ಮಂಗಳೂರು: ಸುರತ್ಕಲ್ ಟೋಲ್ ಗೇಟ್ ಹೋರಾಟ ಸಮಿತಿ ಇಂದು ಆಯೋಜಿಸಿರುವ ಟೋಲ್ ಗೇಟ್ ತೆರವು ಕಾರ್ಯಾಚರಣೆ ಹೋರಾಟದ ಹಿನ್ನೆಲೆ ಮುನ್ನೆಚ್ಚರಿಕಾ ಕ್ರಮವಾಗಿ ಟೋಲ್ ಗೇಟ್ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.
BIGG NEWS: ನನ್ನ ಅಪ್ಪನಾಣೆ ಇನ್ನೂ 5 ವರ್ಷ ನಾನೇ ಎಂಎಲ್ ಎ; ಶಾಸಕ ಶ್ರೀನಿವಾಸ್ ಭವಿಷ್ಯ
ಸುಮಾರು 10 ಕೆಎಸ್ಆರ್ಪಿ ತುಕಡಿಗಳು, ಐದು ಸಿಆರ್ಪಿಎಫ್ ತುಕಡಿಗಳು ಸೇರಿದಂತೆ 450 ಪೊಲೀಸ್ ಕಾನ್ಸ್ಟೇಬಲ್ ಹಾಗೂ 40 ಮಂದಿ ಅಧಿಕಾರಿಗಳು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ.
ಇದೀಗ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಾದ್ಯಂತ ಸಂಘ ಸಂಸ್ಥೆಗಳು ಪ್ರತಿಬಟನೆಗೆ ಬೆಂಬಲ ಸೂಚಿಸಿದ್ದಾರೆ. ಜೊತೆಗೆ ಹೋರಾಟ ಸಮಿತಿಯೂ ಪ್ರತಿಭಟನೆಗೆ ಅತ್ಯಧಿಕ ಸಂಖ್ಯೆಯಲ್ಲಿ ಜನವನ್ನು ಸೇರಿಸುವ ತಯಾರಿ ಮಾಡಿಕೊಂಡಿದೆ.ಅ.18ರಂದು ನಡೆಯುವ ಪ್ರತಿಭಟನೆಗೆ 5 ಸಾವಿರ ಜನ ಸೇರುವ ಸಾಧ್ಯತೆ ಇದೆ ಎಂದು ಹೋರಾಟ ಸಮಿತಿಯ ಮೂಲಗಳು ತಿಳಿಸಿದೆ. ಆದ್ದರಿಂದ ಮುನ್ನೆಚ್ಚರಿಕಾ ದೃಷ್ಟಿಯಿಂದ ಅಧಿಕ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ.