ಬೆಂಗಳೂರು: ಮುಡಾ ಹಗರಣದಲ್ಲಿ ಸಿಎಂ ಸಿದ್ಧರಾಮಯ್ಯ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ-ಜೆಡಿಎಸ್ ನಾಯಕರಿಂದ ಮೈಸೂರು ಪಾದಯಾತ್ರೆ ನಡೆಸಲಾಗುತ್ತಿದೆ. ಈ ಬೆನ್ನಲ್ಲೇ ರಾಜಭವನಕ್ಕೆ ಮುಡಾ ಹಗರಣ ಸಂಬಂಧ ದೂರುದಾರ ಟಿಜೆ ಅಬ್ರಾಹಂ ಅವರು ಭೇಟಿ ನೀಡಿದ್ದು, ತೀವ್ರ ಕುತೂಹಲ ಮೂಡಿಸಿದೆ.
ಇಂದು ಸಿಎಂ ಸಿದ್ಧರಾಮಯ್ಯ ವಿರುದ್ಧದ ಮುಡಾ ಹಗರಣ ಸಂಬಂಧ ರಾಜ್ಯಪಾಲರಿಗೆ ಸಾಮಾಜಿಕ ಹೋರಾಟಗಾರ ಟಿ.ಜೆ ಅಬ್ರಾಹಂ ದೂರು ನೀಡಿದ್ದರು. ಈ ದೂರಿನ ಬಳಿಕ ಇಂದು ರಾಜಭವನಕ್ಕೆ ಭೇಟಿಯಾಗಿದ್ದಾರೆ.
ಸಿಎಂ ವಿರುದ್ಧದ ದೂರುದಾರ ಟಿಜೆ ಅಬ್ರಾಹಂ ಅವರು ರಾಜಭವನದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಭೇಟಿಯಾಗಿ, ಮುಡಾ ಹಗರಣದ ಕುರಿತಂತೆ ಚರ್ಚೆ ನಡೆಸಿದ್ದಾರೆ ಎನ್ನಲಾಗುತ್ತಿದೆ.
ಒಂದೆಡೆ ಬಿಜೆಪಿ-ಜೆಡಿಎಸ್ ಮುಡಾ ಪಾದಯಾತ್ರೆಯನ್ನು ನಡೆಸುತ್ತಿದ್ದರೇ, ಮತ್ತೊಂದೆಡೆ ದೂರು ದಾರ ಅಬ್ರಾಹಂ ರಾಜಭವನಕ್ಕೆ ಭೇಟಿ ನೀಡಿದ್ದು ತೀವ್ರ ಕುತೂಹಲ ಮೂಡಿಸಿದೆ. ಹಾಗಾದ್ರೇ ರಾಜ್ಯಪಾಲರು ಸಿಎಂ ಸಿದ್ಧರಾಮಯ್ಯ ವಿರುದ್ಧ ಮತ್ತೆ ಮುಡಾ ಹಗರಣ ಸಂಬಂಧ ಯಾವ ಕ್ರಮ ವಹಿಸಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.
BREAKING: ರಾಜ್ಯದಲ್ಲಿ ಬೆಚ್ಚಿ ಬೀಳಿಸೋ ಘಟನೆ: ‘ಪಬ್’ನಲ್ಲೇ ಯುವತಿಯ ಮಾನಭಂಗಕ್ಕೆ ಯತ್ನ, ನಾಲ್ವರು ಕಾಮುಕರು ಅರೆಸ್ಟ್
BREAKING : `CM ಸಿದ್ದರಾಮಯ್ಯ’ ವಿರುದ್ಧ ರಾಜ್ಯಪಾಲರಿಗೆ ಮತ್ತೊಂದು ದೂರು ಸಲ್ಲಿಕೆ!