Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಸಾರಿಗೆ ಸಂಸ್ಥೆಗಳ ಆರ್ಥಿಕ ಸಂಕಷ್ಟಕ್ಕೆ ಬಿಜೆಪಿಯ ಆಡಳಿತವೇ ಮೂಲ ಕಾರಣ: ಸಚಿವ ರಾಮಲಿಂಗಾರೆಡ್ಡಿ ವಾಗ್ದಾಳಿ

30/04/2026 9:49 PM

ರಾಜ್ಯದ ಕಟ್ಟಡ ಕಾರ್ಮಿಕರಿಗೆ ಸರ್ಕಾರದಿಂದ ಬಂಫರ್ ಗಿಫ್ಟ್: ಮಕ್ಕಳಿಗೆ ಶೈಕ್ಷಣಿಕ ಕಿಟ್ ವಿತರಣೆಗೆ ಸಂಪುಟ ಅನುಮೋದನೆ

30/04/2026 9:30 PM

ಇಂದು ಸಿಎಂ ಸಿದ್ಧರಾಮಯ್ಯ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯ ಪ್ರಮುಖ ಹೈಲೈಟ್ಸ್ ಇಲ್ಲಿವೆ ಓದಿ! Karnataka Cabinet Meeting

30/04/2026 9:05 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರೈಲ್ವೆ ಪ್ರಯಾಣಿಕರ ಗಮನಕ್ಕೆ: ಈ ನಿಲ್ದಾಣಗಳ ನಡುವೆ ಹೊಸ ರೈಲು ಸಂಚಾರ ಪ್ರಾರಂಭ
KARNATAKA

ರೈಲ್ವೆ ಪ್ರಯಾಣಿಕರ ಗಮನಕ್ಕೆ: ಈ ನಿಲ್ದಾಣಗಳ ನಡುವೆ ಹೊಸ ರೈಲು ಸಂಚಾರ ಪ್ರಾರಂಭ

By kannadanewsnow0907/10/2024 5:39 PM

ಬೆಂಗಳೂರು: ರೈಲ್ವೆ ಪ್ರಯಾಣಿಕರಿಗೆ ಗುಡ್ ನ್ಯೂಸ್ ಎನ್ನುವಂತೆ ಸಿಕಂದರಾಬಾದ್‌-ವಾಸ್ಕೋ-ಡ-ಗಾಮಾ ನಿಲ್ದಾಣಗಳ ನಡುವೆ ಹೊಸ ರೈಲು ಸಂಚಾರ ಪ್ರಾರಂಭಗೊಂಡಿದೆ.

ಈ ಬಗ್ಗೆ ನೈರುತ್ಯ ರೈಲ್ವೆಯಿಂದ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದ್ದು, ತೆಲಂಗಾಣ ಮತ್ತು ಗೋವಾ ರಾಜ್ಯಗಳ ನಡುವಿನ ಪ್ರವಾಸೋದ್ಯಮ ಮತ್ತು ಸಂಪರ್ಕಕ್ಕೆ ಪ್ರಮುಖ ಉತ್ತೇಜನ ನೀಡುವ ನಿಟ್ಟಿನಲ್ಲಿ, ಸಿಕಂದರಾಬಾದ್ ಮತ್ತು ವಾಸ್ಕೋ-ಡ-ಗಾಮಾ ನಿಲ್ದಾಣಗಳ ನಡುವೆ ಹೊಸ ದ್ವಿ-ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲು ಸೇವೆಯನ್ನು (ರೈಲುಗಳ ಸಂಖ್ಯೆ 17039/17040) ಪರಿಚಯಿಸಲು ರೈಲ್ವೆ ಮಂಡಳಿಯು ಅನುಮೋದನೆ ನೀಡಿದೆ ಎಂದಿದೆ.

ನಿಯಮಿತ ಸೇವೆಯ ವಿವರ ಈ ಕೆಳಗಿನಂತಿವೆ:

1. ಅಕ್ಟೋಬರ್ 9, 2024 ರಿಂದ ಜಾರಿಗೆ ಬರುವಂತೆ, ರೈಲು ಸಂಖ್ಯೆ 17039 ಸಿಕಂದರಾಬಾದ್-ವಾಸ್ಕೋ-ಡ-ಗಾಮಾ ಬೈ-ವೀಕ್ಲಿ ಎಕ್ಸ್‌ಪ್ರೆಸ್ ರೈಲು ಸಿಕಂದರಾಬಾದ್‌ನಿಂದ ಪ್ರತಿ ಬುಧವಾರ ಮತ್ತು ಶುಕ್ರವಾರ ಬೆಳಿಗ್ಗೆ 10:05 ಗಂಟೆಗೆ ಹೊರಟು, ಮರುದಿನ ಬೆಳಿಗ್ಗೆ 5:45 ಕ್ಕೆ ವಾಸ್ಕೋ-ಡ-ಗಾಮಾವನ್ನು ತಲುಪಲಿದೆ.

