ಬೆಂಗಳೂರು: ನಗರದ ಹೊಸಕೆರೆಹಳ್ಳಿಯಲ್ಲಿ ನಿರ್ಮಾಣ ಹಂತದ ಕಟ್ಟಡದಿಂದ ಬಿದ್ದ ಪರಿಣಾಮ ಮೂವರು ಕೂಲಿ ಕಾರ್ಮಿಕರಿಗೆ ಗಂಭೀರವಾಗಿದೆ. ಬೆಂಗಳೂರಿನ ಹೊಸಕೆರೆಹಳ್ಳಿಯಲ್ಲಿ ದುರ್ಘಟನೆ ನಡೆದಿದೆ.
BIGG NEWS: PSI ನೇಮಕಾತಿ ಹಗರಣ: ಅಮೃತ್ ಪಾಲ್ ಡಬಲ್ ಝೀರೋ ಕೋಡ್ ವರ್ಡ್ ಭೇದಿಸಿದ CID
ಹೊಸಕೆರೆಹಳ್ಳಿಯಲ್ಲಿ ನಿರ್ಮಾಣ ಹಂತದ ಕಟ್ಟಡದಲ್ಲಿ ಸಿಮೆಂಟ್ ಪ್ಲಾಸ್ಟಿಂಗ್ ಕೆಲಸವನ್ನು ಕಾರ್ಮಿಕರು ಮಾಡುತ್ತಿದ್ದರು.,ಈ ವೇಳೆ ಮೂರನೇ ಮಹಡಿಯಿಂದ ಬಿದ್ದು ಮೂವರು ಕೂಲಿ ಕಾರ್ಮಿಕರಿಗೆ ಗಂಭೀರ ಗಾಯವಾಗಿದೆ. ಇದೀಗ ಅವರು ಸ್ಥಿತಿ ಗಂಭೀರವಾಗಿದ್ದು, ಹತ್ತಿರದ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.ಮುಂಜಾಗ್ರತಾ ವಹಿಸದೆ ಕೆಲಸ ಮಾಡುತ್ತಿದ್ದು, ಈ ವೇಳೆ ಸಿಮೆಂಟ್ ಪ್ಲಾಸ್ಟಿಂಗ್ಗೆಂದು ನಿರ್ಮಿಸಿದ್ದ ಬೊಂಬುಗಳು ಮುರಿದು ಅನಾಹುತ ಸಂಭವಿಸಿದೆ. ಈ ಸಂಬಂಧ ಕಾರ್ಮಿಕರು ಚನ್ನಮ್ಮನಕೆರೆ ಅಚ್ಚುಕಟ್ಟು ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.