ಮುಂಬೈ: ಶ್ರೀಲಂಕಾದಲ್ಲಿ ನಡೆಯಲಿರುವ ಮುಂಬರುವ ಏಕದಿನ ತ್ರಿಕೋನ ಸರಣಿಗಾಗಿ ಭಾರತ ‘ಎ’ ತಂಡವನ್ನು ಬಿಸಿಸಿಐ (BCCI) ಗುರುವಾರ ಪ್ರಕಟಿಸಿದೆ. ಯುವ ಬ್ಯಾಟಿಂಗ್ ತಾರೆ ತಿಲಕ್ ವರ್ಮಾ ಅವರಿಗೆ ತಂಡದ ನಾಯಕತ್ವದ ಜವಾಬ್ದಾರಿ ನೀಡಲಾಗಿದ್ದು, ಇತ್ತೀಚೆಗೆ ಐಪಿಎಲ್‌ನಲ್ಲಿ ಮಿಂಚಿದ್ದ 15 ವರ್ಷದ ಅಚ್ಚರಿಯ ಆಯ್ಕೆ ವೈಭವ್ ಸೂರ್ಯವಂಶಿ ಎಲ್ಲರ ಗಮನ ಸೆಳೆದಿದ್ದಾರೆ.
ಹೈದರಾಬಾದ್‌ನ ಸ್ಟಾರ್ ಆಟಗಾರ ತಿಲಕ್ ವರ್ಮಾ ತಂಡವನ್ನು ಮುನ್ನಡೆಸಲಿದ್ದು, ರಾಜಸ್ಥಾನ್ ರಾಯಲ್ಸ್‌ನ ರಿಯಾನ್ ಪರಾಗ್ ಅವರನ್ನು ಉಪನಾಯಕನನ್ನಾಗಿ ನೇಮಿಸಲಾಗಿದೆ.
ಐಪಿಎಲ್ 2026ರಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಅಬ್ಬರಿಸಿದ್ದ 15 ವರ್ಷದ ಬಿಹಾರದ ಹುಡುಗ ವೈಭವ್ ಸೂರ್ಯವಂಶಿ ಅವರಿಗೆ ಮೊದಲ ಬಾರಿಗೆ ಭಾರತ ‘ಎ’ ತಂಡದಲ್ಲಿ ಸ್ಥಾನ ಸಿಕ್ಕಿದೆ.
ಸರಣಿಯ ವಿವರ: ಈ ತ್ರಿಕೋನ ಸರಣಿಯಲ್ಲಿ ಭಾರತ ‘ಎ’, ಶ್ರೀಲಂಕಾ ‘ಎ’ ಮತ್ತು ಅಫ್ಘಾನಿಸ್ತಾನ ‘ಎ’ ತಂಡಗಳು ಮುಖಾಮುಖಿಯಾಗಲಿವೆ. ಪಂದ್ಯಗಳು ಜೂನ್ 9 ರಿಂದ ಆರಂಭವಾಗಲಿದ್ದು, ದಂಬುಲಾದಲ್ಲಿ ನಡೆಯಲಿವೆ.
ಭಾರತ ‘ಎ’ ತಂಡದ ಪಟ್ಟಿ:
ತಿಲಕ್ ವರ್ಮಾ (ನಾಯಕ), ರಿಯಾನ್ ಪರಾಗ್ (ಉಪನಾಯಕ), ವೈಭವ್ ಸೂರ್ಯವಂಶಿ, ಪ್ರಿಯಾಂಶ್ ಆರ್ಯ, ಆಯುಷ್ ಬದೋನಿ, ನಿಶಾಂತ್ ಸಿಂಧು, ಹರ್ಷ್ ದುಬೆ, ಸೂರ್ಯಾಂಶ್ ಶೇಡ್ಗೆ, ಪ್ರಭ್‌ಸಿಮ್ರಾನ್ ಸಿಂಗ್ (ವಿಕೆಟ್ ಕೀಪರ್), ಕುಮಾರ್ ಕುಶಾಗ್ರ (ವಿಕೆಟ್ ಕೀಪರ್), ವಿಪ್ರಾಜ್ ನಿಗಮ್, ಯಶ್ ಠಾಕೂರ್, ಯುದ್ವೀರ್ ಸಿಂಗ್, ಅನ್ಶುಲ್ ಕಾಂಬೋಜ್ ಮತ್ತು ಅರ್ಷದ್ ಖಾನ್.








