ಜಲೋರ್(ರಾಜಸ್ಥಾನ): ರಾಜಸ್ಥಾನದ ಜಲೋರ್ನಲ್ಲಿ 3 ನೇ ತರಗತಿಯ ವಿದ್ಯಾರ್ಥಿಯಾದ ಒಂಬತ್ತು ವರ್ಷದ ದಲಿತ ಬಾಲಕ ಕುಡಿಯುವ ನೀರಿನ ಮಡಿಕೆ ಮುಟ್ಟಿದ ಕಾರಣಕ್ಕೆ ಶಿಕ್ಷಕನೋರ್ವನ ಥಳಿತಕ್ಕೊಳಗಾಗಿ ಸಾವನ್ನಪ್ಪಿದ್ದ. ಇದೀಗ ಬಾಲಕನ ಕುಟುಂಬ ದುಃಖದಿಂದ ಮುಳುಗಿದೆ.
ಜುಲೈ 20 ರಂದು ಬಾಲಕ ಥಳಿತಕ್ಕೊಳಗಾದ ನಂತ್ರ ಕುಟುಂಬಸ್ಥರು ಅವನನ್ನು ಸುಮಾರು ಏಳು ಆಸ್ಪತ್ರೆಗಳಿಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ. ಆದ್ರೂ ಮಗ ಬದುಕುಳಿಯಲಿಲ್ಲ.
ಘಟನೆ ನಂತ್ರ, ಐದು ನಗರಗಳಲ್ಲಿನ ಏಳು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಿದರೂ ಮಗ ಆಗಸ್ಟ್ 13 ರಂದು ಕೊನೆಯುಸಿರೆಳೆದ ಎಂದು ಕುಟುಂಬಸ್ಥರು ತಮ್ಮ ಅಳಲು ತೋಡಿಕೊಂಡಿದ್ದಾರೆ.
BIG NEWS: ರಾಜ್ಯದಲ್ಲಿ ಮತ್ತೊಂದು ‘ಧರ್ಮ ದಂಗಲ್’ ಆರಂಭ: ಶಾಲೆಗಳಲ್ಲಿ ‘ಈದ್ ಮಿಲಾದ್’ ಆಚರಣೆಗೆ ಅವಕಾಶಕ್ಕೆ ಒತ್ತಾಯ