ಹಾಸನ: ಜಿಲ್ಲೆಯಲ್ಲಿ ಪ್ರಿಯಕರನ ಜೊತೆಗೆ ಸೇರಿ ಪತಿಯನ್ನು ಕೊಂದಿದ್ದಂತ ಪತ್ನಿ ಸೇರಿದಂತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಹಾಸನ ಗ್ರಾಮಾಂತರ ಠಾಣೆಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಜುಲೈ.5ರಂದು ಮಧು(36) ಎಂಬಾತನನ್ನು ಕೊಲೆಗೈದು ಶವ ಬಿಸಾಡಿ ಹೋಗಲಾಗಿತ್ತು. ಹತ್ಯೆಗೀಡಾಗಿದ್ದ ಮಧು ಪತ್ನಿ ಭವ್ಯ, ಅವರ ತಾಯಿ ಜಯಂತಿ, ಪ್ರಿಯಕರ ಮೋಹನ್ ಕುಮಾರ್ ನನ್ನು ಈ ಪ್ರಕರಣದಲ್ಲಿ ಬಂಧಿಸಿದ್ದಾರೆ.
ಹಾಸನ ಜಿಲ್ಲೆಯ ಆಲೂರು ಮೂಲದ ಮೋಹನ್ ಜೊತೆಗೆ ಭವ್ಯ ಅಕ್ರಮ ಸಂಬಂಧ ಹೊಂದಿದ್ದರು ಎನ್ನಲಾಗುತ್ತಿದೆ. ಕಳೆದ ಎರಡು ವರ್ಷದಿಂದ ಮೋಹನ್ ಕುಮಾರ್ ಜೊತೆಗೆ ಭವ್ಯ ಸಂಬಂಧ ಹೊಂದಿದ್ದರು ಎಂಬುದಾಗಿ ಹೇಳಲಾಗುತ್ತಿದೆ. ತಮ್ಮ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದಂತ ಪತಿ ಮಧುವನ್ನು ಕಂಠಪೂರ್ತಿ ಕುಡಿಸಿ ಉಸಿರುಗಟ್ಟಿಸಿ ಕೊಲೆಗೈದಿದ್ದು. ಆ ಬಳಿಕ ಹೂವಿನಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿ 376ರ ಬಳಿ ಶವ ಎಸೆದಿದ್ದರು.
ಇದಲ್ಲದೇ ಮಧು ಅಪಘಾತದಲ್ಲಿ ಮೃತಪಟ್ಟಿದ್ದಾಗಿ ಬಿಂಬಿಸೋದಕ್ಕೆ ಪತ್ನಿ ಭವ್ಯ ಯತ್ನಿಸಿದ್ದರು. ಆದರೇ ಮಧು ತಾಯಿ ರುಕ್ಮಿಣಿ ತನ್ನ ಮಗನನ್ನು ಹತ್ಯೆ ಮಾಡಿರುವುದಾಗಿ ಹಾಸನ ಗ್ರಾಮಾಂತರ ಪೊಲೀಸರಿಗೆ ದೂರು ನೀಡಿದ್ದರು. ಈ ದೂರು ಆಧರಿಸಿ ತನಿಖೆ ನಡೆಸಿ ಮಧು ಹತ್ಯೆ ಪ್ರಕರಣದಲ್ಲಿ ಪತ್ನಿ ಭವ್ಯ, ತಾಯಿ ಜಯಂತಿ, ಪ್ರಿಯಕರ ಮೋಹನ್ ಕುಮಾರ್ ಬಂಧಿಸಿದ್ದಾರೆ.
BREAKING: ಸಿಎಸ್ ವಿರುದ್ಧ ಅವಹೇಳನಕಾರಿ ಹೇಳಿಕೆ: ‘MLC ಎನ್.ರವಿಕುಮಾರ್’ಗೆ ಜಾಮೀನು ಮಂಜೂರು
ಈಗ ಆಧಾರ್ ಕಾರ್ಡ್ ನವೀಕರಣಕ್ಕೆ ಈ ದಾಖಲೆಗಳು ಕಡ್ಡಾಯ: ಹೀಗಿವೆ UIDAI ಹೊಸ ನಿಯಮಗಳು | Aadhaar Update