ಕೆಎನ್ಎನ್ಡಿಜಿಟಲ್ಡೆಸ್ಕ್: ನಿಮ್ಮ ಮಾನಸಿಕ ಆರೋಗ್ಯವನ್ನು ಸುಧಾರಿಸುವುದು ಹೇಗೆ ಎಂದು ಯೋಚಿಸುತ್ತಿದ್ದೀರಾ? ನಿಮಗೆ ಅಥವಾ ನೀವು ಕಾಳಜಿ ವಹಿಸುವ ಯಾರಿಗಾದರೂ ಮಾನಸಿಕ ಆರೋಗ್ಯ ಸಹಾಯದ ಅಗತ್ಯವಿದ್ದರೆ, ಅದು ಲಭ್ಯವಿದೆ ಎಂದು ತಿಳಿದುಕೊಳ್ಳಿ. ನೆನಪಿಡಿ, ನೀವು ಮಾನಸಿಕ ಆರೋಗ್ಯ ಸ್ಥಿತಿಗೆ ಮುಂಚಿತವಾಗಿ ಚಿಕಿತ್ಸೆ ನೀಡಿದಷ್ಟೂ, ಚಿಕಿತ್ಸೆಯು ಯಶಸ್ವಿಯಾಗುವ ಸಾಧ್ಯತೆಗಳು ಉತ್ತಮವಾಗಿರುತ್ತವೆ. ವೈಯಕ್ತಿಕ ಅಥವಾ ಕುಟುಂಬ ಚಿಕಿತ್ಸೆ, ಬೆಂಬಲ ಗುಂಪುಗಳು, ಆನ್ ಲೈನ್ ಸೇವೆಗಳು, ಸಮುದಾಯ ಚಿಕಿತ್ಸಾಲಯಗಳು, ಅಥವಾ ನಿಮಗೆ ಸಹಾಯ ಮಾಡುವಂತೆ ಸ್ನೇಹಿತ ಅಥವಾ ಕುಟುಂಬ ಸದಸ್ಯರನ್ನು ಕೇಳುವ ಮೂಲಕ ನೀವು ಸಹಾಯವನ್ನು ಪಡೆಯಬಹುದು.
ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ಡಿಇಪಿಡಬ್ಲ್ಯೂಡಿ ವತಿಯಿಂದ ದಿನದ 24 ಗಂಟೆಗಳೂ ಕಾರ್ಯನಿರ್ವಹಿಸುವ ಮಾನಸಿಕ ಆರೋಗ್ಯ ಪುನರ್ ವಸತಿ ಉಚಿತ ಸಹಾಯವಾಣಿ ಕಿರಣ್ (1800-599-0019) 13 ಭಾಷೆಗಳಲ್ಲಿ ಆರಂಭಿಸಲಾಗಿದೆ. ಮಾನಸಿಕ ಖಿನ್ನತೆಯಿಂದ ಬಳಲುತ್ತಿರುವ ವ್ಯಕ್ತಿಗಳಿಗೆ ಪರಿಹಾರ ಮತ್ತು ಬೆಂಬಲಗಳನ್ನು ನೀಡಲಾಗುವುದು, ವಿಶೇಷವಾಗಿ ಕೋವಿಡ್ ಸಾಂಕ್ರಾಮಿಕದ ನಂತರ ಹೆಚ್ಚಾಗುತ್ತಿರುವ ಮಾನಸಿಕ ಕಾಯಿಲೆಗಳ ಹಿನ್ನೆಲೆಯಲ್ಲಿ ಇದನ್ನು ಆರಂಭಿಸಲಾಗಿದೆ.
