ಮಂಗಳೂರು: ಮೇರಿಹಿಲ್ ಏರ್ಪೋರ್ಟ್ ರಸ್ತೆಯ ಖಾಸಗಿ ಪಿಯು ಕಾಲೇಜೊಂದರ ಹಾಸ್ಟೆಲ್ನಿಂದ ಹಾಸ್ಟೆಲ್ ಕಿಟಕಿ ಮುರಿದು, ಮೂವರು ವಿದ್ಯಾರ್ಥಿನಿಯರು ಪರಾರಿಯಾಗಿರುವ ಘಟನೆ ನಡೆದಿದೆ.
ಇಬ್ಬರು ವಿದ್ಯಾರ್ಥಿನಿಯರು ಬೆಂಗಳೂರು ನಿವಾಸಿಗಳಾಗಿದ್ದು, ಮತ್ತೋರ್ವ ವಿದ್ಯಾರ್ಥಿನಿ ಚಿತ್ರದುರ್ಗ ಮೂಲದವಳೆಂದು ಗೊತ್ತಾಗಿದೆ. ವಿದ್ಯಾರ್ಥಿನಿಯರು ಪಿಯುಸಿ ಓದುತ್ತಿದ್ದಾರೆ.
“ನಾವು ಹೋಗುತ್ತಿದ್ದೇವೆ, ಕ್ಷಮಿಸಿ” ಎಂದು ಚೀಟಿ ಬರೆದಿಟ್ಟು ಮುಂಜಾನೆ 3 ಗಂಟೆಯ ವೇಳೆಗೆ ಹೋಗಿರುವ ಮಾಹಿತಿ ಲಭ್ಯವಾಗಿದೆ. ಕಂಕನಾಡಿ ನಗರ ಠಾಣಾ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