 pic.twitter.com/ulmX48a5ki
— Awanish Sharan (@AwanishSharan) June 12, 2022
ವಿಡಿಯೋವನ್ನು ಐಎಎಸ್ ಅಧಿಕಾರಿ ಅವನೀಶ್ ಶರಣ್ ಟ್ವಿಟ್ಟರ್ನಲ್ಲಿ ಹೊಂಚಿಕೊಂಡಿದ್ದು, ಇದು 1.7 ಮಿಲಿಯನ್ ವೀಕ್ಷಣೆ ಪಡೆದಿದೆ. ಯಾವ ಪ್ರದೇಶದಲ್ಲಿ ಘಟನೆ ನಡೆದಿದೆ ಎಂಬುದರ ಕುರಿತಂತೆ ಮಾಹಿತಿ ಲಭ್ಯವಿಲ್ಲ. ಆದರೆ ಪೊಲೀಸ್ ಅಧಿಕಾರಿ ಕಾರ್ಯವನ್ನು ನೆಟ್ಟಿಗರು ಶ್ಲಾಘಿಸಿದ್ದಾರೆ.