ಚಿತ್ರದುರ್ಗ : ಇಂದು ಭೀಕರ ಅಪಘಾತದಲ್ಲಿ ಮೂವರು RSI ಅಧಿಕಾರಿಗಳ ಸಾವು ಪ್ರಕರಣಕ್ಕೆ ಸಂಬಂಧಪಟ್ಟಂತೆ ಗೃಹ ಸಚಿವ ಜಿ ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದು ಚಿತ್ರದುರ್ಗ ಜಿಲ್ಲೆಯ ಹೆಗ್ಗೆರೆ ಬಳಿ ಸಂಭವಿಸಿದ ಅಪಘಾತದಲ್ಲಿ ಮೂವರು ಆರ್ ಎಸ್ಐ ಗಳು ಸಾವನ್ನಪ್ಪಿದ್ದಾರೆ. ಮತ್ತಿಬ್ಬರು ಗಾಯಗೊಂಡಿದ್ದು ಚಿಕಿಸಿ ಪಡೆಯುತ್ತಿದ್ದಾರೆ ಎಂದು ತಿಳಿಸಿದರು.
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಹೆಗ್ಗೆರೆ ಗ್ರಾಮದಲ್ಲಿ ಮಾಧ್ಯಮಗಳು ಮಾತನಾಡಿದ ಅವರು, ಮದುವೆ ಕಾರ್ಯಕ್ರಮಕ್ಕೆ ಎಂದು ಬಳ್ಳಾರಿಗೆ ಐವರು ಆರ್ಎಸ್ಐ ಅಧಿಕಾರಿಗಳು ತೆರಳುತ್ತಿದ್ದರು. ಎಲ್ಲರೂ ಇತ್ತೀಚಿಗೆ ನೇಮಕ ಆಗಿರುವ ಪೊಲೀಸ ಅಧಿಕಾರಿಗಳಾಗಿದ್ದಾರೆ. ನಿಧಾನಗತಿಯಲ್ಲಿ ಹೋಗುತ್ತಿದ್ದ ಲಾರಿಗೆ ಹಿಂಬದಿಯಿಂದ ಕಾರು ಡಿಕ್ಕಿ ಹೊಡೆದಿದೆ.
ಮೃತರ ಕುಟುಂಬಕ್ಕೆ ನಿಯಮಾನುಸಾರ ಪರಿಹಾರ ನೀಡುತ್ತೇವೆ. ಪೊಲೀಸ್ ಅಧಿಕಾರಿಗಳು ರಜೆಯಲ್ಲಿದ್ದಾಗ ಈ ಘಟನೆ ನಡೆದಿದೆ. ರಜೆಯಲ್ಲಿದ್ದಾಗ ದುರಂತ ನಡೆದಿದ್ದು, ಯಾವ ರೀತಿ ನೆರವು ನೀಡಬಹುದು. ಈ ಬಗ್ಗೆ ವಿಚಾರಿಸಿ ಸರ್ಕಾರದಿಂದ ನೆರವು ನೀಡಲಾಗುವುದು. ಮಾನವೀಯತೆಯಿಂದ ಉತ್ತರ ಕುಟುಂಬಕ್ಕೆ ನೆರವು ನೀಡುತ್ತೇವೆ ಎಂದು ಗೃಹ ಸಚಿವ ಜಿ. ಪರಮೇಶ್ವರ್ ಘೋಷಣೆ ಮಾಡಿದರು.