ಮಾರ್ಗದಲ್ಲಿ, ಈ ರೈಲು ಕಾಚಿಗುಡ (10:18/10:20 AM), ಶಾದ್‌ನಗರ (11:04/11:05 AM), ಜಡ್ಚೆರ್ಲಾ (11:37/11:38 AM), ಮಹಬೂಬ್‌ನಗರ (11:55/11:57 AM), ಗದ್ವಾಲ್ (12:49/12:50 PM), ಕರ್ನೂಲ್ ಸಿಟಿ (1:50/1:52 PM), ಡೋನ್ (3:20/3:25 PM), ಗುಂತಕಲ್ (4:50/5:05 PM), ಬಳ್ಳಾರಿ (6:35/6:40 PM), ಹೊಸಪೇಟೆ (7:50/7:55 PM), ಕೊಪ್ಪಳ (8:28/8:30 PM), ಗದಗ 9:32/9:34 PM), ಎಸ್ಎಸ್ಎಸ್ ಹುಬ್ಬಳ್ಳಿ (10:50/11:00 PM), ಧಾರವಾಡ (11:23/11:25 PM), ಲೋಂಡಾ (12:50/12:52 AM), ಕ್ಯಾಸಲ್ ರಾಕ್ (1 :30/1:40 AM), ಕುಲೆಮ್ (3:20/3:25 AM), ಸ್ಯಾಂವೊರ್ಡೆಮ್ (3:44/3:45 AM) ಮತ್ತು ಮಡಗಾಂವ್ (4:15/4:20 AM) ನಿಲ್ದಾಣಗಳಲ್ಲಿ ಆಗಮಿಸಿ/ನಿರ್ಗಮಿಸಲಿದೆ.

2. ಅಕ್ಟೋಬರ್ 10, 2024 ರಿಂದ ಜಾರಿಗೆ ಬರುವಂತೆ, ರೈಲು ಸಂಖ್ಯೆ 17040 ವಾಸ್ಕೋ-ಡ-ಗಾಮಾ-ಸಿಕಂದರಾಬಾದ್ ಬೈ-ವೀಕ್ಲಿ ಎಕ್ಸ್‌ಪ್ರೆಸ್ ರೈಲು ವಾಸ್ಕೋ-ಡ-ಗಾಮಾದಿಂದ ಪ್ರತಿ ಗುರುವಾರ ಮತ್ತು ಶನಿವಾರ ಬೆಳಿಗ್ಗೆ 9:00 ಗಂಟೆಗೆ ಹೊರಟು, ಮರುದಿನ ಬೆಳಿಗ್ಗೆ 6:20 ಕ್ಕೆ ಸಿಕಂದರಾಬಾದ್ ನಿಲ್ದಾಣ ತಲುಪಲಿದೆ.

ಮಾರ್ಗದಲ್ಲಿ, ಈ ರೈಲು ಮಡಗಾಂವ್ (9:30/9:35 AM), ಸ್ಯಾಂವೊರ್ಡೆಮ್ (9:49/9:50 AM), ಕುಲೆಮ್ (10:15/10:20 AM), ಕ್ಯಾಸಲ್ ರಾಕ್ (11:30/11:35 AM), ಲೋಂಡಾ (12:10/12:12 PM), ಧಾರವಾಡ (1:38/1:40 PM), ಎಸ್ಎಸ್ಎಸ್ ಹುಬ್ಬಳ್ಳಿ (2:20/2:30 PM), ಗದಗ (3:30/3:32 PM), ಕೊಪ್ಪಳ (4:18/4:20 PM), ಹೊಸಪೇಟೆ (5:00/5:05 PM), ಬಳ್ಳಾರಿ (7:10/7:15 PM), ಗುಂತಕಲ್ 8:40/8:55 PM), ಡೋನ್ (10:50/10:55 PM), ಕರ್ನೂಲ್ ಸಿಟಿ (11:48/11:50 PM), ಗದ್ವಾಲ್ (12:49/12:50 AM), ಮಹಬೂಬ್‌ನಗರ (3 :38/3:40 AM), ಜಡ್ಚೆರ್ಲಾ (4:04/4:05 AM), ಶಾದ್‌ನಗರ (4:19/4:20 AM) ಮತ್ತು ಕಾಚಿಗುಡಾ (5:18/5:20 AM) ನಿಲ್ದಾಣಗಳಲ್ಲಿ ಆಗಮಿಸಿ/ನಿರ್ಗಮಿಸಲಿದೆ.

