ಹೈದರಾಬಾದ್; ತೆಲುಗು ಹಿರಿಯ ನಟ, ಟಾಲಿವುಡ್ ‘ರೆಬೆಲ್ ಸ್ಟಾರ್’ ಎಂದೇ ಖ್ಯಾತರಾಗಿದ್ದ ʻಉಪ್ಪಲಪತಿ ಕೃಷ್ಣಂ ರಾಜು(Krishnam Raju)ʼ ಅವರು ಹೈದರಾಬಾದ್ನಲ್ಲಿ ನಿಧನರಾಗಿದ್ದಾರೆ.
ಇಂದು ಮುಂಜಾನೆ 3.45ಕ್ಕೆ ಕೃಷ್ಣಂ ರಾಜು ಅವರು ಕೊನೆಯುಸಿರೆಳೆದರು ಎಂದು ಕುಟುಂಬ ಮೂಲಗಳು ಮಾಹಿತಿ ನೀಡಿವೆ. ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಎಐಜಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
82 ವರ್ಷದ ಕೃಷ್ಣಂ ರಾಜು ಅವರು ಪತ್ನಿ ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ. ನಾಳೆ(ಸೋಮವಾರ) ಅವರ ಅಂತಿಮ ಸಂಸ್ಕಾರ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ರಾಜು ಅವರು ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ಮೊಗಲ್ತೂರಿನಲ್ಲಿ 20 ಜನವರಿ 1940 ರಂದು ಜನಿಸಿದರು.
ವಿದ್ಯಾರ್ಥಿಗಳೇ ಗಮನಿಸಿ : `CET’ ದಾಖಲಾತಿ ಪರಿಶೀಲನೆಗೆ ಮತ್ತೊಂದು ಅವಕಾಶ ನೀಡಿದ ಕೆಇಎ