ಬೆಂಗಳೂರು: ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಕ್ಷಣಗಣನೆ ಆರಂಭಗೊಂಡಿದೆ. ದಸರಾ ಗೋಲ್ಟ್ ಪಾಸ್ ಸೇರಿದಂತೆ ವಿವಿಧ ಪಾಸ್ ಗಳ ದರವನ್ನು ಪ್ರಕಟಿಸಲಾಗಿತ್ತು. ಈಗ ಯುವ ದಸರಾ ವೀಕ್ಷಣೆಗೂ ಟಿಕೆಟ್ ನಿಗದಿ ಗೊಳಿಸಲಾಗಿದೆ. ಇಂದಿನಿಂದ ಆನ್ ಲೈನ್ ನಲ್ಲಿ ಖರೀದಿಸಲು ಅವಕಾಶ ನೀಡಲಾಗಿದೆ.
ಈ ಬಾರಿ ಮೈಸೂರು ಹೊರವಲಯದ ಉತ್ತನಹಳ್ಳಿ ಸಮೀಪ ಆಯೋಜಿಸಿರುವ ‘ಯುವ ದಸರಾ’ ಕಾರ್ಯಕ್ರಮ ವೀಕ್ಷಣೆಗೆ ಇದೇ ಮೊದಲ ಬಾರಿಗೆ ಟಿಕೆಟ್‌ಗಳ ಮಾರಾಟಕ್ಕೆ ಜಿಲ್ಲಾಡಳಿತ ಕ್ರಮ ಕೈಗೊಂಡಿದೆ.
ದಸರಾವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದ್ದು, ಅ.6ರಿಂದ 10ರವರೆಗೆ ನಿತ್ಯ ಸಂಜೆ 6ರಿಂದ 10ರವರೆಗೆ ಯುವ ದಸರಾ ಕಾರ್ಯಕ್ರಮ ಗಳನ್ನು ಆಯೋಜಿಸಲಾಗಿದೆ. ಅ.6ರಂದು ಚಲನಚಿತ್ರ ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಉದ್ಘಾಟಿಸಲಿದ್ದಾರೆ.
‘ಟಿಕೆಟ್‌ಗಳನ್ನು ಸೆ.27ರಿಂದ ಆನ್‌ಲೈನ್‌ನಲ್ಲಿ ದಸರಾದ ಅಧಿಕೃತ ಜಾಲತಾಣವಾದ mysoredasara.gov.in ಹಾಗೂ Book My Show ಮೂಲಕ ಖರೀದಿಸಬಹುದು. ವೀಕ್ಷಕರ ಗ್ಯಾಲರಿ–1 (ವೇದಿಕೆ ಸಮೀಪ) ಟಿಕೆಟ್ ಮುಖಬೆಲೆ ₹8 ಸಾವಿರ ಹಾಗೂ ವೀಕ್ಷಕರ ಗ್ಯಾಲರಿ–2ರ ಟಿಕೆಟ್‌ಗಳ ಮುಖಬೆಲೆ ₹5 ಸಾವಿರ ನಿಗದಿಪಡಿಸಲಾಗಿದೆ. ಒಂದು ಟಿಕೆಟ್‌ನಲ್ಲಿ ಒಬ್ಬರಿಗೆ ಒಂದು ಕಾರ್ಯಕ್ರಮಕ್ಕೆ ಮಾತ್ರ ಪ್ರವೇಶ (ನಿಗದಿತ ಗ್ಯಾಲರಿಯಲ್ಲಿ) ಅವಕಾಶವಿರುತ್ತದೆ’ ಎಂದು ದಸರಾ ವಿಶೇಷಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ ತಿಳಿಸಿದ್ದಾರೆ.
ಈ ಬಾರಿ ಮೈಸೂರು ಹೊರವಲಯದ ಉತ್ತನಹಳ್ಳಿ ಸಮೀಪ ಆಯೋಜಿಸಿರುವ ‘ಯುವ ದಸರಾ’ ಕಾರ್ಯಕ್ರಮ ವೀಕ್ಷಣೆಗೆ ಇದೇ ಮೊದಲ ಬಾರಿಗೆ ಟಿಕೆಟ್‌ಗಳ ಮಾರಾಟಕ್ಕೆ ಜಿಲ್ಲಾಡಳಿತ ಕ್ರಮ ಕೈಗೊಂಡಿದೆ.
ದಸರಾವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದ್ದು, ಅ.6ರಿಂದ 10ರವರೆಗೆ ನಿತ್ಯ ಸಂಜೆ 6ರಿಂದ 10ರವರೆಗೆ ಯುವ ದಸರಾ ಕಾರ್ಯಕ್ರಮ ಗಳನ್ನು ಆಯೋಜಿಸಲಾಗಿದೆ. ಅ.6ರಂದು… pic.twitter.com/XCAL6DaDKV
— DIPR Karnataka (@KarnatakaVarthe) September 26, 2024
‘ಪ್ರೌಢ ಶಾಲಾ ವಿದ್ಯಾರ್ಥಿ’ಗಳಿಗೆ ಗುಡ್ ನ್ಯೂಸ್: ರಾಜ್ಯ ಸರ್ಕಾರದಿಂದ ‘ಇಂಟರ್ನೆಟ್’ ನೀಡಲು ನಿರ್ಧಾರ