ಈ ರೈಲಿನಲ್ಲಿ ಫಸ್ಟ್ ಎಸಿ ಕ್ಲಾಸ್-1, ಎಸಿ 2-ಟೈರ್-2, ಎಸಿ 3-ಟೈರ್-3, ಎಸಿ 3-ಟೈರ್ ಎಕಾನಮಿ-2, ಸ್ಲೀಪರ್ ಕ್ಲಾಸ್-7, ಜನರಲ್ ಸೆಕೆಂಡ್ ಕ್ಲಾಸ್-4 ಮತ್ತು 2-ಬ್ರೇಕ್ ವ್ಯಾನ್ ಕಮ್ ಜನರೇಟರ್ ಕಾರುಗಳು ಸೇರಿದಂತೆ 21 ಆಧುನಿಕ ಎಲ್ ಎಚ್ ಬಿ ಬೋಗಿಗಳು ಇರಲಿವೆ.

ಈ ಹೊಸ ರೈಲು ಸೇವೆಯು ಪ್ರವಾಸಿಗರಿಗೆ ಮತ್ತು ಸ್ಥಳೀಯ ಪ್ರಯಾಣಿಕರಿಗೆ ತಡೆರಹಿತ ಸಂಪರ್ಕವನ್ನು ನೀಡುತ್ತದೆ, ಎರಡು ಸಾಂಸ್ಕೃತಿಕವಾಗಿ ಶ್ರೀಮಂತ ಪ್ರದೇಶಗಳ ನಡುವೆ ಅನುಕೂಲಕರ ಸಂಪರ್ಕವನ್ನು ಒದಗಿಸುತ್ತದೆ ಎಂದು ನೈರುತ್ಯ ರೈಲ್ವೆಯು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಆಭರಣ ಖರೀದಿ ನಿರೀಕ್ಷೆಯಲ್ಲಿದ್ದವರಿಗೆ ಬಿಗ್ ಶಾಕ್: 10 ಗ್ರಾಂ ಚಿನ್ನದ ದರ ದಾಖಲೆಯ 78,700ಕ್ಕೆ ಏರಿಕೆ | Gold prices

BREAKING: ಜಾತಿಗಣತಿ ವರದಿ ಜಾರಿ ವಿಚಾರ: ಅ.18ರಂದು ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ತೀರ್ಮಾನ- ಸಿಎಂ ಸಿದ್ಧರಾಮಯ್ಯ

ಜಾತಿಗಣತಿ ವರದಿ ಇಟ್ಟುಕೊಂಡು ವಿಧಾನಸಭೆ ವಿಸರ್ಜಿಸಿ ಚುನಾವಣೆಗೆ ಹೋಗಿ: HDK ಸವಾಲು

Share. Facebook Twitter LinkedIn WhatsApp Email

Related Posts

ಸಾರಿಗೆ ಸಂಸ್ಥೆಗಳ ಆರ್ಥಿಕ ಸಂಕಷ್ಟಕ್ಕೆ ಬಿಜೆಪಿಯ ಆಡಳಿತವೇ ಮೂಲ ಕಾರಣ: ಸಚಿವ ರಾಮಲಿಂಗಾರೆಡ್ಡಿ ವಾಗ್ದಾಳಿ

30/04/2026 9:49 PM2 Mins Read

ರಾಜ್ಯದ ಕಟ್ಟಡ ಕಾರ್ಮಿಕರಿಗೆ ಸರ್ಕಾರದಿಂದ ಬಂಫರ್ ಗಿಫ್ಟ್: ಮಕ್ಕಳಿಗೆ ಶೈಕ್ಷಣಿಕ ಕಿಟ್ ವಿತರಣೆಗೆ ಸಂಪುಟ ಅನುಮೋದನೆ

30/04/2026 9:30 PM1 Min Read

ಇಂದು ಸಿಎಂ ಸಿದ್ಧರಾಮಯ್ಯ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯ ಪ್ರಮುಖ ಹೈಲೈಟ್ಸ್ ಇಲ್ಲಿವೆ ಓದಿ! Karnataka Cabinet Meeting

