ಶಿವಮೊಗ್ಗ: ನಾಳೆ, ನಾಡಿದ್ದು ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ಉಳವಿಯ ಪತ್ರೆಸಾಲು, ಕಾನಹಳ್ಳಿ ಅಂದರೆ ಗಡೇಗದ್ದೆ ಗ್ರಾಮದಲ್ಲಿ ಮಂಡ್ಲಿಮನೆ ಶ್ರೀ ಬಸವಣ್ಣ ದೇವರ ನೂತನ ವಿಗ್ರಹ ಪ್ರತಿಷ್ಠಾಪನೆ ಮತ್ತು ನೂತನ ದೇವಾಲಯ ಲೋಕಾರ್ಪಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಈ ಬಗ್ಗೆ ಮಂಡ್ಲಿಮನೆ ಶ್ರೀ ಬಸವಣ್ಣ ಸೇವಾ ಸಮಿತಿ ಮತ್ತು ಕರ್ಜಿಕೊಪ್ಪ ಗ್ರಾಮಸ್ಥರು ಕನ್ನಡ ನ್ಯೂಸ್ ನೌಗೆ ಮಾಹಿತಿ ನೀಡಿದ್ದು, ದಿನಾಂಕ 02-11-2025ರ ನಾಳೆಯ ಭಾನುವಾರ ಮತ್ತು ದಿನಾಂಕ 03-11-2025ರ ನಾಡಿದ್ದು ಸೋಮವಾರದಂದು ಶ್ರೀ ಬಸವಣ್ಣ ದೇವರ ನೂತನ ವಿಗ್ರಹ ಪ್ರತಿಷ್ಠಾಪನಾ ಮತ್ತು ನೂತನ ದೇವಾಲಯ ಲೋಕಾರ್ಪಣಾ ಕಾರ್ಯಕ್ರಮ ಹಮ್ಮಿಕೊಂಡಿರುವುದಾಗಿ ತಿಳಿಸಿದ್ದಾರೆ.
ದಿನಾಂಕ 02-11-2025ರಂದು ಬೆಳಗ್ಗೆ 7 ಗಂಟೆಗೆ ವಿವಿಧ ಪೂಜಾ ಕೈಂಕರ್ಯಗಳು, ಹೋಮ-ಹವನಗಳು ನೆರವೇರಲಿವೆ. ಸಂಜೆ 4 ಗಂಟೆಗೆ ಮಂಗಳ ವಾದ್ಯ ಮತ್ತು ಪೂರ್ಣಕುಂಭ ಸಮೇತ ನೂತನ ಬಸವಣ್ಣ ದೇವರ ವಿಗ್ರಹದ ಮೆರವಣಿಗೆ ನಡೆಯಲಿದೆ. ಸಂಜೆ 6.30ಕ್ಕೆ ಏಕಾದಶ ರುದ್ರದ ಮೂಲಕ ಪೂಜೆ ಆರಂಭಗೊಂಡು, ಕಂಕಣ ಧಾರಣೆ ನೆರವೇರಲಿದೆ ಎಂದು ತಿಳಿಸಿದ್ದಾರೆ.
ದಿನಾಂಕ 03-11-2025ರ ಸೋಮವಾರದಂದು ಬೆಳಗ್ಗೆ ಬ್ರಾಹ್ಮಿ ಮುಹೂರ್ತದಲ್ಲಿ ನೂತನ ವಿಗ್ರಹಕ್ಕೆ ಅಷ್ಟಬಂಧ ಕ್ರಿಯೆ ನೆರವೇರಲಿದೆ. ಆಶೀರ್ವಾದ ಪೂರ್ವಕ ನಾಮಕರಣ ಬಲಿಪೂಜೆ, ಅಷ್ಟೋತ್ತರ, ಮಹಾಮಂಗಳಾರತಿ, ಪ್ರಸಾದ ವಿನಿಯೋದ ಬಳಿಕ ಮಧ್ಯಾಹ್ನ 1 ಗಂಟೆಗೆ ಅನ್ನದಾಸೋಹದ ವ್ಯವಸ್ಥೆ ಮಾಡಿರುವುದಾಗಿ ಹೇಳಿದೆ.
