ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ
ಚಾಮರಾಜನಗರ:- ದಲಿತ ಮಹಿಳೆಯೊಬ್ಬರು ತೊಂಬೆಯಲ್ಲಿ ನೀರು ಕುಡಿದರು ಎಂಬ ಕಾರಣಕ್ಕೆ, ಆ ತೊಂಬೆಯ ನೀರನ್ನೇ ಹರಿಯ ಬಿಟ್ಟ ವಿಡಿಯೊದಿಂದ ಅಧಿಕಾರಿಗಳು ಪೇಚಿಗೀಡಾಗಿದ್ದಾರೆ. ಚಾಮರಾಜನಗರ ಜಿಲ್ಲೆಯ ತಾಲೂಕಿನ ಹೆಗ್ಗೋಠಾರ ಗ್ರಾಮದಲ್ಲಿ ಈ ದುರ್ಘಟನೆ ನಡೆದಿದ್ದು, ಶುಕ್ರವಾರ ಆ ಗ್ರಾಮದ ದಲಿತ ಯುವಕನೋರ್ವನ ಮದುವೆಗೆ ಹೆಚ್.ಡಿ.ಕೋಟೆ ಜಿಲ್ಲೆಯ ಸರಗೂರು ತಾಲೋಕಿಗೆ ಸೇರಿದ ಗ್ರಾಮವೊಂದರಿಂದ ಬಂದಿದ್ದ ಸಂಬಂಧಿಕರಲ್ಲಿ ಓರ್ವ ಮಹಿಳೆ ಮದುವೆ ಮುಗಿಸಿಕೊಂಡು ಹಿಂದಿರುಗುವಾಗ, ಆ ಗ್ರಾಮದ ಮಾರಿಗುಡಿ ಮುಂಭಾಗ ಇರುವ ತೊಂಬೆಯಲ್ಲಿ ನೀರು ಕುಡಿದಿದ್ದಾರೆ. ಇದನ್ನು ನೋಡಿದ ಅನ್ಯ ಕೋಮಿನ ವ್ಯಕ್ತಿಯೊಬ್ಬರು ಅವರನ್ನು ಬೈದು, ನಂತರ ತೊಂಬೆಯಲ್ಲಿದ್ದ ನೀರನ್ನು ಖಾಲಿ ಮಾಡಿ, ಹಸುವಿನ ಗಂಜಲದಿಂದ ತೊಳೆದು, ಶುದ್ಧ ಮಾಡಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಒಂದು ವೈರಲ್ ಆಗಿದೆ.
ಈ ವಿಡಿಯೊ ವೈರಲ್ ಆದ್ದರಿಂದ ಕೆಲ ಮಾಧ್ಯಮದವರು ಪೂರಕ ಸಾಕ್ಷ್ಯ ನೋಡದೆ ಸುದ್ದಿ ಪ್ರಕಟ ಮಾಡಿದ್ದರಿಂದ ಅಧಿಕಾರಿಗಳು ಪೇಚಿಗೆ ಸಿಲುಕಿದ್ದಾರೆ. ಪ್ರಕರಣದ ವಿಡಿಯೊ ನೋಡೊದೆ ಆದರೆ ಅಲ್ಲಿ ಹರಿಯುವ ಚಿತ್ರಣ ಇದೆ. ಮಾಧ್ಯಮದಲ್ಲಿ ಪ್ರಕಟವಾದಂತೆ ವೈರಲ್ ವಿಡಿಯೊದಲ್ಲಿ ದಲಿತ ಮಹಿಳೆ ಹೇಳಿಕೆ ಇಲ್ಲ..ಗೋಮೂತ್ರ ಹಾಕಿ ಶುಚಿಗೊಳಿಸುವ ಚಿತ್ರಣವೂ ಇಲ್ಲ. ಆದರೆ ಇಲಾಖೆನ್ವಯ ವರದಿ ಮೇಲೆ ಕಾರ್ಯೊನ್ಮುಖವಾಗಿ ಕೆಲಸ ಮಾಡುವೆವು..ತಪ್ಪು ಕಂಡುಬಂದಿದ್ದೆ ಆದರೆ ಕ್ರಮವಹಿಸಲಾಗುವುದು ಎಂದು ತಹಶೀಲ್ದಾರ್ ತಿಳಿಸಿದ್ದು.ಈ ಬಗ್ಗೆ ಲಿಖಿತ ದೂರು ಬಂದಿದ್ದರ ಬಗ್ಗೆ ಯಾರೂ ನೀಡಿಲ್ಲ ಎಂದಿದ್ದಾರೆ.
ಪೊಲೀಸ್ ಇಲಾಖೆ ಐಟಿ ವಿಂಗ್ ವೈಫಲ್ಯ: ಸೂಕ್ಷ್ಮ ವಿಷಯಗಳ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪಸರಿಸಿದಾಗ ಗಮನಹರಿಸಿ ಸತ್ಯಾಸತ್ಯತೆ ಬಗ್ಗೆ ಪರಿಶೀಲಿಸಬೇಕಾದ ಪೊಲೀಸ್ ಇಲಾಖೆಯ ಸೋಷಿಯಲ್ ಮೀಡಿಯಾ ಮಾನಿಟರಿಂಗ್ ವಿಭಾಗವೂ ವೈಫಲ್ಯವಾಗಿದೆ. ಈಗಾಗಲೆ ತಹಶೀಲ್ದಾರ್ ಅವರು ಸತ್ಯಾಸತ್ಯತೆ ಬಗ್ಗೆ ಕ್ರಮ ವಹಿಸಲು ಮುಂದಾಗಿದ್ದು, ಒಂದು ವೇಳೆ ವಿಡಿಯೊದಲ್ಲಿನ ಅಂಶ ಸುಳ್ಳಾದರೆ ಸುಳ್ಳು ವಿಡಿಯೊ ಅಪ್ಲೊಡ್ ಮಾಡಿದವರ ಮೇಲೂ ಕ್ರಮ ವಹಿಸಲು ಶಿಪಾರಸ್ಸು ಮಾಡಲಾಗುವುದು.ಅಥವಾ ಅವರೆ ಪ್ರಕರಣ ದಾಖಲು ಮಾಡಿಕೊಳ್ಳಬಹುದು ಎಂದು ತಿಳಿಸಿದ್ದಾರೆ