ಕಲಬುರ್ಗಿ: ರಾಜ್ಯದಲ್ಲಿ ಅಪಘಾತಗಳ ಸರಣಿ ಮುಂದುವರೆದಿದ್ದು, ಜವರಾಯ ಅಟ್ಟಹಾಸ ಮೆರೆದಿದ್ದಾನೆ. ಇಂದು ಟಿಟಿ, ಲಾರಿ, ಬೈಕ್ ನಡುವಿನ ಸರಣಿ ಅಪಘಾತದಲ್ಲಿ ಮೂವರು ದುರ್ಮರಣಹೊಂದಿರುವಂತ ಘಟನೆ ಅಫಜಲಪುರದಲ್ಲಿ ನಡೆದಿದೆ.
ಇಂದು ಸೋಲಾಪುರ ಹಾಗೂ ಕಲಬುರ್ಗಿ ರಾಷ್ಟ್ರೀಯ ಹೆದ್ದಾರಿ 151ರ ಗೊಬ್ಬರ ಬಿ ಗ್ರಾಮದ ಸಮೀಪದಲ್ಲಿ ಉಂಟಾದಂತ ಟಿಟಿ, ಬೈಕ್, ಲಾರಿ ನಡುವಿನ ಸರಣಿ ಅಪಘಾತದಲ್ಲಿ ಮೂವರು ದುರ್ಮರಣ ಹೊಂದಿದ್ದಾರೆ.
ಮೃತರನ್ನು ಕಲಬುರ್ಗಿ ನಗರದ ವಿನಿತಾ, ಅನುಪ್ ಬೆಂಗೇರಿ ಹಾಗೂ ಗೊಬ್ಬುರ ಬಿ ಗ್ರಾಮದ ಬಸವರಾಜ ಎಂಬುದಾಗಿ ಗುರುತಿಸಲಾಗಿದೆ. ಈ ವಿಷಯ ತಿಳಿದು ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕಲಬುರಗಿ ನಗರ ಮೂಲದ ವಿನಿತಾ, ಅನುಪ್ ಸೇರಿ ಸುಮಾರು 8 ಮಂದಿ ಟೆಂಪೋ ಟ್ರಾವಲ್ (ಟಿಟಿ) ವಾಹನದಲ್ಲಿ ದೇವಲ ಗಾಣಗಾಪುರದ ದತ್ತಾತ್ರೇಯ ದರ್ಶನಕ್ಕೆ ಹೋಗಿದ್ದರು. ದೇವರ ದರ್ಶನ ಮಾಡಿಕೊಂಡು ಸಂಜೆ ಮನೆಗೆ ವಾಪಸ್ ಆಗುತ್ತಿದ್ದರು. ಗೊಬ್ಬರ (ಬಿ) ಸಮೀಪ ವಾಹನವನ್ನು ಹಿಂದಿಕ್ಕುವ ಭರದಲ್ಲಿ ಟಿಟಿ ಚಾಲಕ ಎದುರಿನಿಂದ ಬರುತ್ತಿದ್ದ ಕಬ್ಬಿನ ಲಾರಿಗೆ ಡಿಕ್ಕಿ ಹೊಡೆದರು. ಇವುಗಳ ನಡುವೆ ದ್ವಿಚಕ್ರ ವಾಹನ ಸವಾರನೂ ಸಿಲುಕಿಕೊಂಡರು ಎಂದು ಪಿಎಸ್‌ಐ ರಾಹುಲ್ ಪಾವಡೆ ತಿಳಿಸಿದ್ದಾರೆ.
ಶಾಸಕ ಮುನಿರತ್ನ ಮೇಲಿನ ‘ಮೊಟ್ಟೆ ಅಟ್ಯಾಕ್’ ಚಿತ್ರದ ರಚನೆ, ನಿರ್ಮಾಣ ಸ್ವತಃ ಅವರದ್ದೇ: ಕಾಂಗ್ರೆಸ್ ಮುಖಂಡೆ ಕುಸುಮಾ