ನವದೆಹಲಿ: ಪಶ್ಚಿಮ ಬಂಗಾಳದ ಗಂಗಾಸಾಗರ ಮೇಳಕ್ಕೆ ತೆರಳುತ್ತಿದ್ದ ಉತ್ತರ ಪ್ರದೇಶದ ಮೂವರು ಸಾಧುಗಳನ್ನು ಗುರುವಾರ ಸಂಜೆ ಗುಂಪೊಂದು ಥಳಿಸಿದೆ. ಸಾಧುಗಳು ಅಪಹರಣಕಾರರು ಎಂದು ಶಂಕಿಸಲಾದ ನಂತರ ಬಂಗಾಳದ ಪುರುಲಿಯಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.
ಮಕರ ಸಂಕ್ರಾಂತಿ ಹಬ್ಬಕ್ಕಾಗಿ ಸಾಧುಗಳು – ಒಬ್ಬ ವ್ಯಕ್ತಿ ಮತ್ತು ಅವರ ಇಬ್ಬರು ಪುತ್ರರು ಗಂಗಾಸಾಗರವನ್ನು ತಲುಪಲು ವಾಹನವನ್ನು ಬಾಡಿಗೆಗೆ ಪಡೆದಿದ್ದರು ಎನ್ನಲಾಗಿದೆ. ಅವರು ಮಾರ್ಗದ ಬಗ್ಗೆ ವಿಚಾರಿಸುತ್ತಿದ್ದಂತೆ, ಕೆಲವು ಸ್ಥಳೀಯರು ಅನುಮಾನಗೊಂಡರು ಬಳಿಕ ಅವರು ಸರಿಯಾದ ಉತ್ತರ ನೀಡದ ಹಿನ್ನಲೆಯಲ್ಲಿ ಉದ್ರಿಕ್ತ ಜನಸಮೂಹಕ್ಕೆ ಕಾರಣವಾಯಿತು. ಅವರು ಸಾಧುಗಳ ಮೇಲೆ ಮತ್ತಷ್ಟು ಹಲ್ಲೆ ನಡೆಸಿದರು ಎನ್ನಲಾಗಿದೆ.