ಸಹಾಯವಾಣಿ ಈ ರೀತಿಯಲ್ಲಿ ಕೆಲಸ ಮಾಡುತ್ತದೆ, ಅದೆಂದರೆ ಭಾರತದ ಯಾವುದೇ ಭಾಗದಿಂದ ಯಾವುದೇ ಬಗೆಯ ಸ್ಥಿರ ಅಥವಾ ಮೊಬೈಲ್ ದೂರವಾಣಿಗಳಿಂದ ಉಚಿತ ಸಹಾಯವಾಣಿ ಸಂಖ್ಯೆ1800-599-0019ಗೆ ಕರೆ ಮಾಡಬಹುದು. ಸ್ವಾಗತ ಸಂದೇಶದ ನಂತರ ಸರಿಯಾದ ಗುಂಡಿ(ಬಟನ್ )ಯನ್ನು ಒತ್ತಿ, ಭಾಷೆಯನ್ನು ಆಯ್ಕೆ ಮಾಡಿಕೊಳ್ಳಬೇಕು; ಭಾಷೆಯ ಆಯ್ಕೆಯ ನಂತರ ರಾಜ್ಯ/ಕೇಂದ್ರಾಡಳಿತ ಪ್ರದೇಶವನ್ನು ಆಯ್ಕೆ ಮಾಡಿಕೊಳ್ಳಬೇಕು. ಆನಂತರ ನೀವು ಸ್ಥಳೀಯ ಸಹಾಯವಾಣಿ ಕೇಂದ್ರ ಅಥವಾ ಉದ್ದೇಶಿತ ರಾಜ್ಯದ ಜೊತೆ ಸಂಪರ್ಕ ಸಾಧಿಸುತ್ತೀರಿ, ಆನಂತರ ಮಾನಸಿಕ ಆರೋಗ್ಯ ತಜ್ಞರು ನಿಮ್ಮ ಸಮಸ್ಯೆಯನ್ನು ಬಗೆಹರಿಸುವರು ಅಥವಾ ಬಾಹ್ಯ ಸಹಾಯಕ್ಕಾಗಿ ಬೇರೆಯವರಿಗೆ (ಕ್ಲಿನಿಕಲ್, ಕ್ಲಿನಿಕಲ್ ಮನಃಶಾಸ್ತ್ರಜ್ಞ/ ಪುನರ್ವಸತಿ ಮನಃಶಾಸ್ತ್ರಜ್ಞ/ ಮನಃಶಾಸ್ತ್ರಜ್ಞ) ಸೂಚಿಸುವರು/ಸಂಪರ್ಕಿಸುವಂತೆ ಹೇಳುವರು.
ಈ ಉಚಿತ ಸಹಾಯವಾಣಿ ಸಂಖ್ಯೆ ಬಿಎಸ್ಎನ್ಎಲ್ ನ ತಾಂತ್ರಿಕ ಸಮನ್ವಯದೊಂದಿಗೆ ವಾರದ ಏಳು ದಿನವೂ ದಿನದ 24 ಗಂಟೆಗಳು ಕಾರ್ಯನಿರ್ವಹಿಸಲಿವೆ. ಈ ಸಹಾಯವಾಣಿಯಲ್ಲಿ 8 ರಾಷ್ಟ್ರೀಯ ಸಂಸ್ಥೆಗಳು ಸೇರಿದಂತೆ 25 ಸಂಸ್ಥೆಗಳು ಒಳಗೊಂಡಿವೆ. ಇದಕ್ಕೆ 660 ಕ್ಲಿನಿಕಲ್ ಮತ್ತು ಪುನರ್ವಸತಿ ಮನಃಶಾಸ್ತ್ರಜ್ಞರು ಹಾಗೂ 668 ಮನಃಶಾಸ್ತ್ರಜ್ಞರ ಬೆಂಬಲವಿದೆ. 13 ಭಾಷೆಗಳ ಸಹಾಯವಾಣಿಗಳಲ್ಲಿ ಹಿಂದಿ, ಅಸ್ಸಾಮಿ, ತಮಿಳು, ಮರಾಠಿ, ಒರಿಯಾ, ತೆಲುಗು, ಮಲಯಾಳಂ, ಗುಜರಾತ್, ಪಂಜಾಬಿ, ಕನ್ನಡ, ಬೆಂಗಾಲಿ, ಉರ್ದು ಮತ್ತು ಇಂಗ್ಲಿಷ್ ಭಾಷೆಗಳು ಸೇರಿವೆ.
ಈ ಉಚಿತ ಸಹಾಯವಾಣಿ ಸಂಖ್ಯೆ ಬಿಎಸ್ಎನ್ಎಲ್ ನ ತಾಂತ್ರಿಕ ಸಮನ್ವಯದೊಂದಿಗೆ ವಾರದ ಏಳು ದಿನವೂ ದಿನದ 24 ಗಂಟೆಗಳು ಕಾರ್ಯನಿರ್ವಹಿಸಲಿವೆ. ಈ ಸಹಾಯವಾಣಿಯಲ್ಲಿ 8 ರಾಷ್ಟ್ರೀಯ ಸಂಸ್ಥೆಗಳು ಸೇರಿದಂತೆ 25 ಸಂಸ್ಥೆಗಳು ಒಳಗೊಂಡಿವೆ. ಇದಕ್ಕೆ 660 ಕ್ಲಿನಿಕಲ್ ಮತ್ತು ಪುನರ್ವಸತಿ ಮನಃಶಾಸ್ತ್ರಜ್ಞರು ಹಾಗೂ 668 ಮನಃಶಾಸ್ತ್ರಜ್ಞರ ಬೆಂಬಲವಿದೆ. 13 ಭಾಷೆಗಳ ಸಹಾಯವಾಣಿಗಳಲ್ಲಿ ಹಿಂದಿ, ಅಸ್ಸಾಮಿ, ತಮಿಳು, ಮರಾಠಿ, ಒರಿಯಾ, ತೆಲುಗು, ಮಲಯಾಳಂ, ಗುಜರಾತ್, ಪಂಜಾಬಿ, ಕನ್ನಡ, ಬೆಂಗಾಲಿ, ಉರ್ದು ಮತ್ತು ಇಂಗ್ಲಿಷ್ ಭಾಷೆಗಳು ಸೇರಿವೆ.
