ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ರಾಜ್ಯದಲ್ಲೇ ಬೆಚ್ಚಿ ಬೀಳಿಸೋ ಘಟನೆ ಎನ್ನುವಂತೆ ಒಂದೇ ದಿನ ಮೂವರನ್ನು ಭೀಕರವಾಗಿ ಮರ್ಡರ್ ಮಾಡಲಾಗಿದೆ. ಬೆಳಿಗ್ಗೆ, ರಾತ್ರಿ, ಮಧ್ಯಾಹ್ನದ ಅಂತರದಲ್ಲಿ ಮೂವರನ್ನು ಹತ್ಯೆ ಮಾಡಿರುವಂತ ಶಾಕಿಂಗ್ ಘಟನೆ ನಡೆದಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿಯಲ್ಲಿ ರಾತ್ರಿ, ಬೆಳಿಗ್ಗೆ, ಮಧ್ಯಾಹ್ನದ ಅಂತರದಲ್ಲಿ ಮೂವರನ್ನು ಮರ್ಡರ್ ಮಾಡಲಾಗಿದೆ. ರಾತ್ರಿ ರಾಮಸ್ವಾಮಿ ಎಂಬುವರನ್ನು ಚಾಕುವಿನಿಂದ ಚುಚ್ಚಿ ಕೊಲೆ ಮಾಡಿದ್ದರೇ, ಬೆಳಿಗ್ಗೆ ಮುನೇಪ್ಪ ಎಂಬಾತನನ್ನು ರುಂಡ ಕತ್ತರಿಸಿದ ರೀತಿಯಲ್ಲಿ ಭೀಕರವಾಗಿ ಹತ್ಯೆ ಮಾಡಲಾಗಿದೆ.
ಇನ್ನೂ ಮಧ್ಯಾಹ್ನದ ವೇಳೆಗೆ ಚಿಂತಾಮಣಿಯ ವೆಂಕಟಗಿರಿ ಕೋಟೆ ಬಡಾವಣೆಯಲ್ಲಿ ಅಪರಿಚಿತ ಶವವೊಂದು ಪತ್ತೆಯಾಗಿದೆ. ಈ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿರುವಂತ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಈ ಕೊಲೆಯ ಹಿಂದಿನ ನಿಖರ ಕಾರಣ ಏನು ಅಂತ ತನಿಖೆಯ ನಂತ್ರ ತಿಳಿಯಬೇಕಿದೆ.
KNN Special Story: ಭಾರತದ ಮೊದಲ ‘ವರ್ಟಿಕಲ್ ಲಿಫ್ಟಿಂಗ್ ಸೇತುವೆ’ ಉದ್ಘಾಟನೆಗೆ ಸಿದ್ಧ: ಹೀಗಿದೆ ವಿಶೇಷತೆ