ಬೆಂಗಳೂರು: ಮೂಲೆಯಲ್ಲಿದ್ದ ನಿಜವಾದ ಸಾಧಕÀರನ್ನು ಹುಡುಕಿ ಗುರುತಿಸಿ ಪದ್ಮ ಪ್ರಶಸ್ತಿಗಳನ್ನು ಕೊಡುವ ಕೆಲಸವನ್ನು ಇಂದಿನ ಕೇಂದ್ರ ಸರಕಾರ ಮಾಡುತ್ತಿದೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಮೆಚ್ಚುಗೆ ಸೂಚಿಸಿದ್ದಾರೆ.
ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮದವರ ಜೊತೆ ಮಾತನಾಡಿದ ಅವರು, ಹಿಂದಿನ ಆಡಳಿತಗಳು ತನಗೆ ಬೇಕಾದವರಿಗೆ, ತಮ್ಮ ಪಕ್ಷಕ್ಕೆ ದೇಣಿಗೆ ಕೊಡುವವರಿಗೆ ಮಾತ್ರ ಪ್ರಶಸ್ತಿ ಕೊಡುತ್ತಿದ್ದವು ಎಂದು ಆರೋಪಿಸಿದರು.
ಬಾಬಾಸಾಹೇಬ ಅಂಬೇಡ್ಕರರು ಕೂಡ ಇದಕ್ಕೆ ಸಾಕ್ಷಿ. ಅವರನ್ನು ಚುನಾವಣೆಯಲ್ಲಿ ಸೋಲಿಸಿದವರಿಗೆ ಪದ್ಮ ಪ್ರಶಸ್ತಿ ಕೊಡಲಾಗಿತ್ತು. ಆದರೆ, ಅಂಬೇಡ್ಕರರಿಗೆ ಭಾರತ ರತ್ನ ಕೊಡಲಿಲ್ಲ ಎಂದು ಟೀಕಿಸಿದರು. ನಿಜವಾದ ಸಾಧಕರನ್ನು ಗುರುತಿಸಿ ಗೌರವಿಸುವ ಕೆಲಸ ಇಂದಿನ ನರೇಂದ್ರ ಮೋದಿಜೀ ಅವರ ಸರಕಾರದಿಂದ ಆಗುತ್ತಿದೆ ಎಂದು ವಿವರಿಸಿದರು. ಈ ಮೂಲಕ ರಾಜಕೀಯ ವ್ಯವಸ್ಥೆಯಲ್ಲಿ ಬದಲಾದ ದಿನಗಳನ್ನು ನಾವು ಕಾಣುವಂತಾಗಿದೆ ಎಂದು ವಿಶ್ಲೇಷಿಸಿದರು.
ಸ್ವಾತಂತ್ರ್ಯಕ್ಕಾಗಿ ರಕ್ತ ಹರಿಸಿದವರು, ಪ್ರಾಣತ್ಯಾಗ ಮಾಡಿದವರನ್ನು ನೆನಪಿಸಿಕೊಳ್ಳುತ್ತಿಲ್ಲ. ಯಾರು ಬ್ರಿಟಿಷರಿಗೆ ಸಿಂಹಸ್ವಪ್ನವಾಗಿದ್ದರೋ, ಜೈಲುಗಳಲ್ಲಿ ಜೀವನ ಕಳೆದರೋ ಅಂಥವರಿಗೆ ದೇಶದ್ರೋಹದ ಪಟ್ಟವನ್ನೂ ಕಟ್ಟಲಾಗಿದೆ ಎಂದು ಟೀಕಿಸಿದರು. ಯಾರು ಸೈನ್ಯವನ್ನು ಕಟ್ಟಿ ಬ್ರಿಟಿಷರಿಗೆ ಸಿಂಹಸ್ವಪ್ನವಾಗಿದ್ದರೋ, ಹೆದರಿಸುತ್ತಿದ್ದರೋ ಅಂಥವರನ್ನು ನಾಪತ್ತೆ ಮಾಡಿಬಿಟ್ಟರು ಎಂದು ಆಕ್ಷೇಪಿಸಿದರು.
ಬ್ರಿಟಿಷರೊಂದಿಗೆ ಚಕ್ಕಂದ ಆಡಿದವರು ಪಂಡಿತರಾಗಿ ಬಿಟ್ಟರು..
ಅತಿಥಿಗೃಹದಲ್ಲಿ ನರ್ತನ ಮಾಡಿಕೊಂಡು ಬ್ರಿಟಿಷರೊಂದಿಗೆ ಚಕ್ಕಂದ ಆಡಿದವರು ಪಂಡಿತರಾಗಿ ಬಿಟ್ಟರು. ಯಾರಿಗೆ ಆಗರ್ಭ ಶ್ರೀಮಂತಿಕೆ ಇತ್ತೋ, ಅನ್ನ ನೀರು ಇತ್ತೋ, ಬಟ್ಟೆ ಬರೆ ಇತ್ತೋ ಅವರನ್ನು ಉಪವಾಸ ಮಾಡಿದ್ದಕ್ಕೆ ಮಹಾತ್ಮರಾಗಿ ಈ ದೇಶ ಮಾಡಿತು ಎಂದು ಛಲವಾದಿ ನಾರಾಯಣಸ್ವಾಮಿ ಅವರು ತಿಳಿಸಿದರು.