ಈ ಸಹಾಯವಾಣಿಯ ಉದ್ದೇಶ, ಶೀಘ್ರ ತಪಾಸಣೆಗೆ ನೆರವಾಗುವುದು, ಪ್ರಾಥಮಿಕ ಚಿಕಿತ್ಸೆ, ಮಾನಸಿಕ ಬೆಂಬಲ, ಒತ್ತಡ ನಿರ್ವಹಣೆ, ಮಾನಸಿಕ ಸೌಖ್ಯ, ವಿಚಿತ್ರ ನಡವಳಿಕೆಯನ್ನು ನಿಯಂತ್ರಿಸುವುದು, ಮಾನಸಿಕ ಬಿಕ್ಕಟ್ಟು ನಿರ್ವಹಣೆ ಮತ್ತು ಮಾನಸಿಕ ಆರೋಗ್ಯ ತಜ್ಞರ ಜೊತೆ ಭೇಟಿಗೆ ನೆರವಾಗುವುದಾಗಿದೆ. ಒತ್ತಡ, ಒಬ್ಸೆಸಿವ್ ಕಂಪಲ್ಸಿವ್ ಡಿಸಾರ್ಡರ್(ಒಸಿಡಿ), ಆತ್ಮಹತ್ಯೆ, ಖಿನ್ನತೆ, ಭಯದ ದಾಳಿಗಳು, ಹೊಂದಾಣಿಕೆ ದೋಷಗಳು, ಒತ್ತಡದಿಂದ ಉಂಟಾಗುವ ದೋಷಗಳು ಮತ್ತು ಮಾದಕ ವ್ಯಸನ ಗಳನ್ನು, ದೌರ್ಜನ್ಯಗಳನ್ನು ತಡೆಯಲು ಈ ಸಹಾಯವಾಣಿ ಸಂಕಷ್ಟದಲ್ಲಿರುವ ಜನರಿಗೆ ನೆರವು ನೀಡುವುದಲ್ಲದೆ, ಸಾಂಕ್ರಾಮಿಕದಿಂದ ಉಂಟಾಗುವ ಮಾನಸಿಕ ಆರೋಗ್ಯ ತುರ್ತು ಸೇವೆಗಳನ್ನು ಒದಗಿಸಲಿದೆ.
ಈ ಸಹಾಯವಾಣಿಯನ್ನು ಚೆನ್ನೈನ ರಾಷ್ಟ್ರೀಯ ಬಹುಬಗೆಯ ವಿಶೇಷಚೇತನ ವ್ಯಕ್ತಿಗಳ ಸಬಲೀಕರಣ ಸಂಸ್ಥೆ(ಎನ್ಐಇಪಿಎಂಡಿ) ಮತ್ತು ಸೆಹೋರ್ ನ ರಾಷ್ಟ್ರೀಯ ಮಾನಸಿಕ ಆರೋಗ್ಯ ಪುನರ್ ವಸತಿ ಕೇಂದ್ರ(ಎನ್ಐಎಂಎಚ್ಆರ್)ಗಳ ಸಮನ್ವಯದಿಂದ ನಡೆಸಲಾಗುವುದು. ಈ ಸಹಾಯವಾಣಿಗೆ ಭಾರತೀಯ ಕ್ಲಿನಿಕಲ್ ಮನಃಶಾಸ್ತ್ರಜ್ಞರ ಒಕ್ಕೂಟ(ಐಎಸಿಪಿ), ಭಾರತೀಯ ಮನಃಶಾಸ್ತ್ರಜ್ಞರ ಒಕ್ಕೂಟ(ಐಪಿಎ) ಮತ್ತು ಭಾರತೀಯ ಮನಃಶಾಸ್ತ್ರ ಸಾಮಾಜಿಕ ಕಾರ್ಯಕರ್ತರ ಒಕ್ಕೂಟ(ಐಪಿಎಸ್ ಡಬ್ಲ್ಯೂಎ) ವೃತ್ತಿಪರ ಬೆಂಬಲವನ್ನು ನೀಡಲಿವೆ.