ಬೆಂಗಳೂರು : ಪತ್ನಿಯ ಕಿರುಕುಳಕ್ಕೆ ಬೇಸತ್ತು ಮದುವೆಯಾದ ಮೂರೇ ತಿಂಗಳಿಗೆ ಗಂಡ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಉಳ್ಳಾಲದ ಎಂವಿ ಲೇಔಟ್ ನಲ್ಲಿ ನಡೆದಿದೆ.
ಮಹೇಶ್ವರ್ ಎಂಬಾತ ಪತ್ನಿಯ ಕಿರುಕುಳಕ್ಕೆ ಬೇಸತ್ತು ಮದುವೆಯಾದ ಮೂರೇ ತಿಂಗಳಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮಹೇಶ್ವರ್ ಹಾಗೂ ಕವನಾ ಎಂಬುವವರ ಮದುವೆ ನಡೆದು ಮೂರು ತಿಂಗಳು ಆಗಿತ್ತು , ಮೊದಲು ಮೊದಲು ಬಹಳ ಚೆನ್ನಾಗಿತ್ತು, ಆದರೆ ಬರು ಬರುತ್ತಾ ಹೆಂಡತಿ ಗಂಡನಿಗೆ ದುಬಾರಿ ಬೆಲೆಯ ಚಿನ್ನ ಕೊಡಿಸುವಂತೆ ಒತ್ತಾಯಿಸುತ್ತಿದ್ದಳು, ಇದಕ್ಕೆ ಗಂಡ ಒಪ್ಪದಿದ್ದಾಗ ಆಕೆ ಆತ್ಮಹತ್ಯೆ ಮಾಡಿಕೊಳ್ಳುವಂತೆ ನಿಂದಿಸುತ್ತಿದ್ದಳು ಹಾಗೆಯೇ ಮಾನಸಿಕವಾಗಿ ಚಿತ್ರಹಿಂಸೆ ಕೊಡುತ್ತಿದ್ದಳು ಎಂದು ಯುವಕನ ಪೋಷಕರು ದೂರಿದ್ದಾರೆ.
ಈ ಹಿನ್ನೆಲೆ ಮಹೇಶ್ವರ್ ಮನನೊಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಜ್ಞಾನ ಭಾರತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
JOB ALERT : ಉದ್ಯೋಗಾಂಕ್ಷಿಗಳೇ ಗಮನಿಸಿ : ನಾಳೆ ಉಡುಪಿಯಲ್ಲಿ ಉದ್ಯೋಗ ಮೇಳ ಆಯೋಜನೆ