ಬಳ್ಳಾರಿ : ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ್ ಗ್ಯಾಂಗಿನ ಮೂವರು ಆರೋಪಿಗಳಿಗೆ ಇದೀಗ ಜಾಮೀನು ಸಿಕ್ಕಿದೆ. ಇದೆ ಸಂದರ್ಭದಲ್ಲಿ ಬಳ್ಳಾರಿ ಜೈಲಿನಲ್ಲಿರುವ ದರ್ಶನ್ ಅವರನ್ನು ನೋಡಲು ಪತ್ನಿ ವಿಜಯಲಕ್ಷ್ಮಿ, ಜೈಲಿಗೆ ಭೇಟಿ ನೀಡಿದ್ದರು. ಈ ವೇಳೆ ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರಿಗೆ ಸಿಕ್ಕಿದೆ ನಿಮಗೂ ಸಿಗುತ್ತದೆ ಆತಂಕ ಪಡಬೇಡಿ ಎಂದು ಧೈರ್ಯ ಹೇಳಿದ್ದಾರೆ ಎಂದು ತಿಳಿದುಬಂದಿದೆ.
ಇಂದು ಬಳ್ಳಾರಿ ಜೈಲಿಗೆ ಭೇಟಿ ನೀಡಿದ ಪತ್ನಿ ವಿಜಯಲಕ್ಷ್ಮಿ ಅವರು, ಕೈದಿಗಳ ಸಂದರ್ಶನ ಕೋಣೆಯಲ್ಲಿ ನಟ ದರ್ಶನ್ ಅವರನ್ನು ಭೇಟಿಯಾದರು. ಈ ವೇಳೆ ಜೈಲಿನಲ್ಲಿ ಸಮಸ್ಯೆಯಾಗುತ್ತಿದೆ. ದಿಂಬು, ಬೆಡ್, ಚೇರ್ ಕೊಡ್ತಿಲ್ಲ ಎಂದು ದರ್ಶನ್ ವಿಜಯಲಕ್ಷ್ಮಿ ಎದುರು ಅಳಲು ತೋಡಿಕೊಂಡಿದ್ದಾರೆ.
ಈ ವೇಳೆ ಪತ್ನಿ ವಿಜಯ್ ಲಕ್ಷ್ಮಿ ವಕೀಲರ ಜೊತೆಗೆ ಚರ್ಚೆ ಮಾಡುವುದಾಗಿ ತಿಳಿಸಿದರು. ಇನ್ನು ಸ್ವಲ್ಪ ದಿನ ಎಲ್ಲಾ ಸರಿಯಾಗುತ್ತೆ ಧೈರ್ಯವಾಗಿರಿ ಎಂದು ದರ್ಶನ್ ಗೆ ಪತ್ನಿ ವಿಜಯಲಕ್ಷ್ಮಿ ಧೈರ್ಯ ತುಂಬಿದರು.ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ನೋಡಿ ಮೂವರಿಗೆ ಬೇಲ್ ಸಿಕ್ಕಿದೆ. ನಿಮಗೂ ಬೇಲ್ ಸಿಗುತ್ತೆ ಆತಂಕ ಬೇಡ ಎಂದು ವಿಜಯಲಕ್ಷ್ಮಿ ದರ್ಶನ್ ಅವರಿಗೆ ಧೈರ್ಯ ತುಂಬಿದ್ದಾರೆ.