ಬೆಂಗಳೂರು : ಬೆಂಗಳೂರಿನ ವಿಧಾನಸೌಧದ ಕೊಠಡಿ ಸಂಖ್ಯೆ 106ರಲ್ಲಿ ರಾಜ್ಯಸಭಾ ಚುನಾವಣೆಗೆ ಮತದಾನ ಆರಂಭಗೊಂಡಿದೆ. ಈವರೆಗೆ ಕಾಂಗ್ರೆಸ್ ಪಕ್ಷದ ಐವರು, ಬಿಜೆಪಿಯ 30 ಹಾಗೂ ಜೆಡಿಎಸ್ ಪಕ್ಷದ ನಾಲ್ವರು ಸೇರಿದಂತೆ 39 ಮಂದಿ ಮತ ಚಲಾಯಿಸಿದ್ದಾರೆ.
ಗಂಡ ಹೆಂಡತಿ ಜಗಳ ಆಡೋದು ಈ ವಿಷಯಕ್ಕೆ; ಆದಷ್ಟು ಈ ಸಂಗತಿಗಳನ್ನು ದೂರಮಾಡಿ
ಇನ್ನು ಮತದಾನ ಮಾಡೋದಕ್ಕೂ ಮುನ್ನ ಮುಖ್ಯಮಂತ್ರಿ ಸಿದ್ದರಾಮಯ್ಯ ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿ ಜೆಡಿಎಸ್ ನಾವೇ ಗೆಲ್ಲುತ್ತೇವೆ ಎಂಬ ವಿಶ್ವಾಸ ವ್ಯಕ್ತಪಡಿಸುತ್ತಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಅವರಿಗೆ ವೋಟ್ ಎಲ್ಲಿದೆ? 45 ವೋಟ್ ಬೇಕಲ್ಲ ಎಲ್ಲಿದೆ? ಅವರಿಗೆ ಆತ್ಮಸಾಕ್ಷಿ ಅಂತ ಮತ ಇದೆಯಾ? ಅವರ ಮತಗಳೇ ನಮಗೆ ಬರುತ್ತಿದೆಯಲ್ಲ ಎಂದರು.
ಸರಣಿ ಅತ್ಯಾಚಾರ ಆರೋಪಿ ಉಮೇಶ್ ರೆಡ್ಡಿಗೆ ಪೆರೋಲ್ ನೀಡಲು ನಿರಾಕರಿಸಿದ ಹೈಕೋರ್ಟ್ | Umesh Reddy
ಅವರಿಗೆ ಮತ ಇಲ್ಲದೆ ಹೋದರು ಕೂಡ ಅಭ್ಯರ್ಥಿ ಗೆಲುವಿಗಾಗಿ ನಮ್ಮ ಶಾಸಕರಿಗೆ ಆಮಿಷ ಒಡ್ಡಿ ಹೆದರಿಕೆ ಹಾಕಿದಕ್ಕೆ ಎಫ್ ಐ ಆರ್ ಹಾಕಲಾಗಿದೆ. ನಮ್ಮ ಅಭ್ಯರ್ಥಿಗಳು ಮೂರು ಜನ ಇದ್ದಾರಲ್ಲ ಮೂರು ಅಭ್ಯರ್ಥಿಗಳು ಗೆಲ್ಲುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರೆ.
‘ಕೆ.ಸಿ ರೆಡ್ಡಿ’ ನೆನೆದ ಸಿಎಂ
ಸ್ವತಂತ್ರ ನಂತರ ಮೈಸೂರು ರಾಜ್ಯದ ಮೊದಲ ಮುಖ್ಯಮಂತ್ರಿ ಆಗಿದ್ದವರು ಕೆ ಸಿ ರೆಡ್ಡಿ. ಸ್ವತಂತ್ರ ನಂತರ ಅಷ್ಟೇ ಅಲ್ಲದೆ ಸ್ವತಂತ್ರ ಪೂರ್ವದಲ್ಲಿ ಕೂಡ ಭಾರತದ ಸ್ವಾತಂತ್ರ್ಯಕ್ಕಾಗಿ ಅವರು ಹೋರಾಡಿದವರು. ಇವತ್ತು ಕರ್ನಾಟಕ ಆರ್ಥಿಕವಾಗಿ ಸಮಾಜಕವಾಗಿ ಬೆಳವಣಿಗೆ ಆಗಿದ್ದರೆ ಅವರ ಹಾಕಿರುವಂತಹ ಅಡಿಪಾಯವೇ ಕಾರಣ ಎಂದು ತಿಳಿಸಿದರು.
BREAKING : ಕಲಬುರ್ಗಿಯಲ್ಲಿ ನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ : ‘ಮಾವ, ಸೊಸೆ’ ಸ್ಥಳದಲ್ಲೇ ದುರ್ಮರಣ
1950ನೇ ಇಸವಿಯಲ್ಲಿ ಸಂವಿಧಾನ ಜಾರಿಗೆ ಬಂತು.ಮೊದಲನೇ ಚುನಾವಣೆ ನಡೆಯುವುದು ಕೆ ಸಿ ರೆಡ್ಡಿ ಅವರು ಆಗ ಮೈಸೂರು ರಾಜ್ಯದ ಮೊದಲ ಮುಖ್ಯಮಂತ್ರಿಯಾದರು. ಅವರು ಜೀವನದಲ್ಲಿ ಆಡಳಿತದ ಬಗ್ಗೆ ಇರಬಹುದು, ಸಾಮಾಜಿಕ ಅಭಿವೃದ್ಧಿ ಕುರಿತು ಇರಬಹುದು ಇಟ್ಟುಕೊಂಡಿದ್ದ ಕನಸನ್ನ ನನಸು ಮಾಡತಕ್ಕಂಥ ಕೆಲಸ ಮಾಡಲಾಗುತ್ತದೆ ಎಂದು ಮುಖ್ಯಮಂತ್ರಿ ತಿಳಿಸಿದರು.