ಚಿಕ್ಕಮಗಳೂರು : ಕಾಫಿನಾಡು ಚಿಕ್ಕಮಗಳೂರು ತಾಲೂಕಿನ ಚಂದ್ರದ್ರೋಣ ಪರ್ವತದಲ್ಲಿರುವ ಇನಾಂ ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾ ಸಂಪೂರ್ಣ ಹಿಂದೂ ಪೀಠಕ್ಕಾಗಿ ಆಗ್ರಹಿಸಿ ಗೋರಿ ಧ್ವಂಸ ಮಾಡಿದ್ದ 14 ಹಿಂದೂ ಕಾರ್ಯಕರ್ತರ ಮೇಲಿನ ಕೇಸ್ಗೆ ಚಾರ್ಜ್ ಶೀಟ್ ಸಲ್ಲಿಸಲು ಸರ್ಕಾರ ಅನುಮತಿ ನೀಡಿ ಸಮನ್ಸ್ ಜಾರಿ ಮಾಡಿರುವ ಹಿನ್ನೆಲೆಯಲ್ಲಿ 14 ಆರೋಪಿಗಳ ಪೈಕಿ 12 ಆರೋಪಿಗಳು ವಿಚಾರಣೆಗೆ ಹಾಜರಾಗಿದ್ದು ವಿಚಾರಣೆಯನ್ನು JMFC ಕೋರ್ಟ್ ಫೆಬ್ರುವರಿ 7ಕ್ಕೆ ಮುಂದೂಡಿದೆ.
ಸಮನ್ಸ್ ನೀಡಿರುವ ಹಿನ್ನೆಲೆಯಲ್ಲಿ ವಿಚಾರಣೆಗಾಗಿ 12 ಆರೋಪಿಗಳು ಕೋರ್ಟ್ ಗೆ ಹಾಜರಾಗಿದ್ದರು. 14 ಆರೋಪಿಗಳ ಪೈಕಿ 12 ಆರೋಪಿಗಳು ವಿಚಾರಣೆಗೆ ಹಾಜರಾಗಿದ್ದರು. ಸಮನ್ಸ್ ಜಾರಿಯಾದ ಹಿನ್ನೆಲೆಯಲ್ಲಿ ಆರೋಪಿಗಳು ನ್ಯಾಯಾಲಯಕ್ಕೆ ಹಾಜರಾಗಿದ್ದರು ಚಿಕ್ಕಮಗಳೂರಿನ ಇನಾಂ ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾದಲ್ಲಿ ಹಿಂದೂ ಪೀಠಕಾಗಿ ಆಗ್ರಹಿಸಿ ಗೊರಿಗಳನ್ನು ಧ್ವಂಸ ಮಾಡಿದ್ದರು.
ಸರ್ಕಾರದ ಅನುಮತಿ ಮೇರೆಗೆ 7 ವರ್ಷಗಳ ಬಳಿಕ ಪೊಲೀಸರು ದತ್ತ ಪೀಠ ಹೋರಾಟಗಾರರ ಮೇಲೆ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದಾರೆ. ಚಿಕ್ಕಮಗಳೂರು JMFC ನ್ಯಾಯಾಲಯದಿಂದ ಸಮನ್ಸ್ ಜಾರಿ ಆಗಿದೆ. ಈ ಹಿನ್ನೆಲೆ ಚಿಕ್ಕಮಗಳೂರು JMFC ನ್ಯಾಯಾಲಯಕ್ಕೆ 14 ಆರೋಪಿಗಳ ಪೈಕಿ 12 ಆರೋಪಗಳು ಹಾಜರಾಗಿದ್ದಾರೆ.
ಸರ್ಕಾರದ ಅನುಮತಿ ಮೇರೆಗೆ 7 ವರ್ಷಗಳ ಬಳಿಕ ಪೊಲೀಸರು ಈ ಪ್ರಕರಣದಲ್ಲಿ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದಾರೆ. ತುಡುಕೂರು ಮಂಜು, ಶಿವರಾಜ್, ಸಂದೇಶ್, ಸುಮಂತ್, ನಾಗ, ನಾಗೇಂದ್ರ ಪೂಜಾರಿ, ಮೋಹನ್, ಅಶೋಕ್, ತೇಜು, ಶ್ರೀನಾಥ್ ಮಹೇಂದ್ರ, ಸಂದೀಪ್, ರಾಮು ಸೇರಿದಂತೆ 14 ಆರೋಪಿಗಳು ಎಂದು ಹೇಳಲಾಗುತ್ತಿದೆ.