ಬೆಂಗಳೂರು : ಲೋಕಸಭಾ ಚುನಾವಣೆಗೆ ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಮಗ ಕಾಂತೇಶ್ ಗೆ ಟಿಕೆಟ್ ಕೈ ತಪ್ಪಿದ ಹಿನ್ನೆಲೆ ಬಿಎಸ್ ಯಡಿಯೂರಪ್ಪ ವಿರುದ್ಧ ಇದೀಗ ಮತ್ತೆ ಈಶ್ವರಪ್ಪ ವಾಗ್ದಾಳಿ ನಡೆಸಿದ್ದು, ವರಿಷ್ಠರು ಬಿ ಎಸ್ ವೈ ವಿಜಯೇಂದ್ರನಿಗೆ ಪ್ರಾಮುಖ್ಯತೆ ಕೊಡುತ್ತಿದ್ದಾರೆ ಆದರೆ ಇವರು ರಾಜ್ಯದಲ್ಲಿ ಪಕ್ಷವನ್ನು ಹಾಳು ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ರಸ್ತೆ ಅಗಲೀಕರಣಕ್ಕೆ ಅರಮನೆ ಜಾಗ ಸ್ವಾಧೀನ : ಕಾಂಗ್ರೆಸ್ ವಿರುದ್ಧ ವಿಪಕ್ಷ ನಾಯಕ ಆರ್.ಅಶೋಕ್ ಕಿಡಿ
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಂಎಲ್ಸಿ ಎಂಪಿ ಅಂತ ಹೇಳಿದರೆ ಏನು ಹೇಳುವುದಿಲ್ಲ. ವರಿಷ್ಠರು ನನಗೆ ಹೇಳಿದ ತಕ್ಷಣ ನಾನು ನಿವೃತ್ತಿ ಘೋಷಿಸಿದೆ ಇಂದು ಬೆಂಬಲಿಗರ ಸಭೆ ಕರೆದಿದ್ದಾರೆ ಚರ್ಚೆ ಮಾಡೋಣ ಮುಂದಿನ ನಡೆ ಕುರಿತಂತೆ ತೀರ್ಮಾನ ಕೈಗೊಳ್ಳುತ್ತೇನೆ ಎಂದು ತಿಳಿಸಿದರು.ನಾನು ಕಾಂತೇಶ ಯಡಿಯೂರಪ್ಪ ಅವರ ಮನೆಗೆ ಹೋದಾಗ ಬಹಳ ಸ್ಪಷ್ಟವಾಗಿ ಹೇಳಿದ್ದರು.ಹಾವೇರಿ ಲೋಕಸಭಾ ಕ್ಷೇತ್ರಕ್ಕೆ ಕಾಂತೇಶ ನಿಲ್ಲಿಸುತ್ತೇನೆ ಟಿಕೆಟ್ ಕೊಡಿಸುವುದು ಪಕ್ಕ ಅಂತ ಹೇಳಿದರು. ಆದರೆ ಯಡಿಯೂರಪ್ಪನವರ ಹಾಗೂ ಅವರ ಮಗ ಷಡ್ಯಂತರ ಮಾಡಿ ನನ್ನ ಮಗನಿಗೆ ಲೋಕಸಭಾ ಟಿಕೆಟ್ ಕ್ಷೇತ್ರಕ್ಕೆ ಟಿಕೆಟ್ ತಪ್ಪಿಸಿದ್ದಾರೆ.
ಇಬ್ಬರು ಹೊಸ ಚುನಾವಣಾ ಆಯುಕ್ತರ ನೇಮಕ:ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಅಸಮಾಧಾನ
ಕರ್ನಾಟಕ ರಾಜ್ಯದಲ್ಲಿ ಯಡಿಯೂರಪ್ಪನವರಿಗೆ ವಿಜಯೇಂದ್ರ ಅವರಿಗೆ ಕೇಂದ್ರದ ನಾಯಕರು ಹೆಚ್ಚಿನ ಬೆಲೆ ಕೊಡುತ್ತಿದ್ದಾರೆ. ಆದರೆ ಅವರು ದುರುಪಯೋಗವನ್ನು ಪಡೆಸಿಕೊಳ್ಳುತ್ತಿದ್ದಾರೆ. ಹಾಗಾಗಿ ಕಾಂತೇಶ್ ಗೆ ಟಿಕೆಟ್ ಕೈತಪ್ಪಿದೆ. ನನಗೆ ಅಷ್ಟೆ ಅಲ್ಲ ಇಡೀ ಕರ್ನಾಟಕ ರಾಜ್ಯದ ಅನೇಕ ವರ್ಷಗಳಿಂದ ಪಕ್ಷ ಕಟ್ಟಿದಂತ ಹಿರಿಯ ಕಾರ್ಯಕರ್ತರಿಗೆ ತುಂಬಾ ನೋವಾಗಿದೆ ಎಂದರು.
ಮಾ.18ಕ್ಕೆ ಕಾಂಗ್ರೆಸ್ ಅಭ್ಯರ್ಥಿಗಳ ‘2ನೇ ಪಟ್ಟಿ’ ಬಿಡುಗಡೆ ಸಾಧ್ಯತೆ : ಸಚಿವ ದಿನೇಶ್ ಗುಂಡೂರಾವ್ ಹೇಳಿಕೆ
ಯಡಿಯೂರಪ್ಪ ಹಾಗೂ ಕೇಂದ್ರ ನಡೆಸಿಕೊಂಡ ರೀತಿಯಿಂದ ನಮಗೆ ನೋವಾಗಿದೆ.ಇದನ್ನ ಸರಿ ಮಾಡುವ ಕೆಲಸವಗಬೆಕಿದೆ ಎಂದು ಎಲ್ಲರಿಗೂ ತುಂಬಾ ಅಪೇಕ್ಷೆ ಇದೆ.ಅದಕ್ಕಾಗಿ ಏನು ಬೇಕು ಎಲ್ಲ ಪ್ರಯತ್ನ ನಡೆಸುತ್ತೇವೆ.ಇಡೀ ರಾಜ್ಯದಲ್ಲಿ ಕೇಂದ್ರದ ನಾಯಕರು ಚುನಾವಣಾ ರಾಜಕಾರಣಕ್ಕಾಗಿ ನಿವೃತ್ತಿ ಆಗಬೇಕು ಎಂದು ತಕ್ಷಣ ಒಪ್ಪಿಕೊಂಡಿದ್ದು ನಾನು. ಕೇಂದ್ರದ ನಾಯಕರು ಹೇಳಿದ ಮಾತನ್ನು ಶಿಸ್ತುಪಾಲನೆ ಮಾಡಿದ್ದೇನೆ ಎಂದು ಹೆಮ್ಮೆ ನನಗಿದೆ ಅಲ್ಲದೆ ಮೋದಿಯವರು ಕೂಡ ಹೇಳಿದ ಕೂಡಲೇ ಶಿಸ್ತು ಪಾಲನೆ ಮಾಡಿದ್ದಿಯ ತಕ್ಷಣ ನಿವೃತ್ತಿಗೆ ಒಪ್ಪಿಕೊಂಡಿದ್ದಕ್ಕೆ ನಾನು ಅದಕ್ಕೆ ಅಭಿನಂದಿಸುತ್ತೇನೆ ಎಂದು ಮೋದಿ ಅವರು ನನಗೆ ತಿಳಿಸಿದರು ಎಂದರು.