ಮಂಡ್ಲಿಮನೆ ಶ್ರೀ ಬಸವಣ್ಣ ದೇವರ ನೂತನ ವಿಗ್ರಹದ ಸೇವಾಕರ್ತರು ಕಾನಹಳ್ಳಿಯ ಲೋಲಾಕ್ಷಮ್ಮ, ವೀರಭದ್ರಪ್ಪ ಮತ್ತು ಕುಟುಂಬಸ್ಥರಾಗಿದ್ದಾರೆ. ದಾಸೋಹದ ಸೇವಾಕರ್ತರು ಕಟ್ಟಿನಕೆರೆಯ ಗೀತಾ, ಸೀತಾರಾಮಪ್ಪ ಭಟ್ಟರು ಮತ್ತು ಕುಟುಂಬಸ್ಥರು, ಕಾನಹಳ್ಳಿಯ ನಿರ್ಮಲ, ರವಿ.ಈ ಮತ್ತು ಕುಟುಂಬಸ್ಥರು ಆಗಿದ್ದಾರೆ. ಈ ಕಾರ್ಯಕ್ರಮಕ್ಕೆ ಹೆಚ್ಚಿನ ಸಹಕಾರವನ್ನು ದೂಗೂರು ಗ್ರಾಮ ಪಂಚಾಯ್ತಿಯ ಅಧ್ಯಕ್ಷರಾದಂತ ಫಯಾಜ್ ಅಹಮದ್, ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ ದ್ಯಾವಪ್ಪ, ಸಾರೆಕೊಪ್ಪದ ಕೆರೆಸ್ವಾಮಿ ಗೌಡ್ರು ಮತ್ತು ಕುಟುಂಬದವರಾಗಿದ್ದಾರೆ ಎಂಬುದಾಗಿ ತಿಳಿಸಿದೆ.
ಇನ್ನೂ ದಿನಾಂಕ 03-11-2025ರ ಸೋಮವಾರ ರಾತ್ರಿ 9 ಗಂಟೆಗೆ ಬೆಂಕಿ ಲತಾ ಅವರ ಸುಷ್ಮಾ ಮೆಲೋಡಿ ಅವರಿಂದ ಆರ್ಕೆಸ್ಟ್ರಾವನ್ನು ಕರ್ಜಿಕೊಪ್ಪದಲ್ಲಿ ಏರ್ಪಡಿಸಲಾಗಿದೆ. ಉಳವಿ ಸುತ್ತಮುತ್ತಲಿನ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿ, ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಕರ್ಜಿಕೊಪ್ಪದ ಮಂಡ್ಲಿಮನೆ ಶ್ರೀ ಬಸವಣ್ಣ ಸೇವಾ ಸಮಿತಿ ಮನವಿ ಮಾಡಿದೆ.
ವರದಿ; ವಸಂತ ಬಿ ಈಶ್ವರಗೆರೆ.., ಸಂಪಾದಕರು
ನೀವು ‘CM ಸಿದ್ಧರಾಮಯ್ಯ’ಗೆ ದೂರು ನೀಡಬೇಕೇ? ಜಸ್ಟ್ ಹೀಗೆ ಮಾಡಿ ಸಾಕು, ನಿಮ್ಮ ‘ಸಮಸ್ಯೆ ಕ್ಲಿಯರ್’
ಹಾವೇರಿ: ನ.3ರಂದು ‘ತುಳಜಾಭವಾನಿ ದೇವಿ’ಯ 26ನೇ ವರ್ಷದ ಜಾತ್ರಾ ಮಹೋತ್ಸವ








