ಹಿಂದೂಗಳ ಐದು ಶತಮಾನಗಳ ಕನಸು ಅಯೋಧ್ಯೆ ಶ್ರೀರಾಮ ಮಂದಿರ ನಾಳೆ ಲೋಕಾರ್ಪಣೆಗೊಳ್ಳಲಿದೆ. ರಾಮ ಮಂದಿರ ಲೋಕಾರ್ಪಣೆ ಹಿನ್ನೆಲೆ ಅಯೋಧ್ಯೆಯಲ್ಲಿ ಸಂಭ್ರಮದ ವಾತಾವರಣ ಮನೆ ಮಾಡಿದೆಯಾಗಿದೆ.
ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನಾ ಸಮಾರಂಭದಲ್ಲಿ ಬೆಳಿಗ್ಗೆ 10 ರಿಂದ ಮಂಗಳ ವಾದ್ಯ ಮೊಳಗಲಿದೆ. ಉತ್ತರ ಪ್ರದೇಶದ ಆದಿವಾಸಿ ಜನಾಂಗದವರ ಜಾನಪದ ವಾದ್ಯಮೇಳ, ಬುಡಕಟ್ಟು ಜನಾಂಗದವರು ಭಾರಿಸುವ ವಾದ್ಯ ಸೇರಿದಂತೆ ವಿವಿಧ ರಾಜ್ಯಗಳ 50ಕ್ಕೂ ಹೆಚ್ಚು ಮನಮೋಹಕ ಸಂಗೀತ ವಾದ್ಯ ತಂಡಗಳು ಭಾಗಿಯಾಗಲಿದ್ದು, ಸುಮಾರು ಎರಡು ಗಂಟೆಗಳ ಕಾಲ ಮಂಗಳ ವಾದ್ಯ ಮೊಳಗಲಿದೆ. ಗರ್ಭಗುಡಿಯಲ್ಲಿ ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆ ನಡೆಯಲಿದ್ದು, ರಾಮಲಲ್ಲಾ ಮೂರ್ತಿ ಪ್ರಾಣ ಪ್ರತಿಷ್ಠಾಪನೆಯ ಶುಭ ಮುಹೂರ್ತ 12.29 ರಿಂದ 12.30 ರ ವರೆಗೆ (32 ಸೆಕೆಂಡುಗಳು) ಇರಲಿದ್ದು, ಪ್ರಾಣ ಪ್ರತಿಷ್ಠಾಪನೆಯ ಶುಭ ಸಮಯ ಕೇವಲ 84 ಸೆಕೆಂಡುಗಳು ಮಾತ್ರ ಇರಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಪೂಜಾ ವಿಧಿವಿಧಾನಗಳನ್ನು ನೆರವೇರಿಸಲಿದ್ದು, ಶ್ರೀರಾಮಲಲ್ಲಾ ಮೂರ್ತಿ ಪ್ರಾಣ ಪ್ರತಿಷ್ಠಾಪನೆಯನ್ನೂ ನೆರವೇರಿಸಲಿದ್ದಾರೆ. ಕಾಶಿಯ ಹೆಸರಾಂತ ವೈದಿಕ ಆಚಾರ್ಯ ಗಣೇಶ್ವರ್ ದ್ರಾವಿಡ್ ಹಾಗೂ ಆಚಾರ್ಯ ಲಕ್ಷ್ಮೀಕಾಂತ್ ದೀಕ್ಷಿತ್ ನೇತೃತ್ವದಲ್ಲಿ ಪೂಜಾ ಕೈಂಕರ್ಯಗಳು ನಡೆಯಲಿವೆ. ಇವರರ ನಿರ್ದೇಶನದಲ್ಲಿ 121 ವೈದಿಕ ಆಚಾರ್ಯರಿಂದ ಧಾರ್ಮಿಕ ಕ್ರಿಯೆ ನೆರವೇರಲಿದ್ದು, ಈ ವೇಳೆ 150 ಕ್ಕೂ ಹೆಚ್ಚು ಸಂಪ್ರದಾಯಗಳು, 50ಕ್ಕೂ ಹೆಚ್ಚು ಬುಡಕಟ್ಟು, ಕರಾವಳಿ, ದ್ವೀಪ, ಬುಡಕಟ್ಟು ಸಂಪ್ರದಾಯಗಳ ಸಂತರು ಮತ್ತು ಧಾರ್ಮಿಕ ಮುಖಂಡರು ಉಪಸ್ಥಿತರಿರಲಿದ್ದಾರೆಯಾಗಿದೆ.
ಪ್ರಾಣಪ್ರತಿಷ್ಠಾಪನೆಯ ಬಳಿಕ ರಾಮ ಜ್ಯೋತಿ ಬೆಳಗುವ ಮೂಲಕ ದೀಪಾವಳಿ ಆಚರಣೆ ಮಾಡಲಾಗುತ್ತದೆ. ಸಂಜೆ 10 ಲಕ್ಷ ದೀಪಗಳಿಂದ ಅಯೋಧ್ಯೆ ಕಂಗೊಳಿಸಲಿದೆ. ಅಯೋಧ್ಯೆಯ ಮನೆಗಳು, ಅಂಗಡಿಗಳು ಮತ್ತು ಪೌರಾಣಿಕ ಸ್ಥಳಗಳಲ್ಲಿ ‘ರಾಮ ಜ್ಯೋತಿ’ ಬೆಳಗಿಸಲಾಗುತ್ತದೆ. ಮಣ್ಣಿನಿಂದ ಮಾಡಿದ ದೀಪಗಳಿಂದ ಅಯೋಧ್ಯೆಯು ಬೆಳಗಲಿದ್ದು, ಸರಯೂ ನದಿಯ ದಡದ ರಾಮ್ ಕಿ ಪಾಡಿಯಲ್ಲಿ ದೀಪ ಬೆಳಗಲಾಗುತ್ತದೆ. ಕನಕ್ ಭವನ, ಹನುಮಾನ್ ಗಡಿ, ಗುಪ್ತರಘಾಟ್, ಸರಯು ಘಾಟ್, ಲತಾ ಮಂಗೇಶ್ಕರ್ ಚೌಕ್, ಮಣಿರಾಮ್ ದಾಸ್ ಕಂಟೋನ್ಮೆಂಟ್ ಸೇರಿದಂತೆ 100 ದೇವಸ್ಥಾನಗಳಲ್ಲಿ ದೀಪ ಬೆಳಗಲಾಗುತ್ತದೆ.