ಬೆಂಗಳೂರು : ಈ ಬಾರಿ ಹೊಸ ವರ್ಷಾಚರಣೆ ಹಿನ್ನೆಲೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ,ಬಿಗಿ ಪೊಲೀಸ್ ಭದ್ರತೆ ಇರಲಿದೆ ನಾಲ್ಕು ಸಾವಿರ ಕ್ಯಾಮರಾ ಅಳವಡಿಸಲಾಗುತ್ತದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
ನಗರದ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಇಂದು ಹಿರಿಯ ಪೊಲೀಸರ ಜೊತೆ ಗೃಹ ಸಚಿವರು ಸಭೆ ನಡೆಸಿದರು. ಸಭೆ ಬಳಿಕ ಮಾತನಾಡಿದ ಗೃಹ ಸಚಿವ ಆರಗ ಜ್ಞಾನೇಂದ್ರ ಕೊರೊನಾದಿಂದ ಕಳೆದ ಎರಡು ವರ್ಷಗಳಿಂದ ಹೊಸ ವರ್ಷಾಚರಣೆ ಮಾಡಲು ಸಾಧ್ಯವಾಗಲಿಲ್ಲ. ಈ ವರ್ಷ ಜೋರಾಗಿ ಮಾಡುವ ಸಾದ್ಯತೆ ಇದೆ. ಪೊಲೀಸ್ ಬಿಗಿ ಭದ್ರತೆ ಇರಲಿದೆ. . ಮಾದಕ ವಸ್ತುಗಳನ್ನು ಸೇವನೆ ಮಾಡಿದರೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಅನುಮತಿ ಪಡೆಯದೆ ಕ್ಲಬ್, ಪಬ್ ಮತ್ತು ಕ್ಯಾಬರೆಗಳನ್ನು ತೆಗೆದರೇ ಮುಚ್ಚಲೇಬೇಕು ಎಂದು ಎಚ್ಚರಿಕೆ ನೀಡಿದರು.
ನಗರದಲ್ಲಿ ಪೊಲೀಸರು ಉತ್ತಮ ಕೆಲಸ ಮಾಡಿದ್ದಾರೆ. ಒಂದು ವರ್ಷದಲ್ಲಿ ಇದುವರೆಗೆ 78 ಕೋಟಿ ರೂ. ಮೌಲ್ಯದ ಡ್ರಗ್ಸ್ ಜಪ್ತಿ ಮಾಡಲಾಗಿದೆ. ಜೊತೆಗೆ 68 ವಿದೇಶಿಗರನ್ನು ಗಡಿಪಾರು ಮಾಡಲಾಗಿದೆ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಬಗ್ಗೆ ಚರ್ಚಿಸಿದ್ದೇವೆ. ಹೊಸದಾಗಿ 4 ಸಂಚಾರಿ ಉಪ ವಿಭಾಗಗಳ ರಚನೆ ಮಾಡಲಾಗಿದೆ. ಎರಡು ಕಾನೂನು ಸುವ್ಯವಸ್ಥೆ ಉಪ ವಿಭಾಗಗಳನ್ನು ಮಾಡಿದ್ದೇವೆ ಎಂದು ಹೇಳಿದರು.ಶೀಘ್ರವೇ ವಿಧಿವಿಜ್ಞಾನ ಪ್ರಯೋಗಾಲಯ ಡಿಜಿಟಲ್ ಆಗಲಿದೆ . ಶೀಘ್ರವೇ ವಿಧಿವಿಜ್ಞಾನ ಪ್ರಯೋಗಾಲಯ ಡಿಜಿಟಲ್ ಆಗಲಿದೆ, ಹೊಸದಾಗಿ 4 ಉಪಸಂಚಾರಿ ವಿಭಾಗ ಸ್ಥಾಪನೆ ಮಾಡಲಾಗಿದೆ . ವಿಧಿವಿಜ್ಞಾನ ಪ್ರಯೋಗಾಲಯವನ್ನು ಡಿಜಿಟಲ್ ಮಾಡಲಿದ್ದೇವೆ. 50 ಜಂಕ್ಷನ್ಗಳಲ್ಲಿ ಐಟಿಎಂಎಸ್ ಹಾಕಲಾಗಿದೆ ಎಂದು ಸಚಿವರು ಹೇಳಿದರು.
‘KRS’ ಡ್ಯಾಂ ಗೇಟ್ ಮುಟ್ಟಬೇಡಿ, ಶಾಪ ಇದೆ ಎಂದು ಹೆದರಿಸಿದ್ರು : ಸಿಎಂ ಬೊಮ್ಮಾಯಿ