30/04/2026 9:05 PM2 Mins Read
Recent News

ಸಾರಿಗೆ ಸಂಸ್ಥೆಗಳ ಆರ್ಥಿಕ ಸಂಕಷ್ಟಕ್ಕೆ ಬಿಜೆಪಿಯ ಆಡಳಿತವೇ ಮೂಲ ಕಾರಣ: ಸಚಿವ ರಾಮಲಿಂಗಾರೆಡ್ಡಿ ವಾಗ್ದಾಳಿ

30/04/2026 9:49 PM

ರಾಜ್ಯದ ಕಟ್ಟಡ ಕಾರ್ಮಿಕರಿಗೆ ಸರ್ಕಾರದಿಂದ ಬಂಫರ್ ಗಿಫ್ಟ್: ಮಕ್ಕಳಿಗೆ ಶೈಕ್ಷಣಿಕ ಕಿಟ್ ವಿತರಣೆಗೆ ಸಂಪುಟ ಅನುಮೋದನೆ

30/04/2026 9:30 PM

ಇಂದು ಸಿಎಂ ಸಿದ್ಧರಾಮಯ್ಯ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯ ಪ್ರಮುಖ ಹೈಲೈಟ್ಸ್ ಇಲ್ಲಿವೆ ಓದಿ! Karnataka Cabinet Meeting

30/04/2026 9:05 PM

​ಭೂಮಿಯ ಒಳಗಡೆ ನಡೀತಿದ್ಯಾ ಭೀಕರ ಬದಲಾವಣೆ? ‘ಕ್ಯಾಸ್ಕೇಡಿಯಾ’ ಅಡಿಯಲ್ಲಿ ಒಡೆಯುತ್ತಿದೆ ಭೂಕವಚ; ವಿಜ್ಞಾನಿಗಳ ಸಂಶೋಧನೆಯಲ್ಲಿ ಶಾಕಿಂಗ್ ನ್ಯೂಸ್!

30/04/2026 9:01 PM
State News
KARNATAKA

ಸಾರಿಗೆ ಸಂಸ್ಥೆಗಳ ಆರ್ಥಿಕ ಸಂಕಷ್ಟಕ್ಕೆ ಬಿಜೆಪಿಯ ಆಡಳಿತವೇ ಮೂಲ ಕಾರಣ: ಸಚಿವ ರಾಮಲಿಂಗಾರೆಡ್ಡಿ ವಾಗ್ದಾಳಿ

By kannadanewsnow0930/04/2026 9:49 PM KARNATAKA 2 Mins Read

ಬೆಂಗಳೂರು: ಸಾರಿಗೆ ಸಂಸ್ಥೆಗಳ ಇಂದಿನ ಆರ್ಥಿಕ ದುಸ್ಥಿತಿ ಮತ್ತು ನೌಕರರ ಸಮಸ್ಯೆಗಳಿಗೆ ಬಿಜೆಪಿಯ ಆಡಳಿತಾವಧಿಯಲ್ಲಿ ತೆಗೆದುಕೊಂಡ ತಪ್ಪು ನಿರ್ಧಾರಗಳೇ ಕಾರಣ…

ರಾಜ್ಯದ ಕಟ್ಟಡ ಕಾರ್ಮಿಕರಿಗೆ ಸರ್ಕಾರದಿಂದ ಬಂಫರ್ ಗಿಫ್ಟ್: ಮಕ್ಕಳಿಗೆ ಶೈಕ್ಷಣಿಕ ಕಿಟ್ ವಿತರಣೆಗೆ ಸಂಪುಟ ಅನುಮೋದನೆ

30/04/2026 9:30 PM

ಇಂದು ಸಿಎಂ ಸಿದ್ಧರಾಮಯ್ಯ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯ ಪ್ರಮುಖ ಹೈಲೈಟ್ಸ್ ಇಲ್ಲಿವೆ ಓದಿ! Karnataka Cabinet Meeting

30/04/2026 9:05 PM

BREAKING: ಸಾಗರದಲ್ಲಿ ಅಣುಸ್ಥಾವರ ಸ್ಥಾಪನೆ ಯೋಜನೆ ಕೈಬಿಡುವಂತೆ ಸಿಎಂ ಭೇಟಿಯಾಗಿ ಶಾಸಕ ಗೋಪಾಲಕೃಷ್ಣ ಬೇಳೂರು ಮನವಿ

30/04/2026 8:57 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.