ಕೆ ಎನ್ ಎನ್ ಡಿಜಿಟಲ್ ಡೆಸ್ಕ್ : ಮಹಾರಾಷ್ಟ್ರದ ವಿದರ್ಭ ವಲಯದ ಗಡ್ ಚಿರೋಲಿ ಮತ್ತು ಚಂದ್ರಪುರ ಜಿಲ್ಲೆಯಲ್ಲಿ 13 ಜನರನ್ನು ಕೊಂದಿದ್ದ ನರ ಭಕ್ಷಕ ಹುಲಿಯನ್ನು ಕೊನೆಗೂ ಸೆರೆ ಹಿಡಿಯಲಾಗಿದೆ, ಈ ಮೂಲಕ ಜನರನ್ನು ನರಭಕ್ಷಕ ಹುಲಿಯ ಕಪಿಮುಷ್ಠಿಯಿಂದ ರಕ್ಷಿಸಲಾಗಿದೆ.
ಅರಣ್ಯ ಇಲಾಖೆಯ ಮೂಲಗಳ ಪ್ರಕಾರ, ಹುಲಿ ದಾಳಿಯಲ್ಲಿ ಇದುವರೆಗೆ 13 ಜನರು ಸಾವನ್ನಪ್ಪಿದ್ದಾರೆ. ಗುರುವಾರ, ಅರಣ್ಯ ಅಧಿಕಾರಿಗಳು ಚುಚ್ಚುಮದ್ದನ್ನು ಎಸೆಯುವ ಮೂಲಕ ಹುಲಿಯನ್ನು ಪಂಜರದಲ್ಲಿ ಸಿಲುಕಿಸಿದರು. ನಂತರ ಅದನ್ನು ರೆಕ್ಯೂ ಸೆಂಟರ್ ಗೆ ಸ್ಥಳಾಂತರಿಸಲಾಗುವುದು ಎಂದು ತಿಳಿದು ಬಂದಿದೆ.
ಈ ಹುಲಿಯು ಚಂದ್ರಾಪುರ ಜಿಲ್ಲೆಯ ವಾಡ್ಸಾದಲ್ಲಿ ಆರು ಜನರನ್ನು, ಬಂಡಾರಾದಲ್ಲಿ ನಾಲ್ವರನ್ನಿ ಹಾಗೂ ಬ್ರಹ್ಮಪುರಿ ಅರಣ್ಯ ವ್ಯಾಪ್ತಿಯಲ್ಲಿ ಮೂವರನ್ನು ಕೊಂದಿತ್ತು. ಅಕ್ಟೋಬರ್ 4 ರಂದು ಸಭೆ ನಡೆಸಿದ್ದಅಧಿಕಾರಿಗಳು ಹುಲಿ ಹಿಡಿಯುವುದಕ್ಕೆ ಕಾರ್ಯಾಚರಣೆ ನಡೆಸಿದ್ದರು.
ತೂಕ ಇಳಿಸಲು ಸರ್ಕಸ್ ಮಾಡ್ತಿದ್ದೀರಾ? ಊಟದ ಸಮಯದಲ್ಲಿ ಈ 5 ಅಧಿಕ ಪ್ರೋಟೀನ್ ಸ್ನ್ಯಾಕ್ಸ್ ಸೇವಿಸಿ | Weight Loss Tips
BIGG NEWS : ಹುಬ್ಬಳ್ಳಿಯಲ್ಲಿ ಘೋರ ದುರಂತ : ಮಾಂಸಗಂಡಿಯಲ್ಲಿಅನುಮಾನ್ಪದವಾಗಿ ವ್ಯಕ್ತಿ ಸಾವು