ಧಾರವಾಡ : ಹುಬ್ಬಳ್ಳಿಯ ಈದ್ಗಾ ಮೈದಾನ ವಿವಾದ ಮುಗಿಯುವ ಹಾಗೆ ಕಾಣುತ್ತಿಲ್ಲ, ಇತ್ತೀಚೆಗೆ ಈ ಮೈದಾನದಲ್ಲಿ ಭಾರೀ ವಿವಾದದ ಬಳಿಕ ಗಣೇಶೋತ್ಸವ ಆಚರಿಸಲಾಗಿದೆ. ಇದೀಗ ಟಿಪ್ಪು ಜಯಂತಿ ಆಚರಣೆಗೆ ಮನವಿ ಮಾಡಲಾಗಿದೆ.
ಮೈದಾನದಲ್ಲಿ ಟಿಪ್ಪು ಜಯಂತಿ ಆಚರಿಸಲು ಅನುಮತಿ ನೀಡಬೇಕೆಂದು ಆಲ್ ಇಂಡಿಯಾ ಮಜ್ಲಿಸ್ ಎ ಇತ್ತೇಹಾದುಲ್ ಮುಸ್ಲಿಮೀನ್ ಹಾಗೂ ಸಮತಾ ಸೈನಿಕದಳ ಕಾರ್ಯಕರ್ತರು ಹುಬ್ಬಳ್ಳಿ=ಧಾರವಾಡ ಮಹಾನಗರ ಪಾಲಿಕೆ ಆಯುಕ್ತರಿಗೆ ಮನವಿ ಮಾಡಿದ್ದಾರೆ.
ಇತ್ತೀಚೆಗೆ ಭಾರೀ ವಿವಾದ ಹುಟ್ಟು ಹಾಕಿದ್ದ ಈದ್ಗಾ ಮೈದಾನದಲ್ಲಿ ಗಣೇಶೋತ್ಸವಕ್ಕೆ ಅನುಮತಿ ನೀಡಲಾಗಿತ್ತು, ಇದೀಗ ಟಿಪ್ಪು ಜಯಂತಿ ಆಚರಣೆಗೂ ಅವಕಾಶ ನೀಡುವಂತೆ ಮನವಿ ಸಲ್ಲಿಸಲಾಗಿದ್ದು,ಇದಕ್ಕೆ ಪಾಲಿಕೆ ಹೇಗೆ ರಿಯಾಕ್ಟ್ ಮಾಡುತ್ತೋ ಕಾದು ನೋಡಬೇಕಾಗಿದೆ.
ಹಲವು ದಶಕಗಳಿಂದ ಜಮೀನಿನ ವಿವಾದವಿದ್ದು, ಹಿಂದೆ ಮೈಸೂರಿನ ರಾಜಮನೆತನದ ಒಡೆಯರ್ ಕುಟುಂಬದಿಂದ 10 ಎಕರೆಗೂ ಹೆಚ್ಚು ಭೂಮಿಯನ್ನು ಮುಸ್ಲಿಂ ಸಮುದಾಯಕ್ಕೆ ಸ್ಮಶಾನಕ್ಕಾಗಿ ಹಾಗೂ ಈದ್ಗಾಗಾಗಿ ನೀಡಲಾಗಿತ್ತು. ಈದ್ಗಾ ಮುಸ್ಲಿಂ ಸಮುದಾಯಕ್ಕೆ ವರ್ಷಕ್ಕೆ ಎರಡು ಬಾರಿ ಈದ್ ಪ್ರಾರ್ಥನೆಗಳನ್ನು ಸಲ್ಲಿಸಲು ಅವಕಾಶ ನೀಡಲಾಗಿತ್ತು.
ತುಮಕೂರು ಆಸ್ಪತ್ರೆಯಲ್ಲಿ ಅಮಾನವೀಯ ಘಟನೆ : ಇದು ಸರ್ಕಾರಿ ಪ್ರಾಯೋಜಿತ ಹತ್ಯೆ : ಪ್ರಿಯಾಂಕ ಖರ್ಗೆ ವಾಗ್ಧಾಳಿ