ಊಟಕ್ಕಿಲ್ಲದೇ ಪರದಾಡುತ್ತ ಸ್ವಾತಂತ್ರ್ಯಕ್ಕಾಗಿ ತಮ್ಮ ಜೀವನವನ್ನೇ ಕೊಟ್ಟಿದ್ದರೋ ಅವರು ಮಣ್ಣುಪಾಲಾದರು. ಇದು ಈ ದೇಶದ ದುರಂತ. ಬಾಬಾಸಾಹೇಬ ಅಂಬೇಡ್ಕರರು ಹಾಕಿಕೊಟ್ಟ ಮಾರ್ಗದಲ್ಲಿ ಕೇಂದ್ರದಲ್ಲಿ ಇವತ್ತು ನಮ್ಮ ಸರಕಾರ ಇದೆ. ಜೊತೆಗೇ ಪ್ರಧಾನಮಂತ್ರಿಗಳು ಉತ್ತಮವಾದ ಅಭಿವೃದ್ಧಿ ಮತ್ತು ದೇಶವನ್ನು ಉತ್ತಮ ಪಥದಲ್ಲಿ ತೆಗೆದುಕೊಂಡು ಹೋಗುವ ಕಾರ್ಯ ಮಾಡುತ್ತಿದ್ದಾರೆ. ಇದನ್ನು ಪ್ರತಿಯೊಬ್ಬರೂ ಅರ್ಥ ಮಾಡಿಕೊಳ್ಳಬೇಕಿದೆ ಎಂದು ಮನವಿ ಮಾಡಿದರು. ಅವರ ಜೊತೆ ಹೆಜ್ಜೆಗೆ ಹೆಜ್ಜೆ ಹಾಕಿ ನಡೆಯಬೇಕಿದೆ ಎಂದು ತಿಳಿಸಿದರು.
ಪಕ್ಷದ ಪತ್ರಿಕೆ ‘ಕಮಲಪಥ’ದಲ್ಲಿ ಈ ಸಾರಿ ಸಂವಿಧಾನ ಸನ್ಮಾನ ಅಭಿಯಾನದ ಸಮರ್ಪಕ ಮಾಹಿತಿ ಕೊಡಲಾಗಿದೆ. ಇಡೀ ರಾಜ್ಯದಲ್ಲಿ ಬಿಜೆಪಿ ಇವತ್ತು ಎಲ್ಲ ಜನರನ್ನು ಒಗ್ಗೂಡಿಸುವ ಕೆಲಸ ಮಾಡುತ್ತಿದೆ. ಯಾವ ಜನಾಂಗಗಳನ್ನು ಕಾಂಗ್ರೆಸ್ ಹತ್ತಿರಕ್ಕೆ ಬಿಟ್ಟುಕೊಳ್ಳುತ್ತಿರಲಿಲ್ಲವೋ ಅವರನ್ನು ಜೊತೆಗೂಡಿ ಕೆಲಸ ಮಾಡುವುದು, ಈ ದೇಶದಲ್ಲಿ ಅಸ್ಪøಶ್ಯತೆ ನಿವಾರಣೆಗೆ ಶ್ರಮಿಸುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ಅದಕ್ಕಾಗಿ ಭೀಮ ಸಂಗಮ, ಸಂವಿಧಾನ ಸನ್ಮಾನ ಅಭಿಯಾನವನ್ನು ಮಾಡಿ ರಾಜ್ಯದಲ್ಲಿ ಸಂಚಲನವನ್ನು ಮೂಡಿಸಲಾಗುತ್ತಿದೆ ಎಂದು ವಿವರ ನೀಡಿದರು.
ಮಿಥ್ಯದ ಜೊತೆ ಹೋಗದಿರಿ- ಸತ್ಯ ಅರ್ಥ ಮಾಡಿಕೊಳ್ಳಿ..
ಕಲುಷಿತ ಮನಸ್ಸುಗಳು ಕೆಲವು ವಿಚಾರಗಳನ್ನು ಒಪ್ಪುವುದೇ ಇಲ್ಲ; ಸತ್ಯವೆಂದು ಗೊತ್ತಿದ್ದರೂ ಅದನ್ನು ಒಪ್ಪದ ಪರಿಸ್ಥಿತಿ ಅವರದು. ಯಾರು ಬಾಬಾಸಾಹೇಬ ಅಂಬೇಡ್ಕರರ ಅನುಯಾಯಿಗಳಿದ್ದಾರೋ, ಯಾರು ಸಂವಿಧಾನವನ್ನು ಸಂಪೂರ್ಣವಾಗಿ ಗೌರವಿಸುವ ಜನರಿದ್ದಾರೋ ಅಂಥವರು ಸತ್ಯವನ್ನು ಅರ್ಥ ಮಾಡಿಕೊಳ್ಳಬೇಕು. ಮಿಥ್ಯದ ಜೊತೆ ಹೋಗದಿರಿ ಎಂದು ಮನವಿ ಮಾಡಿದರು.