ಬೆಂಗಳೂರು : ಸಿಲಿಕಾನ್ ಸಿಟಿ ಜನರೇ ಎಚ್ಚರ.. ಎಚ್ಚರ.. ಇನ್ಮುಂದೆ ಎಲ್ಲೆಂದರಲ್ಲಿ ವಾಹನ ಪಾರ್ಕಿಂಗ್ ಮಾಡಿದ್ರೆ ನಿಮ್ಮ ವಾಹನವನ್ನ ಟೋಯಿಂಗ್ ಮಾಡಲಾಗುತ್ತದೆ. ಈ ಬೆಂಗಳೂರು ಪೊಲೀಸ್ ಕಮಿಷನರ್ ಪ್ರತಾಪ್ ರೆಡ್ಡಿ ಮಹತ್ವದ ಹೇಳಿಕೆ ನೀಡಿದ್ದು, ಸಿಲಿಕಾನ್ ಸಿಟಿಯಲ್ಲಿ ಟೋಯಿಂಗ್ಅಗತ್ಯ ಇದೆ ಎಂದಿದ್ದಾರೆ.
ಟೋಯಿಂಗ್ ನಿಯಮಗಳ ಬಗ್ಗೆ ಪೊಲೀಸ್ ಇಲಾಖೆ ನಿರ್ಧರಿಸುತ್ತೆ ಯಾವುದೇ ರೀತಿಯ ದೂರು ಬರದಂತೆ ಕ್ರಮಕೈಗೊಳ್ಳುತ್ತೇವೆ . ಜನಾಕ್ರೋಶ ಹಿನ್ನೆಲೆಯಲ್ಲಿ ಸ್ಥಗಿತವಾಗೊಳಿಸಲಾಗಿತ್ತು. 6 ತಿಂಗಳಿಂದ ಟೋಯಿಂಗ್ ಮಾಡೋದಕ್ಕೆ ಬ್ರೇಕ್ ಬಿದ್ದಿತ್ತು. ಟೋಯಿಂಗ್ ಪರಿಶೀಲನೆಗೆ ಕಾಲಾವಕಾಶ ನೀಡಿದ್ದ ಹೈಕೋರ್ಟ್. ಇದೀಗ ಮತ್ತೆ ಸಿಲಿಕಾನ್ ಸಿಟಿಯಲ್ಲಿ ಟೋಯಿಂಗ್ ಅಗತ್ಯ ಇದೆ ಎಂದು ಪೊಲೀಸ್ ಕಮಿಷನರ್ ಪ್ರತಾಪ್ ರೆಡ್ಡಿ ಹೇಳಿಕೆ ನೀಡಿದ್ದಾರೆ .